ಗಡಿ ಭದ್ರತೆಗಾಗಿ ರಸ್ತೆಗಳ ನಿರ್ಮಾಣಕ್ಕೆ ಮೋದಿ ಸರ್ಕಾದ ಗಮನ ಚೀನಾವನ್ನು ಅಲುಗಾಡಿಸಿದೆ: ಜೆಪಿ ನಡ್ಡಾ 

ದೇಶದ ಗಡಿಗಳನ್ನು ಭದ್ರಪಡಿಸಲು ಎನ್ ಡಿಎ ಸರ್ಕಾರ ಎಲ್ಲಾ ಕ್ರಮಗಳನ್ನೂ ಕೈಗೊಂಡಿದೆ, ಗಡಿ ಭಾಗದಲ್ಲಿ ರಸ್ತೆಗಳನ್ನು ನಿರ್ಮಿಸುತ್ತಿರುವುದು ಚೀನಾವನ್ನು ಅಲುಗಾಡಿಸಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ. 
ಗಡಿ ಭದ್ರತೆಗಾಗಿ ರಸ್ತೆಗಳ ನಿರ್ಮಾಣಕ್ಕೆ ಮೋದಿ ಸರ್ಕಾದ ಗಮನ ಚೀನಾವನ್ನು ಅಲುಗಾಡಿಸಿದೆ: ಜೆಪಿ ನಡ್ಡಾ
ಗಡಿ ಭದ್ರತೆಗಾಗಿ ರಸ್ತೆಗಳ ನಿರ್ಮಾಣಕ್ಕೆ ಮೋದಿ ಸರ್ಕಾದ ಗಮನ ಚೀನಾವನ್ನು ಅಲುಗಾಡಿಸಿದೆ: ಜೆಪಿ ನಡ್ಡಾ

ಶಿಮ್ಲಾ: ದೇಶದ ಗಡಿಗಳನ್ನು ಭದ್ರಪಡಿಸಲು ಎನ್ ಡಿಎ ಸರ್ಕಾರ ಎಲ್ಲಾ ಕ್ರಮಗಳನ್ನೂ ಕೈಗೊಂಡಿದೆ, ಗಡಿ ಭಾಗದಲ್ಲಿ ರಸ್ತೆಗಳನ್ನು ನಿರ್ಮಿಸುತ್ತಿರುವುದು ಚೀನಾವನ್ನು ಅಲುಗಾಡಿಸಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ. 

ಹಿಮಾಚಲ ಪ್ರದೇಶದಲ್ಲಿ ಬಿಜೆಪಿಯ 6 ಕಚೇರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸರ್ಕಾರ ಕಳೆದ 6 ವರ್ಷಗಳಲ್ಲಿ ಗಲ್ವಾನ್ ಕಣಿವೆಯಿಂದ ಅರುಣಾಚಲದ ಗಡಿ ಪ್ರದೇಶಗಳಲ್ಲಿ ಎಲ್ಲಾ ಋತುಗಳಿಗೂ ಹೊಂದಬಲ್ಲ 4,700 ಕಿ.ಮೀ ಚತುಷ್ಪಥ ರಸ್ತೆಗಳನ್ನು ನಿರ್ಮಿಸಿದೆ. 

ಇದೇ ಮಾದರಿಯಲ್ಲಿ ಡಬಲ್ ಲೇನ್ ಬ್ರಿಡ್ಜ್ ಗಳನ್ನೂ ಒಟ್ಟಾರೆ 14.7 ಕಿ.ಮೀ ಉದ್ದದ ನಿರ್ಮಿಸಿದ್ದು, ಭಾರತದ ಈ ಶಕ್ತಿ ಚೀನಾವನ್ನು ಕಂಗೆಡಿಸಿದೆ ಎಂದು ನಡ್ಡಾ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com