ಆರ್ಥಿಕತೆ ರಿಂಗ್ ಮಾಸ್ಟರ್ ಹೇಳಿದಂತೆ ಕೇಳುವ ಸರ್ಕಸ್ ಸಿಂಹವಾಗಿದ್ದರೆ ಚೆನ್ನಾಗಿತ್ತು: ಮಾಜಿ ವಿತ್ತ ಸಚಿವ ಚಿದಂಬರಂ ಹೀಗೆ ಹೇಳಿದ್ದೇಕೆ?

ದೇಶದ ಆರ್ಥಿಕತೆ ಬಗ್ಗೆ ಆರ್ ಬಿಐ ಗೌರ್ನರ್, ಸೆಬಿ ಮುಖ್ಯಸ್ಥ ಹಾಗೂ ಡಿಇಎ ಕಾರ್ಯದರ್ಶಿ ಮಾತನಾಡಿರುವ ಬೆನ್ನಲ್ಲೇ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಪ್ರತಿಕ್ರಿಯೆ ನೀಡಿದ್ದು, ಆರ್ಥಿಕತೆ ರಿಂಗ್ ಮಾಸ್ಟರ್ ಮಾತು ಕೇಳುವ ಸರ್ಕಸ್ ಸಿಂಹವಾಗಿದ್ದರೆ ಚೆನ್ನಾಗಿರುತ್ತಿತ್ತು ಎನಿಸುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. 
ಚಿದಂಬರಂ
ಚಿದಂಬರಂ

ನವದೆಹಲಿ: ದೇಶದ ಆರ್ಥಿಕತೆ ಬಗ್ಗೆ ಆರ್ ಬಿಐ ಗೌರ್ನರ್, ಸೆಬಿ ಮುಖ್ಯಸ್ಥ ಹಾಗೂ ಡಿಇಎ ಕಾರ್ಯದರ್ಶಿ ಮಾತನಾಡಿರುವ ಬೆನ್ನಲ್ಲೇ ಮಾಜಿ ವಿತ್ತ  ಸಚಿವ ಪಿ.ಚಿದಂಬರಂ ಪ್ರತಿಕ್ರಿಯೆ ನೀಡಿದ್ದು, ಆರ್ಥಿಕತೆ ರಿಂಗ್ ಮಾಸ್ಟರ್ ಮಾತು ಕೇಳುವ ಸರ್ಕಸ್ ಸಿಂಹವಾಗಿದ್ದರೆ ಚೆನ್ನಾಗಿರುತ್ತಿತ್ತು ಎನಿಸುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. 

ಸರ್ಕಾರ ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿರುವ ಕುಟುಂಬಗಳ ಕೈಲಿ ಹಣ ಚಲಾವಾಣೆಯಾಗುವಂತೆ ನೋಡಿಕೊಳ್ಳುವವರೆಗೂ ಆರ್ಥಿಕತೆ ಪುನಶ್ಚೇತನ ಕಾಣುವುದಿಲ್ಲ ಎಂದೂ ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ. 

ಸರಣಿ ಟ್ವೀಟ್ ಮಾಡಿರುವ ಚಿದಂಬಂದರಂ, ಬಡವರ ತಟ್ಟೆಗೆ ಅನ್ನ ಹಾಗೂ ಕುಟುಂಬಗಳಿಗೆ ಹಣ ಬರುವ ವ್ಯವಸ್ಥೆಯಾಗುವವರೆಗೂ ಆರ್ಥಿಕತೆ ಪುನಶ್ಚೇತನಗೊಳ್ಳುವುದಿಲ್ಲ ಎಂದೂ ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.
 
ದೇಶದ ಆರ್ಥಿಕತೆ ಬಗ್ಗೆ ಆರ್ ಬಿಐ ಗೌರ್ನರ್, ಸೆಬಿ ಮುಖ್ಯಸ್ಥ ಹಾಗೂ ಡಿಇಎ ಕಾರ್ಯದರ್ಶಿ ಏಕ ಕಾಲಕ್ಕೆ ಮಾತನಾಡಿರುವುದರ ಹಿಂದೆ ಏನೋ ಮರ್ಮವಿದೆ ಎನಿಸುವುದಿಲ್ಲವೆ? ಎಂದು ಚಿದಂಬರಂ ಹೇಳಿದ್ದಾರೆ. 

ಆರ್ಥಿಕತೆ  ರಿಂಗ್ ಮಾಸ್ಟರ್ ಮಾತು ಕೇಳುವ ಸರ್ಕಸ್ ಸಿಂಹವಾಗಿದ್ದರೆ ಚೆನ್ನಾಗಿರುತ್ತಿತ್ತು ಎಂದುಕೊಳ್ಳುತ್ತೇನೆ, ಬಹುತೇಕ ಮಂದಿಗೆ ಖರೀದಿಸಲು ದುಡ್ಡೇ ಇಲ್ಲ, ಅಥವಾ ಮನಸಿಲ್ಲ, ಎಂಬುದನ್ನು ಈ ಮೂವರೂ ಮಹನೀಯರು ವಿತ್ತ ಸಚಿವರಿಗೆ ತಿಳಿಸಬೇಕೆಂದು ಚಿದಂಬರಂ ಹೇಳಿದ್ದಾರೆ. 

ನನ್ನ ಮಾತಲ್ಲಿ ಅನುಮಾನವಿದ್ದರೆ, ಬಿಹಾರದಲ್ಲಿನ ಮತದಾರರ ಮಾತು ಕೇಳಿ, ಕೆಲಸವೇ ಇರುವುದಿಲ್ಲ, ಇದ್ದರೂ ಕಡಿಮೆ ಕೆಲಸ, ಎಷ್ಟೋ ಮಂದಿಗೆ ವೇತವಿಲ್ಲ, ಇದ್ದರೂ ತುಂಬಾ ಕಡಿಮೆ, ಅವರೆಲ್ಲರ ಚಿಂತೆ ಬದುಕುವುದರತ್ತ ಆಗಿದೆಯೇ ಹೊರತು ಖರೀದಿಸುವತ್ತ ಅಲ್ಲ ಎಂದು ಮಾಜಿ ವಿತ್ತ ಸಚಿವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com