ಭಾರೀ ಮಳೆ-ಪ್ರವಾಹದಿಂದ ತತ್ತರಿಸಿರುವ ತೆಲಂಗಾಣಕ್ಕೆ 15 ಕೋಟಿ ರು. ನೆರವು: ಅರವಿಂದ್ ಕೇಜ್ರಿವಾಲ್

ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ತೆಲಂಗಾಣ ಜನ ಜೀವನ ಈಗಾಗಲೇ ಕೊರೋನಾದಿಂದಾಗಿ ಆರ್ಥಿಕವಾಗಿ ತತ್ತರಿಸಿರುವ ತೆಲಂಗಾಣಕ್ಕೆ ಈ ನೆರೆ ಸ್ಥಿತಿ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್

ದೆಹಲಿ: ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ತೆಲಂಗಾಣ ಜನ ಜೀವನ ಈಗಾಗಲೇ ಕೊರೋನಾದಿಂದಾಗಿ ಆರ್ಥಿಕವಾಗಿ ತತ್ತರಿಸಿರುವ ತೆಲಂಗಾಣಕ್ಕೆ ಈ ನೆರೆ ಸ್ಥಿತಿ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ತೆಲಂಗಾಣ ರಾಜ್ಯದ ಬೆನ್ನಿಗೆ ನಿಂತಿರುವ ದೆಹಲಿ ಸರ್ಕಾರವು ಸಹಾಯ ಹಸ್ತ ಚಾಚಿದ್ದು, 15 ಕೋಟಿ ದೇಣಿಗೆ ನೀಡಲು ಮುಂದಾಗಿದೆ. ಈ ಸಂಬಂಧ ಸ್ವತಃ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಟ್ವೀಟ್​ ಮಾಡಿದ್ದಾರೆ.

ಈ ಕುರಿತು ಇಂದು ಬೆಳಿಗ್ಗೆ ಟ್ವೀಟ್‌ ಮಾಡಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ “ಹೈದರಾಬಾದ್‌ನಲ್ಲಿ ಹಿಂದೆಂದೂ ಕಾಣದ ಭೀಕರ ಪ್ರವಾಹ ಉಂಟಾಗಿದೆ. ಈ ಬಿಕ್ಕಟ್ಟಿನ ಸಮಯದಲ್ಲಿ ದೆಹಲಿಯ ಜನರು ಹೈದರಾಬಾದ್‌ನ ನಮ್ಮ ಸಹೋದರ ಸಹೋದರಿಯರೊಂದಿಗೆ ನಿಲ್ಲಲಿದ್ದಾರೆ. ಪರಿಹಾರ ಕಾರ್ಯಗಳಿಗಾಗಿ ದೆಹಲಿ ಸರ್ಕಾರವು ತೆಲಂಗಾಣ ಸರ್ಕಾರಕ್ಕೆ 15 ಕೋಟಿ ರೂ ದೇಣಿಗೆ ನೀಡಲಿದೆ” ಎಂದು ಘೋಷಿಸಿದ್ದಾರೆ.

ಕೇಜ್ರಿವಾಲ್‌ರವರ ಈ ಮಾನವೀಯ ನಡೆಯನ್ನು ಸಾಮಾಜಿಕ ಜಾಲತಾಣದಲ್ಲಿ ಅನೇಕರು ಪ್ರಶಂಶಿಸಿದ್ದರೆ, ಇನ್ನೂ ಕೆಲವರು ತೀವ್ರ ಟೀಕೆಗೆ ಗುರಿಮಾಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com