ನಕಲಿ ಟಿಆರ್ ಪಿ ಕೇಸು: ಮತ್ತೆರಡು ವಾಹಿನಿಗಳ ಹೆಸರು ವಿಚಾರಣೆ ವೇಳೆ ಬೆಳಕಿಗೆ

ನಕಲಿ ಟಿವಿ ರೇಟಿಂಗ್ ಪಾಯಿಂಟ್ಸ್(ಟಿಆರ್ ಪಿ) ಹಗರಣ ವಿಚಾರಣೆ ವೇಳೆ ಮತ್ತೆರಡು ವಾಹಿನಿಗಳು ಭಾಗಿಯಾಗಿರುವುದು ಪೊಲೀಸರಿಗೆ ತನಿಖೆಯಿಂಗ ಪತ್ತೆಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ನಕಲಿ ಟಿವಿ ರೇಟಿಂಗ್ ಪಾಯಿಂಟ್ಸ್(ಟಿಆರ್ ಪಿ) ಹಗರಣ ವಿಚಾರಣೆ ವೇಳೆ ಮತ್ತೆರಡು ವಾಹಿನಿಗಳು ಭಾಗಿಯಾಗಿರುವುದು ಪೊಲೀಸರಿಗೆ ತನಿಖೆಯಿಂಗ ಪತ್ತೆಯಾಗಿದೆ.

ಅವುಗಳಲ್ಲಿ ಒಂದು ಸುದ್ದಿ ವಾಹಿನಿಯಾದರೆ ಮತ್ತೊಂದು ಮನರಂಜನಾ ವಾಹಿನಿಯೆಂದು ಅಧಿಕಾರಿಗಳು ಪಿಟಿಐ ಸುದ್ದಿಸಂಸ್ಥೆಗೆ ಹೇಳಿದ್ದಾರೆ. ತನಿಖೆ ವೇಳೆ, ಈ ಎರಡೂ ವಾಹಿನಿಗಳು ಹಣ ನೀಡಿ ಹೆಚ್ಚು ಟಿಆರ್ ಪಿ ಸಿಗುವಂತೆ ಮಾಡುತ್ತಿದ್ದವು ಎಂದು ತಿಳಿದುಬಂದಿದೆ ಎಂದು ಹೇಳಿದ್ದಾರೆ.

ನಕಲಿ ಟಿಆರ್ ಪಿ ತನಿಖೆ ನಡೆಸುವಾಗ ಪೊಲೀಸರು ಐಪಿಸಿ ಸೆಕ್ಷನ್ ನಡಿ 174,179,201 ಮತ್ತು 204ರ ಹೊಸ ಕೇಸು ದಾಖಲಿಸಿದ್ದಾರೆ ಎಂದು ಹೇಳಿದರು.

ನಕಲಿ ಟಿಆರ್ ಪಿ ದಂಧೆ ನಡೆಸಿ ಆದಾಯ ಹೆಚ್ಚಿಸಲು ಸುಳ್ಳು ಟಿಆರ್ ಪಿ ತೋರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿ ಸೇರಿದಂತೆ ಮೂರು ಚಾನೆಲ್ ಗಳು ತನಿಖೆ ಎದುರಿಸುತ್ತಿವೆ. ನಿನ್ನೆ ತಂಡ ರಿಪಬ್ಲಿಕ್ ಟಿವಿ ಸಿಎಫ್ಒ ಎಸ್ ಸುಂದರಮ್ ಮತ್ತು ಕಾರ್ಯಕಾರಿ ಸಂಪಾದಕ ನಿರಂಜನ್ ನಾರಾಯಣಸ್ವಾಮಿ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com