ಕೊರೋನಾ ನಿರ್ವಹಣೆಯಲ್ಲಿ ವಿಫಲವಾದರೂ ಈಗಲೂ ಪ್ರಧಾನಿ ಮೋದಿ ಜನಪ್ರಿಯತೆಗೆ ಕಾರಣ ಏನು ಗೊತ್ತಾ?

ವಿಶ್ವದಲ್ಲಿಯೇ ಅತ್ಯಂತ ಹೆಚ್ಚಿನ ಸಂಖ್ಯೆಯ ಕೊರೋನಾ ವೈರಸ್ ಪ್ರಕರಣಗಳು ದೇಶದಲ್ಲಿದ್ದು, ಆರ್ಥಿಕತೆ ಕುಸಿತಗೊಂಡಿದ್ದು, ಕಾರ್ಖಾನೆಗಳು ಮುಚ್ಚಿದ್ದು, ರೈತರು ಪ್ರತಿಭಟನೆಗೆ ಇಳಿದಿದ್ದಾರೆ. ಚೀನಾದೊಂದಿಗೆ ಗಡಿ ವಿವಾದ ಮುಂದುವರೆದಿದೆ. ಆದಾಗ್ಯೂ , ಪ್ರಧಾನಿ ಮೋದಿ ಈಗಲೂ ಕೂಡಾ ಜನಪ್ರಿಯರಾಗಿದ್ದಾರೆ.

Published: 22nd October 2020 11:49 AM  |   Last Updated: 22nd October 2020 11:49 AM   |  A+A-


PM_Modi1

ಪ್ರಧಾನಿ ನರೇಂದ್ರ ಮೋದಿ

Posted By : Nagaraja AB
Source : Online Desk

ನವದೆಹಲಿ: ವಿಶ್ವದಲ್ಲಿಯೇ ಅತ್ಯಂತ ಹೆಚ್ಚಿನ ಸಂಖ್ಯೆಯ ಕೊರೋನಾ ವೈರಸ್ ಪ್ರಕರಣಗಳು ದೇಶದಲ್ಲಿದ್ದು, ಆರ್ಥಿಕತೆ ಕುಸಿತಗೊಂಡಿದ್ದು, ಕಾರ್ಖಾನೆಗಳು ಮುಚ್ಚಿದ್ದು, ರೈತರು ಪ್ರತಿಭಟನೆಗೆ ಇಳಿದಿದ್ದಾರೆ. ಚೀನಾದೊಂದಿಗೆ ಗಡಿ ವಿವಾದ ಮುಂದುವರೆದಿದೆ. ಆದಾಗ್ಯೂ , ಪ್ರಧಾನಿ ಮೋದಿ ಈಗಲೂ ಕೂಡಾ ಜನಪ್ರಿಯರಾಗಿದ್ದಾರೆ.

ಅಕ್ಟೋಬರ್ 28 ರಿಂದ ನವೆಂಬರ್ 7ರವರೆಗೂ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆ ಪೂರ್ವ ಸಮೀಕ್ಷೆಯಲ್ಲಿ ಇದು ದೃಢಪಟ್ಟಿದೆ. ಸಾಂಕ್ರಾಮಿಕ ರೋಗ ಉಲ್ಬಣದ ನಂತರ ಮೊದಲ ಬಾರಿಗೆ ಬಿಹಾರದಲ್ಲಿ ಚುನಾವಣೆ ನಡೆಯುತ್ತಿದ್ದು, ಎನ್ ಡಿಎ ಮೈತ್ರಿ ಪಕ್ಷ ಜೆಡಿಯು ಮರಳಿ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ. ಇಂಡಿಯಾ ಟುಡೇ ಆಗಸ್ಟ್ ನಲ್ಲಿ  ಪ್ರತ್ಯೇಕವಾಗಿ ನಡೆಸಿದ ಸಮೀಕ್ಷೆಯಲ್ಲಿ  ಕಾರ್ಯಕ್ಷಮತೆ  ಅತ್ಯುತ್ತಮವಾಗಿದ್ದು, ಶೇ. 78 ರಷ್ಟು ರೆಟಿಂಗ್ ಸಿಕ್ಕಿದೆ.

ಮಧ್ಯದಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದರಿಂದ ಕೆಲ ವ್ಯಕ್ತಿಗಳು ಸರ್ಕಾರಿ ಪ್ರಯೋಜನಗಳನ್ನು ಪಡೆದುಕೊಳ್ಳಲು ಆಗುತ್ತಿಲ್ಲ. ಅದು ಪ್ರಧಾನಿ ಮೋದಿ ಅವರ ತಪ್ಪಲ್ಲ, ಜನರು ಮಾಸ್ಕ್ ಧರಿಸದಿದ್ದರೆ ಸೋಂಕು ಹರಡುವಿಕೆ ತಪ್ಪಿಸಲು ಮೋದಿಯಿಂದ ಸಾಧ್ಯವಾಗಲ್ಲ, ಅವರ ಒಳ್ಳೆಯ ಕಾರ್ಯಕ್ರಮಗಳನ್ನು ಯಾರು ಕೂಡಾ ಪ್ರಶ್ನಿಸಿಲು ಸಾಧ್ಯವಿಲ್ಲ ಎನ್ನುತ್ತಾರೆ 22 ವರ್ಷದ ತರುಣ ಸಂಜಯ್ ಕುಮಾರ್. 

ಈತ ಲಾಕ್ ಡೌನ್ ಸಂದರ್ಭದಲ್ಲಿ  ನಿಯಮ ಉಲ್ಲಂಘಿಸಿ ಕೆಲಸವಿಲ್ಲದೆ ದೆಹಲಿಯಿಂದ ಬಿಹಾರಕ್ಕೆ 1 ಸಾವಿರ ಕಿಲೋಮೀಟರ್ ಸೈಕಲ್ ತುಳಿದು ಬಂದಿದ್ದಾನೆ. ಸಾಲ , ರಾಜ್ಯ ಸರ್ಕಾರ, ಮತ್ತಿತರ ವಿಷಯಗಳಲ್ಲಿ ಪ್ರಧಾನಿಯನ್ನು ದೂಷಿಸಿದ್ದರೂ ಅಡುಗೆ ಅನಿಲ ಪೂರೈಕೆ, ಶೌಚಾಲಯ, ಮನೆ, ಮತ್ತಿತರ ಕಾರ್ಯಕ್ರಮಗಳ ಮೂಲಕ ಪ್ರಧಾನಿ ಮೋದಿ ನೆರವು ನೀಡಿದ್ದಾರೆ ಎಂದು ಅನೇಕ ಮಂದಿ ಹೇಳುತ್ತಾರೆ.

ಪ್ರಬಲವಾದ ವಿರೋಧ ಪಕ್ಷದ ಕೊರತೆ ಪ್ರಧಾನಿ ನರೇಂದ್ರ ಮೋದಿ ಹೆಚ್ಚಿನ ದಿನ ಜನಪ್ರಿಯತೆ ಉಳಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಅಂತರರಾಷ್ಟ್ರೀಯ ಶಾಂತಿಗಾಗಿ ಕಾರ್ನೆಗೀ ದತ್ತಿ ದಕ್ಷಿಣ ಏಷ್ಯಾ ಕಾರ್ಯಕ್ರಮದ ನಿರ್ದೇಶಕ ಮಿಲನ್ ವೈಷ್ಣವ್ ಹೇಳುತ್ತಾರೆ.

Stay up to date on all the latest ರಾಷ್ಟ್ರೀಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp