ಕೊರೋನಾದಿಂದ ಚೇತರಿಸಿಕೂಂಡರೂ ಪ್ರತಿಕಾಯಗಳು ಕ್ಷೀಣಿಸುತ್ತಿದ್ದಂತೆಯೇ ಸೋಂಕು ಮರುಕಳಿಸಬಹುದು! 

ಕೊರೋನಾದಿಂದ ಚೇತರಿಸಿಕೊಂಡ ವ್ಯಕ್ತಿಗಳಲ್ಲಿ ಪ್ರತಿಕಾಯಗಳು ಕ್ಷೀಣಿಸಿದರೆ ಸೋಂಕು ಮರುಕಳಿಸಬಹುದು ಎಂದು ಐಸಿಎಂಆರ್ ಎಚ್ಚರಿಕೆ ನೀಡಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊರೋನಾದಿಂದ ಚೇತರಿಸಿಕೊಂಡ ವ್ಯಕ್ತಿಗಳಲ್ಲಿ ಪ್ರತಿಕಾಯಗಳು ಕ್ಷೀಣಿಸಿದರೆ ಸೋಂಕು ಮರುಕಳಿಸಬಹುದು ಎಂದು ಐಸಿಎಂಆರ್ ಎಚ್ಚರಿಕೆ ನೀಡಿದೆ. 

ರೋಗ ನಿಯಂತ್ರಣ ಕೇಂದ್ರ (ಅಮೆರಿಕ) ದ ಪ್ರಕಾರ ಒಮ್ಮೆ ಕೊರೋನಾ ಸೋಂಕು ತಗುಲಿ ಆತ ಚೇತರಿಸಿಕೊಂಡ 90 ದಿನಗಳಲ್ಲಿ ಸೋಂಕು ಮರುಕಳಿಸುವ ಸಾಧ್ಯತೆ ಇದೆ, ಆದರೆ ಇದಕ್ಕೆ ಹಲವು ಅಧ್ಯಯನಗಳಲ್ಲಿ ಪ್ರತಿಕಾಯಗಳು 5 ತಿಂಗಳವರೆಗೆ ಇರಲಿದೆ ಎನ್ನುತ್ತಿವೆ. 

ಆದರೆ ಇದು ಹೊಸ ರೋಗವಾಗಿರುವುದರಿಂದ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ, ಒಮ್ಮೆ ಪ್ರತಿಕಾಯಗಳು ಕ್ಷೀಣಿಸುತ್ತಿದ್ದಂತೆಯೇ ಸೋಂಕು ಮರುಕಳಿಸಬಹುದು, ಆದ್ದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಧರಿಸುವುದನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಐಸಿಎಂಆರ್ ನಿರ್ದೇಶಕ ಬಲರಾಮ್ ಭಾರ್ಗವ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com