ನಾನೆಂದೂ ಕ್ಷಮೆಯಾಚಿಸುವುದಿಲ್ಲ: 'ಐಟಂ' ಹೇಳಿಕೆ ಕುರಿತ ರಾಹುಲ್ ಖಂಡನೆಗೆ ಕಮಲ್ ನಾಥ್ ಪ್ರತಿಕ್ರಿಯೆ
"ಅದು ಹುಲ್ ಗಾಂಧಿಯವರ ಅಭಿಪ್ರಾಯ. ನಾನು ಆ ಹೇಳಿಕೆ ನೀಡಿದ ಸಂದರ್ಭವೇನೆಂದು ನಾನೀಗಗಲೇ ವಿವರಿಸಿದ್ದೇನೆ... ಯಾರನ್ನೂ ಅವಮಾನಿಸುವ ಉದ್ದೇಶವಿಲ್ಲದಿದ್ದ ಮೇಲೆ ನಾನೇಕೆ ಕ್ಷಮೆಯಾಚಿಸಬೇಕು? " ಮಧ್ಯಪ್ರದೇಶ ಮಾಜಿ ಸಿಎಂ ಕಮಲ್ ನಾಥ್ ಪ್ರಶ್ನಿಸಿದ್ದಾರೆ.
Published: 20th October 2020 03:17 PM | Last Updated: 20th October 2020 03:17 PM | A+A A-

ಕಮಲ್ ನಾಥ್
ಭೋಪಾಲ್: "ಅದು ಹುಲ್ ಗಾಂಧಿಯವರ ಅಭಿಪ್ರಾಯ. ನಾನು ಆ ಹೇಳಿಕೆ ನೀಡಿದ ಸಂದರ್ಭವೇನೆಂದು ನಾನೀಗಗಲೇ ವಿವರಿಸಿದ್ದೇನೆ... ಯಾರನ್ನೂ ಅವಮಾನಿಸುವ ಉದ್ದೇಶವಿಲ್ಲದಿದ್ದ ಮೇಲೆ ನಾನೇಕೆ ಕ್ಷಮೆಯಾಚಿಸಬೇಕು? " ಮಧ್ಯಪ್ರದೇಶ ಮಾಜಿ ಸಿಎಂ ಕಮಲ್ ನಾಥ್ ಪ್ರಶ್ನಿಸಿದ್ದಾರೆ.
ಬಿಜೆಪಿ ಸಚಿವೆಯೊಬ್ಬರಿಗೆ ಕಮಲ್ ನಾಥ್ 'ಐಟಂ' ಎಂಬ ಪದ ಬಳಕೆ ಮಾಡಿರುವುದನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಖಂಡಿಸಿದ್ದರು. ರಾಹುಲ್ ಅವರ ಖಂಡನೆ ಸಂಬಂಧ ಪ್ರತಿಕ್ರಯಿಸಿರುವ ಕಮಲ್ ನಾಥ್ "ಯಾರನ್ನೂ ಅವಮಾನಿಸುವ ಉದ್ದೇಶವಿಲ್ಲದಿದ್ದಾಗ ನಾನು ಯಾಕೆ ಕ್ಷಮೆಯಾಚಿಸಬೇಕು? ನನ್ನ ಹೆಳಿಕೆಯಿಂದ ಯಾರಾದರೂ ಅವಮಾನಕ್ಕೊಳಗಾಗಿದ್ದರೆ, ನಾನು ಈಗಾಗಲೇ ಅದಕ್ಕಾಗಿ ವಿಷಾದ ವ್ಯಕ್ತಪಡಿಸಿದ್ದೇನೆ" ಎಂದರು.
ಮೂರು ದಿನಗಳ ಕೇರಳ ಭೇಟಿಯಲ್ಲಿರಿವ ರಾಹುಲ್ ಗಾಂಧಿ ಇಂದು, "ಕಮಲ್ ನಾಥ್ ನನ್ನ ಪಕ್ಷದವರೇ ಆಗಿದ್ದಾರೆ. ಆದರೆ ವೈಯಕ್ತಿಕವಾಗಿ, ಅವರು ಬಳಸಿರುವ ಭಾಷೆ ನನಗೆ ಇಷ್ಟವಿಲ್ಲ ... ನಾನು ಅದನ್ನು ಮೆಚ್ಚುವುದಿಲ್ಲ, ಅವರು ಹಾಗೆಂದದ್ದು ದುರದೃಷ್ಟಕರ. " ಎಂದು ಹೇಳಿದ್ದರು.
ಕಾಂಗ್ರೆಸ್ ಮುಖಂಡರಾದ ಕಮಲ್ ನಾಥ್ ಈ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ ಅಲ್ಲದೆ ತಾವು ಯಾರ ಬಗ್ಗೆ ಅಗೌರವ ತೋರಿಸಲು ಈ ಹೇಳೀಕೆ ನಿಡಿಲ್ಲ ಎಂದಿದ್ದಾರೆ. ಈ ಹಿಂದೆಯೂ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ’ಐಟಂ’ ಎಂಬ ಪದ ಬಳಕೆ ಮಾಡಲಾಗಿದೆ ಎಂದು ಪ್ರತಿಪಾದಿಸಿದ ಕಮಲ್ ನಾಥ್ ರೆ ನವೆಂಬರ್ 3 ರ ರಾಜ್ಯ ಉಪಚುನಾವಣೆಯಲ್ಲಿ ಸೋಲೊಪ್ಪಿಕೊಳ್ಳುವ ಭೀತಿಯಿಂದ ಬಿಜೆಪಿ ಜನರ ಗಮನ ಬೇರೆಡೆ ಸೆಳೆಯಲು ಈ ತಂತ್ರ ಹೂಡಿದೆ ಎಂದರು.
"ನಾನು ಅಗೌರವದಿಂದ ಏನನ್ನೂ ಹೇಳಲಿಲ್ಲ. ನಾನು ಮಹಿಳೆಯರನ್ನು ಗೌರವಿಸುತ್ತೇನೆ. ಇದು ಅಗೌರವ ಎಂದು ಯಾರಾದರೂ ಭಾವಿಸಿದರೆ ಅದಕ್ಕಾಗಿ ನನ್ನ ವಿಷಾದವಿದೆ. " ಎಂದು ಕಮಲ್ ನಾಥ್ ಹೇಳಿದ್ದಾರೆ.
ಗ್ವಾಲಿಯರ್‌ನ ದಾಬ್ರಾ ಪಟ್ಟಣದಲ್ಲಿ ಭಾನುವಾರ ನಡೆದ ಚುನಾವಣಾ ರ್ಯಾಲಿಯ ಸಮಯದಲ್ಲಿ ಮಾತನಾಡಿದ ಕಮಲ್ ನಾಥ್ ಬಿಜೆಪಿ ಸಚಿವೆ ಇಮಾರ್ತಿ ದೇವಿಯವರ ಹೆಸರೆತ್ತದೆ ಕಾಂಗ್ರೆಸ್ ಅಭ್ಯರ್ಥಿ ತಮ್ಮ ಎದುರಾಳಿಗಳಂತೆ "ಐಟಂ"ಆಗಿರದೆ "ಸರಳ ವ್ಯಕ್ತಿ" ಆಗಿದ್ದಾರೆ ಎಂದಿದ್ದರು.