ಮಹಾರಾಷ್ಟ್ರದಲ್ಲಿ ಸಿಬಿಐ ತನಿಖೆ ನಡೆಸಲು ರಾಜ್ಯ ಸರ್ಕಾರದ ಅನುಮತಿ ಕಡ್ಡಾಯಗೊಳಿಸಿದ ಶಿವಸೇನೆ ಸರ್ಕಾರ!

ಮಹಾರಾಷ್ಟ್ರದಲ್ಲಿ ಇನ್ನು ಮುಂದೆ ಸಿಬಿಐ ಯಾವುದೇ ತನಿಖೆ ನಡೆಸಬೇಕಾದರೂ ಸಹ ರಾಜ್ಯ ಸರ್ಕಾರದ ಅನುಮತಿ ಪಡೆಯಲೇಬೇಕು!! 
ಮಹಾರಾಷ್ಟ್ರದಲ್ಲಿ ಇನ್ನು ಮುಂದೆ ಸಿಬಿಐ ಯಾವುದೇ ತನಿಖೆ ನಡೆಸಬೇಕಾದರೂ ರಾಜ್ಯ ಸರ್ಕಾರದ ಅನುಮತಿ ಕಡ್ಡಾಯ
ಮಹಾರಾಷ್ಟ್ರದಲ್ಲಿ ಇನ್ನು ಮುಂದೆ ಸಿಬಿಐ ಯಾವುದೇ ತನಿಖೆ ನಡೆಸಬೇಕಾದರೂ ರಾಜ್ಯ ಸರ್ಕಾರದ ಅನುಮತಿ ಕಡ್ಡಾಯ

ಮುಂಬೈ: ಮಹಾರಾಷ್ಟ್ರದಲ್ಲಿ ಇನ್ನು ಮುಂದೆ ಸಿಬಿಐ ಯಾವುದೇ ತನಿಖೆ ನಡೆಸಬೇಕಾದರೂ ಸಹ ರಾಜ್ಯ ಸರ್ಕಾರದ ಅನುಮತಿ ಪಡೆಯಲೇಬೇಕು!! 

ಸಿಬಿಐ ತನಿಖೆಗೆ ಇದ್ದ ಸಾಮಾನ್ಯ ಒಪ್ಪಿಗೆಯನ್ನು  ಶಿವಸೇನೆ ನೇತೃತ್ವದ ಮಹಾರಾಷ್ಟ್ರದ ಮಹಾ ವಿಕಾಸ್ ಅಘಡಿ ಸರ್ಕಾರ ಹಿಂದಕ್ಕೆ ಪಡೆದಿದೆ. ಬಿಜೆಪಿಯೊಂದಿಗೆ ಮಹಾರಾಷ್ಟ್ರದ ಸರ್ಕಾರದ ಜಟಾಪಟಿ ನಡೆಯುತ್ತಿದ್ದು, ಮಹಾರಾಷ್ಟ್ರದ ಗೃಹ ಇಲಾಖೆ ಸಾಮಾನ್ಯ ಒಪ್ಪಿಗೆಯನ್ನು ಹಿಂಪಡಿದೆ. 

ಈ ಹಿಂದೆ ಇದೇ ಮಾದರಿಯ ನಿರ್ಧಾರವನ್ನು ಆಂಧ್ರಪ್ರದೇಶ ಹಾಗೂ ಪಶ್ಚಿಮ ಬಂಗಾಳ ಸರ್ಕಾರಗಳು ತೆಗೆದುಕೊಂಡಿದ್ದವು.ದೆಹಲಿ ವಿಶೇಷ ಪೊಲೀಸ್ ಎಸ್ಟಾಬ್ಲಿಷ್ಮೆಂಟ್ ಕಾಯ್ದೆ 1946 ರ ಪ್ರಕಾರವಾಗಿ ಸಿಬಿಐ ಯಾವುದೇ ರಾಜ್ಯದಲ್ಲಿ ತನಿಖೆ ನಡೆಸುವುದಕ್ಕೆ ರಾಜ್ಯದ ಅನುಮತಿ ಪಡೆಯಬೇಕಾಗಿರಲಿಲ್ಲ. 

ಇದಕ್ಕೆ ಸಮರ್ಥನೆ ನೀಡಿರುವ ಮಹಾರಾಷ್ಟ್ರ ಸರ್ಕಾರ ಒಕ್ಕೂಟ ರಚನೆಯಲ್ಲಿ ರಾಜ್ಯ ಸರ್ಕಾರ ತನ್ನ ಹಿತಾಸಕ್ತಿಯನ್ನು ಕಾಯ್ದುಕೊಳ್ಳಬೇಕೆಂದು ಹೇಳಿದೆ. 

ಕೇಂದ್ರ ಸರ್ಕಾರ ನಿರಂತರವಾಗಿ ರಾಜ್ಯಗಳ ಹಕ್ಕುಗಳನ್ನು ಅತಿಕ್ರಮಿಸುತ್ತಿದೆ. ಭೀಮಾ ಕೊರೆಗಾಂವ್ ಪ್ರಕರಣದಲ್ಲಿ ಕೇಂದ್ರ ಸರ್ಕಾರ ರಾಜ್ಯದ ಹಕ್ಕನ್ನು ಕಸಿಯಿತು ಪ್ರಕರಣದ ತನಿಖೆಯನ್ನು ಎಸ್ ಐಟಿಯಿಂದ ಮಾಡಿಸಬೇಕು ಎಂಬುದು ರಾಜ್ಯ ಸರ್ಕಾರದ ನಿಲುವಾಗಿತ್ತು, ಆದರೆ ಅದನ್ನು ಎನ್ಐಎ ಗೆ ವಹಿಸಲಾಯಿತು. ಟಿಆರ್ ಪಿ ಹಗರಣವನ್ನು ಸಹ ಸಿಬಿಐಗೆ ವಹಿಸಲು ಯೋಜನೆ ನಡೆದಿತ್ತು. ಕೇಂದ್ರ ಸರ್ಕಾರದೆದುರು ನಾವು ಮೌನವಾಗಿರುವುದು ಬೇಕಿಲ್ಲ, ಆದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೈತ್ರಿ ಸರ್ಕಾರದ ಹಿರಿಯ ಸಚಿವರೊಬ್ಬರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com