ಗುಜರಾತ್: ಅ.31ರಂದು ದೇಶದ ಮೊದಲ ಸಮುದ್ರ ವಿಮಾನ ಸೇವೆಗೆ ಪ್ರಧಾನಿ ಮೋದಿ ಚಾಲನೆ

ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 31 ರಂದು ಗುಜರಾತ್ ನಲ್ಲಿ ದೇಶದ ಮೊಟ್ಟಮೊದಲ ಸಮುದ್ರ ವಿಮಾನ ಸೇವೆಗೆ ಚಾಲನೆ ನೀಡಲಿದ್ದಾರೆ.
ಸೀಪ್ಲೇನ್ ನಲ್ಲಿ ಪ್ರಧಾನಿ ಮೋದಿ(ಸಂಗ್ರಹ ಚಿತ್ರ)
ಸೀಪ್ಲೇನ್ ನಲ್ಲಿ ಪ್ರಧಾನಿ ಮೋದಿ(ಸಂಗ್ರಹ ಚಿತ್ರ)

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 31 ರಂದು ಗುಜರಾತ್ ನಲ್ಲಿ ದೇಶದ ಮೊಟ್ಟಮೊದಲ ಸಮುದ್ರ ವಿಮಾನ ಸೇವೆಗೆ ಚಾಲನೆ ನೀಡಲಿದ್ದಾರೆ.

ಉದ್ಘಾಟನಾ ವಿಮಾನವು ಅಹಮದಾಬಾದ್‌ನ ಸಬರಮತಿ ರಿವರ್‌ಫ್ರಂಟ್‌ನಿಂದ ನರ್ಮದಾ ಜಿಲ್ಲೆಯ ಕೆವಾಡಿಯಾ ಕಾಲೋನಿಯಲ್ಲಿರುವ ಏಕತಾ ಪ್ರತಿಮೆಗೆ ತೆರಳಲಿದ್ದು, ಇದನ್ನು ಖಾಸಗಿ ವಿಮಾನಯಾನ ಸಂಸ್ಥೆ ಸ್ಪೈಸ್‌ಜೆಟ್ ನಿರ್ವಹಿಸಲಿದೆ.

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನವಾದ ಅಕ್ಟೋಬರ್ 31 ರಂದು ಸೀಪ್ಲೇನ್ ಸೇವೆ ಆರಂಭಿಸುವುದಾಗಿ ಗುಜರಾತ್‌ ಸರ್ಕಾರ ಈ ಮುಂಚೆ ಘೋಷಿಸಿತ್ತು.

ಅಹಮದಾಬಾದ್‌ನ ಸಬರಮತಿ ರಿವರ್‌ಫ್ರಂಟ್‌ನಿಂದ ಕೆವಾಡಿಯಾದ ಏಕತಾ ಪ್ರತಿಮೆಯವರೆಗೆ ತಡೆರಹಿತ ಮತ್ತು ಕೈಗೆಟುಕುವ ವಾಯು ಸಂಪರ್ಕವನ್ನು ಒದಗಿಸಲು ಈ ರೀತಿಯ ಸೇವೆ ದೇಶದಲ್ಲಿ ಮೊದಲ ಬಾರಿಗೆ ಆರಂಭವಾಗುತ್ತಿದೆ ಎಂ ಗುಜರಾತ್ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿತ್ತು.

ಸ್ಪೈಸ್ ಜೆಟ್ 19 ಆಸನಗಳ ವಿಮಾನವನ್ನು ನಿರ್ವಹಿಸಲಿದ್ದು, ಇದರಲ್ಲಿ 14 ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com