ಕೊರೋನಾ ಲಸಿಕೆಗಾಗಿ 50 ಸಾವಿರ ಕೋಟಿ ಮೀಸಲಿಟ್ಟ ಮೋದಿ ಸರ್ಕಾರ: ವರದಿ

ಕೊರೋನಾ ಮಹಾಮಾರಿ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿತ್ತು. ಆದರೂ ಕೊರೋನಾ ಹತೋಟಿಗೆ ಬರುತ್ತಿಲ್ಲ. ಇದರ ನಡುವೆ ಕೊರೋನಾ ಲಸಿಕೆಗಾಗಿ 50 ಸಾವಿರ ಕೋಟಿ ರುಪಾಯಿಯನ್ನು ಮೀಸಲಿಡಲಿದೆ ಎಂದು ವರದಿಗಳು ತಿಳಿಸಿವೆ. 
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ಕೊರೋನಾ ಮಹಾಮಾರಿ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿತ್ತು. ಆದರೂ ಕೊರೋನಾ ಹತೋಟಿಗೆ ಬರುತ್ತಿಲ್ಲ. ಇದರ ನಡುವೆ ಕೊರೋನಾ ಲಸಿಕೆಗಾಗಿ 50 ಸಾವಿರ ಕೋಟಿ ರುಪಾಯಿಯನ್ನು ಮೀಸಲಿಡಲಿದೆ ಎಂದು ವರದಿಗಳು ತಿಳಿಸಿವೆ. 

ಪ್ರಧಾನಿ ಕಾರ್ಯಾಲಯವು ದೇಶದ ಪ್ರತಿಯೊಬ್ಬರಿಗೂ ಲಸಿಕೆ ಹಾಕಲು ಸುಮಾರು 500 ರುಪಾಯಿ ವೆಚ್ಚವಾಗಬಹುದು ಎಂದು ಅಂದಾಜಿಸಿದೆ. ಪ್ರತಿಯೊಬ್ಬರಿಗೂ ಎರಡು ಇಂಜೆಕ್ಷನ್ ನೀಡಬೇಕಾಗುತ್ತದೆ. ಒಂದು ಡೋಸಿನ ಖರ್ಚು 150 ರುಪಾಯಿ ಆಗಲಿದ್ದು ದಾಸ್ತಾನು, ಸಾಗಾಟ ವೆಚ್ಚ ಸೇರಿ 250 ರುಪಾಯಿ ಆಗಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ದೇಶದ ಸುಮಾರು 130 ಕೋಟಿ ಜನಸಂಖ್ಯೆಗೆ ಲಸಿಕೆ ಹಾಕಲು ಸಾರ್ವತ್ರಿಕ ಚುನಾವಣೆಯಂತೆಯೇ ಸಿದ್ಧತೆ ಮಾಡಿಕೊಳ್ಳಿ ಎಂದು ಕರೆ ನೀಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com