1,72,000 ವರ್ಷಗಳ ಹಿಂದೆ ಥಾರ್ ಮರುಭೂಮಿಯಲ್ಲಿ ಹರಿದು 'ಮರೆಯಾದ' ನದಿಯ ಕುರುಹು ಪತ್ತೆ!

172 ಸಾವಿರ ವರ್ಷಗಳ ಹಿಂದೆಯೇ ಬಿಕಾನೆರ್ ಬಳಿಯ ಮಧ್ಯ ಥಾರ್ ಮರುಭೂಮಿಯ ಮೂಲಕ ಹರಿಯುತ್ತಿದ್ದ "ಮರೆಯಾದ" ನದಿಯ ಕುರುಹುಗಳು ಪತ್ತೆಯಾಗಿದೆ. ಈ ಪ್ರದೇಶದಲ್ಲಿ ಮಾನವನ ವಾಸಕ್ಕೆ ಈ ನದಿ "ಆ" ಕಾಲದಲ್ಲಿ ಜೀವಸೆಲೆಯಾಗಿರಬಹುದು ಎಂದು ಸಂಶೋಧಕರು ಹೇಳಿದ್ದಾರೆ.
1,72,000 ವರ್ಷಗಳ ಹಿಂದೆ ಥಾರ್ ಮರುಭೂಮಿಯಲ್ಲಿ ಹರಿದು 'ಮರೆಯಾದ' ನದಿಯ ಕುರುಹು ಪತ್ತೆ!

ಜೈಪುರ್: 172 ಸಾವಿರ ವರ್ಷಗಳ ಹಿಂದೆಯೇ ಬಿಕಾನೆರ್ ಬಳಿಯ ಮಧ್ಯ ಥಾರ್ ಮರುಭೂಮಿಯ ಮೂಲಕ ಹರಿಯುತ್ತಿದ್ದ "ಮರೆಯಾದ" ನದಿಯ ಕುರುಹುಗಳು ಪತ್ತೆಯಾಗಿದೆ. ಈ ಪ್ರದೇಶದಲ್ಲಿ ಮಾನವನ ವಾಸಕ್ಕೆ ಈ ನದಿ "ಆ" ಕಾಲದಲ್ಲಿ ಜೀವಸೆಲೆಯಾಗಿರಬಹುದು ಎಂದು ಸಂಶೋಧಕರು ಹೇಳಿದ್ದಾರೆ.

’Quaternary Science Reviews’ ಪತ್ರಿಕೆಯಲ್ಲಿ  ಪ್ರಕಟವಾದ ಸಂಶೋಧನಾ ಲೇಖನ ಮಧ್ಯ ಥಾರ್ ಮರುಭೂಮಿಯ ನಲ್ ಕ್ವಾರಿಯಲ್ಲಿ ನದಿಹರಿಯುತ್ತಿದ್ದ ಅತ್ಯಂತ  ಪುರಾತನ ದಾಖಲೆಗಳನ್ನು ಬಹಿರಂಗಪಡಿಸಿದೆ.

ಜರ್ಮನಿಯ ದಿ ಮ್ಯಾಕ್ಸ್ ಪ್ಲ್ಯಾಂಕ್ ಇನ್ಸ್ಟಿಟ್ಯೂಟ್ ಫಾರ್ ದಿ ಸೈನ್ಸ್ ಆಫ್ ಹ್ಯೂಮನ್ ಹಿಸ್ಟರಿ, ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾನಿಲಯ ಮತ್ತು ಐಐಎಸ್ಇಆರ್ ಕೋಲ್ಕತ್ತಾದ ಸಂಶೋಧಕರು ನಡೆಸಿದ ಅಧ್ಯಯನವು ಶಿಲಾಯುಗದ ಮಾನವ ಇಂದು ನಾವು ಕಾಣುತ್ತಿರುವುದಕ್ಕಿಂತ ಬೇರೆಯದೇ ಆದ ಥಾರ್ ಮರುಭೂಮಿ ಭೂಪ್ರದೇಶದಲ್ಲಿ ವಾಸಿಸಿದ್ದರೆಂದು ಹೇಳಿದೆ.

ಈ ಸಾಕ್ಷ್ಯವು ಸರಿಸುಮಾರು 172 ಸಾವಿರ ವರ್ಷಗಳ ಹಿಂದಿನ ಮಾನವ ಚಟುವಟಿಕೆಯ ಜತೆ ಸಂಪರ್ಕ ಹೊಂದಿದೆ, ಇದು ರಾಜಸ್ಥಾನದ ಬಿಕಾನೇರ್ ಸಮೀಪವಿದ್ದು ಪ್ರಸ್ತುತ ಹರಿಯುತ್ತಿರುವ ನದಿಯಿಂದ 200 ಕಿಲೋಮೀಟರ್ ದೂರದಲ್ಲಿದೆ.ಈ ಸಂಶೋಧನೆಗಳು ಥಾರ್ ಮರುಭೂಮಿಯಾದ್ಯಂತದ ಆಧುನಿಕ ನದಿ ಶೋಧನೆ ಪುರಾವೆಗಳನ್ನು ಹಾಗೂ ಘಗ್ಗರ್-ಹಕ್ರಾ ನದಿಯ ಮರೆಯಾದ ಮಾರ್ಗವನ್ನು ತೋರಿಸುತ್ತವೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಮಧ್ಯ ಥಾರ್ ಮರುಭೂಮಿಯ ಮೂಲಕ ಹರಿಯುವ ನದಿಯ ಉಪಸ್ಥಿತಿಯು ಪ್ಯಾಲಿಯೊಲಿಥಿಕ್ ಜನಸಂಖ್ಯೆಗೆ ಜೀವಸೆಲೆ ನೀಡಿತ್ತು ಮತ್ತು ಇದು ಮಾನವ ವಲಸೆಗೆ ಪ್ರಮುಖ ಕಾರಿಡಾರ್ ಆಗಿರಬಹುದು ಎಂದು ಅವರು ಹೇಳಿದರು. ಥಾರ್ ಮರುಭೂಮಿಯ"ಮರೆಯಾದ"’ ನದಿಗಳ ಸಂಭಾವ್ಯ ಪ್ರಾಮುಖ್ಯತೆಯನ್ನು ಕಡೆಗಣಿಸಲಾಗಿದೆ ಎಂದು ಸಂಶೋಧಕರು ಗಮನಿಸಿದ್ದಾರೆ. "ಥಾರ್ ಮರುಭೂಮಿ ಶ್ರೀಮಂತ ಪೂರ್ವೇತಿಹಾಸವನ್ನು  ಹೊಂದಿದೆ, ಮತ್ತು ಶಿಲಾಯುಗದ ಜನ ಈ ಅರೆ-ಶುಷ್ಕ ಭೂಪ್ರದೇಶದಲ್ಲಿ  ಹೇಗೆ ಬದುಕಿದ್ದರೆಂದು, ಅಭಿವೃದ್ಧಿ ಹೊಂದಿದೆಯೆಂದು ದಾಖಲಿಸುವ ವ್ಯಾಪಕವಾದ ಪುರಾವೆಗಳನ್ನು ನಾವು ಬಹಿರಂಗಪಡಿಸುತ್ತಿದ್ದೇವೆ" ಎಂದು ದಿ ಮ್ಯಾಕ್ಸ್ ಪ್ಲ್ಯಾಂಕ್ ಇನ್ಸ್ಟಿಟ್ಯೂಟ್ ಫಾರ್ ದಿ ಸೈನ್ಸ್ ಆಫ್ ಹ್ಯೂಮನ್ ಹಿಸ್ಟರಿ ವಿಭಾಗದ ಜಿಂಬಾಬ್ ಬ್ಲಿಂಕ್‌ಹಾರ್ನ್ ಹೇಳಿದರು

"ಈ ಪ್ರದೇಶದಲ್ಲಿ ಜನರು ವಾಸಿಸಲು ನದಿಗಳು ಎಷ್ಟು ಮಹತ್ವದ್ದಾಗಿವೆ ಎಂದು ನಮಗೆ ತಿಳಿದಿದೆ, ಆದರೆ ಇತಿಹಾಸಪೂರ್ವದ ಪ್ರಮುಖ ಅವಧಿಗಳಲ್ಲಿ ನದಿ ವ್ಯವಸ್ಥೆಗಳು ಹೇಗಿದ್ದವು ಎಂಬುದರ ಕುರಿತು ನಮಗೆ ಹೆಚ್ಚಿನ ವಿವರಗಳಿಲ್ಲ"  ಅವರು ವಿವರಿಸಿದ್ದಾರೆ.

ಉಪಗ್ರಹ ಚಿತ್ರಣದ ಅಧ್ಯಯನಗಳು ಥಾರ್ ಮರುಭೂಮಿಯನ್ನು ಹಾದುಹೋಗುವ ನದಿ ಕಾಲುವೆಗಳ ದಟ್ಟವಾದ ಜಾಲವನ್ನು ತೋರಿಸಿದೆ ಎಂದು ಸಂಶೋಧಕರು ಹೇಳಿದ್ದಾರೆ. "ಈ ಅಧ್ಯಯನಗಳು ಹಿಂದೆ ನದಿಗಳು ಮತ್ತು ತೊರೆಗಳು ಎಲ್ಲಿ ಹರಿಯುತ್ತವೆ ಎನ್ನುವುದನ್ನು ಸೂಚಿಸಿದೆ. ಆದರೆ ಯಾವಾಗ ಇಲ್ಲಿ ನದಿಗಳಿದ್ದವೆನ್ನುವುದನ್ನು ಅದು ಹೇಳಲು ಸಾಧ್ಯವಿಲ್ಲ. " ಎಂದು ಅಣ್ಣಾ ವಿಶ್ವವಿದ್ಯಾಲಯದ ಪ್ರೊಫೆಸರ್ ಹೇಮಾ ಅಚ್ಯುತನ್ ವಿವರಿಸಿದರು.

"ಅಂತಹ ಚಾನಲ್‌ಗಳು ಎಷ್ಟು ಹಳೆಯವು ಎಂಬುದನ್ನು ನಿರೂಪಿಸಲು, ಮರುಭೂಮಿಯ ಮಧ್ಯದಲ್ಲಿ ನದಿಯ ಹರಿವಿನ ಪಾತ್ರದ ಬಗ್ಗೆ ನಾವು ಪುರಾವೆಗಳನ್ನು ಕಂಡುಹಿಡಿಯಬೇಕಿತ್ತು" ನಲ್ ಗ್ರಾಮದ ಬಳಿ ಕಲ್ಲುಗಣಿಗಾರಿಕೆ ಚಟುವಟಿಕೆಯಿಂದ ಬೆಳಕು ಕಂಡ  ನದಿ ಮರಳು ಮತ್ತು ಜಲ್ಲಿಕಲ್ಲುಗಳ ಆಳವಾದ ನಿಕ್ಷೇಪವನ್ನು ತಂಡವು ಅಧ್ಯಯನ ಮಾಡಿದೆ.  ವಿವಿಧ ನಿಕ್ಷೇಪಗಳನ್ನು ಅಧ್ಯಯನ ಮಾಡುವ ಮೂಲಕ ನದಿ ಹರಿಇವಿನ ಬಗೆಗೆ  ವಿವಿಧ ಹಂತಗಳನ್ನು ದಾಖಲಿಸಲು ಸಂಶೋಧಕರಿಗೆ ಸಾಧ್ಯವಾಯಿತು. "ಫ್ಲವಿಯಲ್ ನಿಕ್ಷೇಪಗಳ ಕೆಳಗಿನಿಂದ ಗಣನೀಯ ಮತ್ತು ಅತ್ಯಂತ ಸಕ್ರಿಯ ನದಿ ವ್ಯವಸ್ಥೆ ಇದ್ದದ್ದಕ್ಕೆ ನಾವು  ತಕ್ಷಣದ ಸಾಕ್ಷ್ಯಗಳನ್ನು ಪತ್ತೆ ಮಾಡಿದ್ದೇವೆ. ನದಿ ಮರಳಿನಲ್ಲಿರುವ ಸ್ಫಟಿಕ ಧಾನ್ಯಗಳನ್ನು ಕಂಡ ನಾವು  ಲುಮಿನೆನ್ಸನ್ಸ್ ಡೇಟಿಂಗ್ ಎಂಬ ವಿಧಾನವನ್ನು ಬಳಸಿದೆವು. ಇದರ ಫಲಿತಾಂಶ ನಲ್ ಪ್ರದೇಶದಲ್ಲಿ ಬೃಹತ್ ನದಿಯು ಯು ಸುಮಾರು 172 ಮತ್ತು 140 ಸಾವಿರ ವರ್ಷಗಳ ಹಿಂದೆ  ಹರಿಯುತ್ತಿತ್ತೆಂದು ಕಂಡುಹಿಡಿಯಲಾಗಿದೆ "

ಆ ಸಮಯದಲ್ಲಿ ಈ ಪ್ರದೇಶದಲ್ಲಿನ ಮಾನ್ಸೂನ್ ಇಂದಿಗಿಂತಲೂ ದುರ್ಬಲವಾಗಿತ್ತು. 95 ರಿಂದ 78 ಸಾವಿರ ವರ್ಷಗಳ ಹಿಂದೆ ಈ ಸ್ಥಳದಲ್ಲಿ ನದಿ ಹರಿವು ಮುಂದುವರಿದಿತ್ತು.ಅದರ ನಂತರ ಆ ಸ್ಥಳದಲ್ಲಿ ನದಿಯ ಉಪಸ್ಥಿತಿ ಸಂಬಂಧ ಸೀಮಿತ ಪುರಾವೆಗಳು ಮಾತ್ರವೇ ಉಳಿದಿದ್ದವು.ವು, 26 ಸಾವಿರ ವರ್ಷಗಳ ಹಿಂದೆ ಚಾನಲ್ ಅನ್ನುಚಿಕ್ಕ ಪ್ರಮಾಣದಲ್ಲಿ ಮತ್ತೆ ಸಕ್ರಿಯಗೊಳಿಸಿರುವುದಕ್ಕೆ ಅಧ್ಯಯನವು ಪುರಾವೆ ಕೊಟ್ಟಿದೆ. ಈ ಪ್ರದೇಶದಲ್ಲಿನ ದುರ್ಬಲ ಮಾನ್ಸೂನ್ ಚಟುವಟಿಕೆಯ ಒಂದು ಹಂತದಲ್ಲಿ ನದಿ ತನ್ನ ಪ್ರಬಲ ಹರಿವಿನಿಂದ  ಥಾರ್ ಮರುಭೂಮಿಯಲ್ಲಿ ವಾಸಿಸಲು ಅನುವು ಮಾಡಿಕೊಡುವ ಮಾನವ ಕುಲಕ್ಕೆ ಅನುಕೂಲಕರವಾಗಿತ್ತು ಈ ನದಿ ಸಕ್ರಿಯವಾಗಿದ್ದ ಕಾಲಮಿತಿಯು ಈ ಪ್ರದೇಶದಲ್ಲಿನ ಮಾನವ ನಡವಳಿಕೆಯಲ್ಲಿ ಗಮನಾರ್ಹ ಬದಲಾವಣೆಗಳಿಗೆ ಸಾಕ್ಷಿಯಾಗಿತ್ತು.  ಇದು ಆಫ್ರಿಕಾದಿಂದ ಹೋಮೋ ಸೇಪಿಯನ್ನರ ಆರಂಭಿಕ ವಲಸೆಯೊಂದಿಗೆ  ಸಂಬಂಧ ಹೊಂದಿದೆ ಎಂದು ಸಂಶೋಧಕರು ಹೇಲಿದ್ದಾರೆ.

"ಈ ನದಿ ಥಾರ್ ಮರುಭೂಮಿಯಲ್ಲಿ, ದಕ್ಷಿಣ ಏಷ್ಯಾದಾದ್ಯಂತ ಮತ್ತು ಅದರಾಚೆ ಮಾನವ ವಿಕಾಸವನ್ನು ಅರ್ಥಮಾಡಿಕೊಳ್ಳುವ ನಿರ್ಣಾಯಕ ಕಾಲಾವಧಿಯಲ್ಲಿ ಹರಿಯಿತು" ಎಂದುಬ್ಲಿಂಕ್‌ಹಾರ್ನ್ ಹೇಳುತ್ತಾರೆ.

"ಇದು ನಮ್ಮ ಮಾನವ ಕುಲದ  ಆರಂಭಿಕ ಸದಸ್ಯರಾದ ಹೋಮೋ ಸೇಪಿಯನ್ಸ್, ಮೊದಲು ಮಳೆಗಾಲ ಎದುರಿಸಿದ ಸಮಯವಾಗಿದೆ.ಮತ್ತು ಥಾರ್ ಮರುಭೂಮಿಯನ್ನು ದಾಟಿದ ಭೂಪ್ರದೇಶವನ್ನು ಇದು ಸೂಚಿಸುತ್ತದೆ, ಇಂದು ನಾವು  ನೋಡಬಹುದಾದ ಭೂಪ್ರದೇಶಕ್ಕೆ ಇದು ತುಂಬಾ ಭಿನ್ನವಾಗಿರಬಹುದು" ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com