ಕರಾಟೆ ಚಾಂಪಿಯನ್ ಬಿಮ್ಲಾ ದುಸ್ಥಿತಿ ವೈರಲ್ ಆದ ಬಳಿಕ ಸರ್ಕಾರಿ ನೌಕರಿ ಘೋಷಿಸಿದ ಜಾರ್ಖಂಡ್ ಸರ್ಕಾರ

ಬಡತನದ ಕಾರಣಕ್ಕೆ ರಾಷ್ಟ್ರೀಯ ಕರಾಟೆ ಪದಕ ವಿಜೇತೆ ರಾಂಚಿಯ ಬಿಮ್ಲಾ ಮುಂಡಾ ಅವರು ಅಕ್ಕಿ ಬಿಯರ್ (ರೈಸ್ ಬಿಯರ್) ಮಾರಾಟ ಮಾಡುತ್ತಿದ್ದ ವರದಿ ವೈರಲ್ ಆದೊಡನೆಯೇ ಜಾರ್ಖಂಡ್ ಸರ್ಕಾರ ಕ್ರೀಡಾಪಟುವಿಗೆ  ಸರ್ಕಾರಿ ನೌಕರಿ ನೀಡುವುದಾಗಿ ಘೋಷಿಸಿದೆ. 

Published: 20th October 2020 12:06 AM  |   Last Updated: 20th October 2020 12:19 PM   |  A+A-


Day after her ordeal made headlines, karate champion Bimla offered govt job by Jharkhand CM

ಕರಾಟೆ ಚಾಂಪಿಯನ್ ಬಿಮ್ಲಾ ದುಸ್ಥಿತಿ ವೈರಲ್ ಆದ ಬಳಿಕ ಸರ್ಕಾರಿ ನೌಕರಿ ಘೋಷಿಸಿದ ಜಾರ್ಖಂಡ್ ಸರ್ಕಾರ

Posted By : Srinivas Rao BV
Source : The New Indian Express

ಬಡತನದ ಕಾರಣಕ್ಕೆ ರಾಷ್ಟ್ರೀಯ ಕರಾಟೆ ಪದಕ ವಿಜೇತೆ ರಾಂಚಿಯ ಬಿಮ್ಲಾ ಮುಂಡಾ ಅವರು ಅಕ್ಕಿ ಬಿಯರ್ (ರೈಸ್ ಬಿಯರ್) ಮಾರಾಟ ಮಾಡುತ್ತಿದ್ದ ವರದಿ ವೈರಲ್ ಆದೊಡನೆಯೇ ಜಾರ್ಖಂಡ್ ಸರ್ಕಾರ ಕ್ರೀಡಾಪಟುವಿಗೆ ಸರ್ಕಾರಿ ನೌಕರಿ ನೀಡುವುದಾಗಿ ಘೋಷಿಸಿದೆ. 

ರಾಜ್ಯಕ್ಕೆ ಪದಕಗಳನ್ನು ಗೆದ್ದು ತಂದಿದ್ದ ಬಿಮ್ಲಾ ಮುಂಡಾ ಸೇರಿದಂತೆ 32 ಅಭ್ಯರ್ಥಿಗಳಿಗೆ ಸರ್ಕಾರಿ ನೌಕರಿ ನೀಡಲು ಈ ಹಿಂದಿನ ಸರ್ಕಾರ ನಿರ್ಧರಿಸಿತ್ತು. ಅದರ ಪ್ರಕಾರ ಇನ್ನೊಂದು ತಿಂಗಳಲ್ಲಿ ಸರ್ಕಾರಿ ನೌಕರಿ ನೀಡಲಾಗುತ್ತದೆ ಎಂದು ಸಿಎಂ ಹೇಮಂತ್ ಸೊರೇನ್ ತಿಳಿಸಿದ್ದಾರೆ. 

26 ವರ್ಷದ ಬಿಮ್ಲಾ ಅವರು ಜಾರ್ಖಂಡ್ ರಾಜ್ಯವನ್ನು ಪ್ರತಿನಿಧಿಸಿ ಹಲವು ಪದಕಗಳು ಹಾಗೂ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. 

ಜಾರ್ಖಂಡ್‌ನಲ್ಲಿ 2011ರಲ್ಲಿ ನಡೆದ 34ನೇ ನ್ಯಾಶನಲ್ ಗೇಮ್‌ನಲ್ಲಿ ಬೆಳ್ಳಿಯ ಪದಕ ಗಳಿಸಿದ್ದಾರೆ. ಅಲ್ಲದೆ, ಜಾರ್ಖಂಡ್‌ನಿಂದ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಜೀವನ ಸಾಗಿಸಲು ಅವರು ಈ ವರ್ಷ ಫೆಬ್ರವರಿಯಲ್ಲಿ ಕರಾಟೆ ತರಬೇತಿ ಕೇಂದ್ರ ಆರಂಭಿಸಿದ್ದರು. ಆದರೆ, ಕೊರೋನ ಸಾಂಕ್ರಾಮಿಕ ಹರಡುತ್ತಿರುವ ಹಿನ್ನೆಲೆಯಲ್ಲಿ ಘೋಷಿಸಲಾಗಿದ್ದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಅದನ್ನು ಮುಚ್ಚಿದ್ದರು.

ವಾಣಿಜ್ಯ ಪದವೀಧರೆಯಾಗಿರುವ ಬಿಮ್ಲಾ ಪ್ರಸ್ತುತ ತನ್ನ 84 ವರ್ಷದ ಅಜ್ಜಿಯೊಂದಿಗೆ ರಾಂಚಿಯ ಕಂಕೆ ಬ್ಲಾಕ್‌ನಲ್ಲಿ ವಾಸಿಸುತ್ತಿದ್ದಾರೆ. ಅವರ ಪೋಷಕರು ಸಗ್ರಾಮ್‌ಪುರದಲ್ಲಿದ್ದಾರೆ. ಸಣ್ಣ ಕೃಷಿಕರಾಗಿರುವ ಅವರ ತಂದೆ ಬಿಮ್ಲಾ ಹಾಗೂ ಇತರ ಐದು ಮಕ್ಕಳನ್ನು ಫೋಷಿಸಲು ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. 

ಲಾಕ್‌ಡೌನ್ ಹಿನ್ನೆಲೆಯಲ್ಲಿ ಕರಾಟೆ ತರಬೇತಿ ಕೇಂದ್ರವನ್ನು ಮಚ್ಚಬೇಕಾಯಿತು. ಆದುದರಿಂದ ಈ ಅಕ್ಕಿ ಬಿಯರ್ ಮಾರಾಟ ಮಾಡಲು ಆರಂಭಿಸಿದೆ ಎಂದು ಅವರು ಹೇಳಿದ್ದರು. ಈ ಕುರಿತು ಸಂಡೇ ಎಕ್ಸ್ ಪ್ರೆಸ್ ಪ್ರಕಟಿಸಿದ್ದ ವರದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿತ್ತು. 

ಕ್ರೀಡಾಪಟುವಿನ ಪರಿಸ್ಥಿತಿಯನ್ನು ಅರಿತ ಮುಖ್ಯಮಂತ್ರಿಗಳು ರಾಂಚಿಯ ಡಿಸಿಗೆ ನಿರ್ದೇಶನ ನೀಡಿದ್ದು, ಬಿಮ್ಲಾ ಮುಂಡಾಗೆ ಕ್ರೀಡಾ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ತಕ್ಷಣವೇ ಪರಿಹಾರ ನೀಡಬೇಕೆಂದು ಸೂಚಿಸಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
Covid-19_vaccine1

ಕೋವಿಡ್-19 ಲಸಿಕೆ ಅಂತಿಮವಾಗಿ ನಮಗೆ ಸಹಜ ಸ್ಥಿತಿಗೆ ಬರಲು ಸಹಾಯ ಮಾಡುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp