ಕೋವಿಡ್ 19 ಲಸಿಕೆ ಪ್ರಯೋಗಕ್ಕೆ ಡಾ. ರೆಡ್ಡೀಸ್‌ ಲ್ಯಾಬ್‌ಗೆ ಅನುಮತಿ ಸಿಕ್ಕಿದ್ದೆ ತಡ ಸೈಬರ್ ದಾಳಿ!

ಭಾರತದಲ್ಲಿ ಕೋವಿಡ್ ಲಸಿಕೆ ಸ್ಪುಟ್ನಿಕ್ ವಿ ಪ್ರಯೋಗಗಳಿಗೆ ಡ್ರಗ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾದಿಂದ(ಡಿಸಿಜಿಐ) ಅನುಮೋದನೆ ಸಿಕ್ಕಿದೆ ಎಂದು ಡಾ. ರೆಡ್ಡೀಸ್ ಲ್ಯಾಬರೇಟರಿ ಘೋಷಿಸಿದ ಒಂದು ವಾರದೊಳಗೆ ಸೈಬರ್ ದಾಳಿ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹೈದರಾಬಾದ್: ಸೈಬರ್ ದಾಳಿಯ ಹಿನ್ನೆಲೆಯಲ್ಲಿ ತನ್ನ ಎಲ್ಲಾ ಡಾಟಾ ಸೆಂಟರ್ ಸೇವೆಗಳನ್ನು ಪ್ರತ್ಯೇಕಿಸಲಾಗಿದೆ ಎಂದು ಹೈದರಾಬಾದ್ ಮೂಲದ ಔಷಧಿ ಸಂಸ್ಧೆ ಡಾ.ರೆಡ್ಡೀಸ್ ಲ್ಯಾಬೊರೇಟರೀಸ್ ಗುರುವಾರ ತಿಳಿಸಿದೆ.

ಕೋವಿಡ್ 19 ಲಸಿಕೆ ಅಭಿವೃದ್ಧಿಯ ಬಗ್ಗೆ ಪ್ರತಿಕ್ರಿಯಿಸಿದ ಡಾ. ರೆಡ್ಡೀಸ್ ಪ್ರಯೋಗಾಲಯಗಳು ಸಿಐಒ ಮುಖೇಶ್ ರತಿ, "ಇನ್ನು 24 ಗಂಟೆಯೊಳಗೆ ಎಲ್ಲಾ ಸೇವೆಗಳು ಕಾರ್ಯಾರಂಭವಾಗಲಿದೆ. ಸೈಬರ್ ದಾಳಿಯಿಂದ ನಮ್ಮ ಕಾರ್ಯಾಚರಣೆಗಳ ಮೇಲೆ ಯಾವುದೇ ದೊಡ್ಡ ಪರಿಣಾಮ ಬೀರಿದೆ ಎಂದು ನಾವು ಊಹಿಸುವುದಿಲ್ಲ ಎಂದರು. 

ರಷ್ಯಾದ ನೇರ ಹೂಡಿಕೆ ನಿಧಿ(ಆರ್‌ಡಿಐಎಫ್) ಸಹಯೋಗದೊಂದಿಗೆ ಭಾರತದಲ್ಲಿ ಕೋವಿಡ್ ಲಸಿಕೆ ಸ್ಪುಟ್ನಿಕ್ ವಿ ಪ್ರಯೋಗಗಳಿಗೆ ಡ್ರಗ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾದಿಂದ(ಡಿಸಿಜಿಐ) ಅನುಮೋದನೆ ಸಿಕ್ಕಿದೆ ಎಂದು ಡಾ. ರೆಡ್ಡೀಸ್ ಲ್ಯಾಬರೇಟರಿ ಘೋಷಿಸಿದ ಒಂದು ವಾರದೊಳಗೆ ಸೈಬರ್ ದಾಳಿ ನಡೆದಿದೆ. 

ಆರ್ ಡಿಐಎಫ್ ಜೊತೆ ಒಪ್ಪಂದ ಮಾಡಿಕೊಂಡಿರುವ ಡಾ. ರೆಡ್ಡೀಸ್ ಲ್ಯಾಬರೇಟರಿ ನವೆಂಬರ್ ನಲ್ಲಿ 3ನೇ ಹಂತದ ಪ್ರಯೋಗಕ್ಕೆ ಮುಂದಾಗಲಿದೆ. ಎರಡು ಪ್ರಯೋಗಗಳ ಫಲಿತಾಂಶ ಯಶಸ್ವಿಯಾಗಿದೆ. ಮೂರನೇ ಹಂತದ ಪ್ರಯೋಗ ಯಶಸ್ವಿಯಾದರೆ ಲ್ಯಾಬರೇಟರಿ 2020ರ ಕೊನೆಯಲ್ಲಿ ಭಾರತದಲ್ಲಿ 10 ಕೋಟಿ ಡೋಸ್ ಗಳ ಪೂರೈಕೆ ಆರಂಭಿಸಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com