ಕೊರೋನಾ ಪ್ರಭಾವ ಬಿಂಬಿಸಲು ಔಷಧಿಗಳು, ಇಂಜೆಕ್ಷನ್ ಬಾಟಲುಗಳಿಂದ ದುರ್ಗಾಮಾತೆ ವಿಗ್ರಹ ರಚಿಸಿದ ಅಸ್ಸಾಂ ಕಲಾವಿದ

ಮಹಾಮಾರಿ ಕೊರೋನಾ ವೈರಸ್ ನಿಂದ ಇಡೀ ಜಗತ್ತೇ ತತ್ತರಿಸಿ ಹೋಗಿದ್ದು, ಸಾಂಕ್ರಾಮಿಕ ರೋಗ ಪ್ರಭಾವ ಬಿಂಬಿಸಲು 37 ವರ್ಷದ ಅಸ್ಸಾಂ ಕಲಾವಿದರೊಬ್ಬರು ಅವಧಿ ಮೀರಿದ ಟ್ಯಾಬ್ಲೆಟ್‌ಗಳು, ಕ್ಯಾಪ್ಸುಲ್‌ಗಳು ಮತ್ತು ಇಂಜೆಕ್ಷನ್ ಬಾಟಲುಗಳೊಂದಿಗೆ ದುರ್ಗಾಮಾತೆಯ ವಿಗ್ರಹವನ್ನು ರಚಿಸಿದ್ದಾರೆ.

Published: 23rd October 2020 03:19 PM  |   Last Updated: 23rd October 2020 03:19 PM   |  A+A-


durga

ದುರ್ಗಾಮಾತೆ ವಿಗ್ರಹ

Posted By : Lingaraj Badiger
Source : PTI

ಧುಬ್ರಿ: ಮಹಾಮಾರಿ ಕೊರೋನಾ ವೈರಸ್ ನಿಂದ ಇಡೀ ಜಗತ್ತೇ ತತ್ತರಿಸಿ ಹೋಗಿದ್ದು, ಸಾಂಕ್ರಾಮಿಕ ರೋಗ ಪ್ರಭಾವ ಬಿಂಬಿಸಲು 37 ವರ್ಷದ ಅಸ್ಸಾಂ ಕಲಾವಿದರೊಬ್ಬರು ಅವಧಿ ಮೀರಿದ ಟ್ಯಾಬ್ಲೆಟ್‌ಗಳು, ಕ್ಯಾಪ್ಸುಲ್‌ಗಳು ಮತ್ತು ಇಂಜೆಕ್ಷನ್ ಬಾಟಲುಗಳೊಂದಿಗೆ ದುರ್ಗಾಮಾತೆಯ ವಿಗ್ರಹವನ್ನು ರಚಿಸಿದ್ದಾರೆ.

ಸರ್ಕಾರಿ ನೌಕರರಾಗಿರುವ ಕಲಾವಿದ ಸಂಜಿಬ್ ಬಸಕ್ ಅವರು ಕಳೆದ ಕೆಲವು ವರ್ಷಗಳಿಂದ, ವಿಗ್ರಹವನ್ನು ವಿನ್ಯಾಸಗೊಳಿಸಲು ವಿವಿಧ ನವೀನ ಮತ್ತು ಪರಿಸರ ಸ್ನೇಹಿ ವಿಚಾರಗಳನ್ನು ಮಂಡಿಸಿದ್ದಾರೆ. ಆದರೆ ಈ ವರ್ಷ, COVID-19 ಬಿಕ್ಕಟ್ಟಿನ ಮಧ್ಯೆ, ಅವರು ಒಂದು ಬದಲಾವಣೆ ಮಾಡಲು ಬಯಸಿದ್ದರು. ಹೀಗಾಗಿ ಅವಧಿ ಮೀರಿದ ಔಷಧಿ ಮತ್ತು ಇಂಜೆಕ್ಷನ್ ನಿಂದ ದೇವಿಯ ವಿಗ್ರಹ ರಚಿಸಿದ್ದಾರೆ.

"ಲಾಕ್ ಡೌನ್ ಸಮಯದಲ್ಲಿ, ಜನರು ಅಗತ್ಯ ಔಷಧಿಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಲು ಔಷಧಿ ಅಂಗಡಿಗಳ ಮುಂದೆ ಕ್ಯೂ ನಿಂತಿರುವುದನ್ನು ನಾನು ಗಮನಿಸಿದ್ದೇನೆ. ಹಾಗ ಸಾಂಕ್ರಾಮಿಕ ರೋಗವನ್ನು ಬಿಂಬಿಸಲು ನಾನು ದುರ್ಗಾಮಾತೆಯ ವಿಗ್ರಹವನ್ನು ಔಷಧಿಯಿಂದ ತಯಾರಿಸಬಹುದೆಂಬ ಆಲೋಚನೆ ಬಂತು "ಎಂದು ಬಸಕ್ ಅವರು ಪಿಟಿಐಗೆ ತಿಳಿಸಿದ್ದಾರೆ.

ಕಳೆದ ಐದು ತಿಂಗಳಿಂದ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಸುಮಾರು 40,000 ಸ್ಟ್ರಿಪ್ ಮಾತ್ರೆಗಳು, ಕ್ಯಾಪ್ಸುಲ್ಗಳು ಮತ್ತು ವಿವಿಧ ಬಣ್ಣಗಳ ಇಂಜೆಕ್ಷನ್ ಬಾಟಲುಗಳನ್ನು ಸಂಗ್ರಹಿಸಿ ದೇವಿಯ ವಿಗ್ರಹ ರಚಿಸಿರುವುದಾಗಿ ಬಸಕ್ ಹೇಳಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp