ಮಗಳ ಗೆಳತಿಯನ್ನೇ ರೇಪ್ ಮಾಡಿ ಗರ್ಭೀಣಿ ಮಾಡಿದ ಕಾಮುಕ!

ಸ್ನೇಹಿತೆಯನ್ನು ನೋಡಲು ಆಗಾಗ ಮನೆಗೆ ಬರುತ್ತಿದ್ದ ಗೆಳತಿ ಮೇಲೆ ಕಾಮುಕ ತಂದೆ ಅತ್ಯಾಚಾರ ನಡೆಸಿದ್ದು ಅಪ್ರಾಪ್ತ ಬಾಲಕಿಗೆ ಆರು ತಿಂಗಳ ಗರ್ಭೀಣಿಯಾದಾಗ ಪ್ರಕರಣ ಬೆಳಕಿಗೆ ಬಂದಿದೆ.

Published: 20th October 2020 05:00 PM  |   Last Updated: 20th October 2020 05:00 PM   |  A+A-


For representation purpose only

ಸಂಗ್ರಹ ಚಿತ್ರ

Posted By : Vishwanath S
Source : Online Desk

ಪಾಟ್ನಾ: ಸ್ನೇಹಿತೆಯನ್ನು ನೋಡಲು ಆಗಾಗ ಮನೆಗೆ ಬರುತ್ತಿದ್ದ ಗೆಳತಿ ಮೇಲೆ ಕಾಮುಕ ತಂದೆ ಅತ್ಯಾಚಾರ ನಡೆಸಿದ್ದು ಅಪ್ರಾಪ್ತ ಬಾಲಕಿಗೆ ಆರು ತಿಂಗಳ ಗರ್ಭೀಣಿಯಾದಾಗ ಪ್ರಕರಣ ಬೆಳಕಿಗೆ ಬಂದಿದೆ. 

ಬಿಹಾರದ ವೈಶಾಲಿ ಜಿಲ್ಲೆಯ ಪಾತೇಪುರದ ಮೌದ್ಹಾದಲ್ಲಿ ಈ ಘಟನೆ ನಡೆದಿದೆ. ಕಂಬೈನ್ಡ್ ಸ್ಟಡಿಗಾಗಿ ವಿದ್ಯಾರ್ಥಿನಿ ಗೆಳೆತಿಯ ಮನೆಗೆ ಬಂದಿದ್ದಾಳೆ. ಈ ವೇಳೆ ಗೆಳತಿ ಮನೆಯಲ್ಲಿರಲಿಲ್ಲ. ಮನೆಗೆ ಬಂದ ಮಗಳ ಸ್ನೇಹಿತೆಯನ್ನು ಒಳಗೆ ಎಳೆದುಕೊಂಡು ಬಾಗಿಲು ಹಾಕಿ ಅತ್ಯಾಚಾರ ಎಸಗಿದ್ದಾನೆ. 

ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲ್ಲುವ ಬೆದರಿಕೆ ಹಾಕಿದ್ದಾನೆ. ಘಟನೆಯಿಂದ ನೊಂದ ಬಾಲಕಿ ಮನೆಯಿಂದ ಹೊರಗೆ ಹೋಗುತ್ತಿರಲಿಲ್ಲ. ಆದರೆ ಕೆಲ ದಿನಗಳ ಹಿಂದೆ ಬಾಲಕಿಯ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದು ಆತಂಕಗೊಂಡ ಪೋಷಕರು ಆಕೆಯನ್ನು ಆಸ್ಪತ್ರೆಗೆ ಕರೆದ್ಯೊಯ್ದಿದ್ದಾರೆ. 

ಬಾಲಕಿಯನ್ನು ಪರೀಕ್ಷಿಸಿದ ವೈದ್ಯರು ಆಕೆ ಆರು ತಿಂಗಳ ಗರ್ಭಿಣಿ ಎಂದು ತಿಳಿಸಿದ್ದಾರೆ. ಆಗ ಬಾಲಕಿ ತಾನು ಆರು ತಿಂಗಳ ಹಿಂದೆ ಗೆಳತಿಯ ಮನೆಗೆ ವಿದ್ಯಾಭ್ಯಾಸಕ್ಕಾಗಿ ತೆರಳಿದ್ದಾಗ ಸ್ನೇಹಿತೆ ತಂದೆ ತನ್ನ ಮೇಲೆ ಬಲತ್ಕಾರ ಮಾಡಿದ್ದಾಗಿ ತಿಳಿಸಿದ್ದಾಳೆ. 

ಸಂತ್ರಸ್ತೆಯ ಪೋಷಕರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದು ಈ ದೂರಿನನ್ವಯ ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp