ಬಿಹಾರ ಚುನಾವಣೆ: ಯೋಗಿ ಆದಿತ್ಯನಾಥ್ ಚುನಾವಣಾ ಭಾಷಣದ ವಿರುದ್ಧ ತೇಜಸ್ವಿ ಯಾದವ್ ತೀವ್ರ ವಾಗ್ದಾಳಿ

ಬಿಹಾರದಲ್ಲಿ ಚುನಾವಣಾ ಪ್ರಚಾರ ತಾರಕಕ್ಕೇರಿದ್ದು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಚುನಾವಣಾ ಭಾಷಣ ವಿರುದ್ಧ ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

Published: 22nd October 2020 05:12 PM  |   Last Updated: 22nd October 2020 05:49 PM   |  A+A-


Tejasviyadav1

ತೇಜಸ್ವಿ ಯಾದವ್

Posted By : Nagaraja AB
Source : The New Indian Express

ಪಾಟ್ನಾ: ಬಿಹಾರದಲ್ಲಿ ಚುನಾವಣಾ ಪ್ರಚಾರ ತಾರಕಕ್ಕೇರಿದ್ದು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಚುನಾವಣಾ ಭಾಷಣ ವಿರುದ್ಧ ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

'ಯಾರು, ಯಾವ ರಾಜ್ಯದಿಂದ, ಯಾವ ವಿಷಯದೊಂದಿಗೆ ಬರುತ್ತಾರೆ ಎಂಬುದು ನಮಗೆ ಮುಖ್ಯವಲ್ಲಾ, ನಿರುದ್ಯೋಗ, ಬಡತನ, ವಲಸೆ ಸಂಬಂಧಿತ ಸಮಸ್ಯೆಗಳು ಪ್ರಸ್ತುತವಾಗಿವೆ ಎಂದು ಯಾದವ್ ಹೇಳಿದ್ದಾರೆ.

ಬಿಹಾರ ಚುನಾವಣೆಗಾಗಿ ಬಿಜೆಪಿ ಭರವಸೆ ಕುರಿತು ಮಾತನಾಡಿದ ಅವರು, ಬಿಹಾರ ಚುನಾವಣೆಗೆ ಬಿಜೆಪಿಗೆ ಮುಖವಿಲ್ಲ, ಕೇಂದ್ರ ಹಣಕಾಸು ಸಚಿವರು, ಭರವಸೆಗಳನ್ನು ಬಿಡುಗಡೆ ಮಾಡುತ್ತಾರೆ. ಇಲ್ಲಿಯವರೆಗೂ ಬಿಹಾರಕ್ಕೆ ಏಕೆ ವಿಶೇಷ ಸ್ಥಾನಮಾನ ಹಾಗೂ ಪ್ಯಾಕೇಜ್ ನ್ನು ಏಕೆ ನೀಡಲಿಲ್ಲ ಎಂಬುದರ ಬಗ್ಗೆ ನಿರ್ಮಾಲಾ ಸೀತಾರಾಮನ್ ಮಾತನಾಡಬೇಕು ಎಂದು ಒತ್ತಾಯಿಸಿದರು.

ಇತ್ತೀಚಿನ ದಿನಗಳಲ್ಲಿ ನಿತೀಶ್ ಕುಮಾರ್  ಏನನ್ನೂ ಹೇಳುತ್ತಿದ್ದಾರೆ. ಹಣ ಎಲ್ಲಿಂದ ಬರುತ್ತದೆ ಎಂದು ಅವರು ಕೇಳುತ್ತಿದ್ದಾರೆ? 15 ವರ್ಷಗಳ ಕಾಲ ಆಡಳಿತ ನಡೆಸಿದ ನಂತರವೂ ಬಜೆಟ್‌ನಲ್ಲಿನ ವಿನಾಯಿತಿಗಳು,  ಅವುಗಳನ್ನು ಹೇಗೆ ಖರ್ಚು ಮಾಡಬೇಕೆಂಬುದು ಅವರಿಗೆ ತಿಳಿದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಬಿಹಾರದ 2,11,761 ಕೋಟಿ ವಿತ್ತೀಯ ಬಜೆಟ್ ನಲ್ಲಿ ಶೇ.40 ರಷ್ಟು ಹಣವನ್ನು ಎನ್ ಡಿಎ ಸರ್ಕಾರ ವೆಚ್ಚ ಮಾಡಿಲ್ಲ, ಸಾಲ, ಬೇಜವಾಬ್ದಾರಿತನ, ಭ್ರಷ್ಟಾಚಾರ, ಕಳಪೆ ನೀತಿಗಳು ಇದಕ್ಕೆ ಕಾರಣವಾಗಿದೆ. ವೆಚ್ಚ ಮಾಡದೆ ಇರುವ ಬೃಹತ್ ಹಣವನ್ನು ನಿತೀಶ್ ಕುಮಾರ್, ಸುಶೀಲ್ ಕುಮಾರ್ ಮೋದಿ ಅವರಂತೆಯೇ ಜಾತಿ ಮತ ಬ್ಯಾಂಕ್ ಸೃಷಿಸಲು ಬಳಸದೆ ನೂತನ ಅಭಿವೃದ್ಧಿ ಕೆಲಸಗಳಿಗಾಗಿ ಸುಲಭವಾಗಿ ನಾವು ಬಳಸುತ್ತೇವೆ ಎಂದರು.

ಒಟ್ಟಾರೇ ಬಜೆಟ್ ನಲ್ಲಿ ಶೇ.60 ರಷ್ಟು ಹಣ ಖರ್ಚು ಮಾಡಿರುವ ಬಿಹಾರ ಸರ್ಕಾರ, ಚುನಾವಣೆ ವೇಳೆಯಲ್ಲಿ ಯಾವ ಆಧಾರದ ಮೇಲೆ ಮತಗಳನ್ನು ಕೇಳಲು ಹೋಗುತ್ತದೆ ಎಂದು ವಾಕ್ ಪ್ರಹಾರ ನಡೆಸಿದರು.

ನಮ್ಮ ಸರ್ಕಾರ ಭ್ರಷ್ಟಾಚಾರವಿಲ್ಲದೆ, ಪ್ರತಿ ಪೈಸೆಗೂ ಲೆಕ್ಕ ವಿಡುವ ಮೂಲಕ ಸರಿಯಾದ ಕೆಲಸ ಮಾಡಲಾಗುವುದು, ರಾದ್ಯದ ಉತ್ಪಾದಕತೆಯನ್ನು ಹೆಚ್ಚಿಸಿ , ಹೂಡಿಕೆಗಾಗಿ ಹೊಸ ಬಂಡವಾಳದಾರರನ್ನು ಆಕರ್ಷಿಸುತ್ತೇವೆ.ಹೊಸ ಕೈಗಾರಿಕೆಗಳನ್ನು ಸ್ಥಾಪಿಸಿ, ರಾಜ್ಯದ ಆದಾಯವನ್ನು ಹೆಚ್ಚಿಸುತ್ತೇವೆ ಎಂದು ತೇಜಸ್ವಿ ಯಾದವ್ ಭರವಸೆ ನೀಡಿದರು.

Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp