ಹೈದರಾಬಾದ್ ಪ್ರವಾಹ ಸಂತ್ರಸ್ತರಿಗೆ ಮಾಧ್ಯಮ ಕ್ಷೇತ್ರದ ದಿಗ್ಗಜ ರಾಮೋಜಿ ರಾವ್ ರಿಂದ 5 ಕೋಟಿ ರೂ. ನೆರವು

ಭಾರೀ ಮಳೆಯಿಂದ ಪ್ರವಾಹಕ್ಕೆ ತುತ್ತಾಗಿರುವ ಹೈದರಾಬಾದ್ ನ ಸಂತ್ರಸ್ತರಿಗೆ ಮಾಧ್ಯಮ ಕ್ಷೇತ್ರದ ದಿಗ್ಗಜ ಮತ್ತು ರಾಮೋಜಿ ಸಮೂಹದ ಅಧ್ಯಕ್ಷ ರಾಮೋಜಿ ರಾವ್ ಅವರು 5 ಕೋಟಿ ರೂಪಾಯಿ ನೆರವು ನೀಡಿದ್ದಾರೆ.

Published: 23rd October 2020 03:57 PM  |   Last Updated: 23rd October 2020 03:57 PM   |  A+A-


Hyderabad reels under flood fury

ಹೈದರಾಬಾದ್ ಮಳೆ

Posted By : Lingaraj Badiger
Source : UNI

ಹೈದರಾಬಾದ್: ಭಾರೀ ಮಳೆಯಿಂದ ಪ್ರವಾಹಕ್ಕೆ ತುತ್ತಾಗಿರುವ ಹೈದರಾಬಾದ್ ನ ಸಂತ್ರಸ್ತರಿಗೆ ಮಾಧ್ಯಮ ಕ್ಷೇತ್ರದ ದಿಗ್ಗಜ ಮತ್ತು ರಾಮೋಜಿ ಸಮೂಹದ ಅಧ್ಯಕ್ಷ ರಾಮೋಜಿ ರಾವ್ ಅವರು 5 ಕೋಟಿ ರೂಪಾಯಿ ನೆರವು ನೀಡಿದ್ದಾರೆ.

5 ಕೋಟಿ ರೂಪಾಯಿ ಚೆಕ್ ಅನ್ನು ಪೌರಾಡಳಿತ ಮತ್ತು ನಗರಾಭಿವೃದ್ಧಿ ಸಚಿವ ಕೆ ಟಿ ರಾಮರಾವ್ ಅವರಿಗೆ ರಾಮೋಜಿ ಸಮೂಹದ ಪ್ರತಿನಿಧಿ ಹಸ್ತಾಂತರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನೂರು ವರ್ಷಗಳಲ್ಲೇ ಮೊದಲ ಬಾರಿಗೆ ಹೈದರಾಬಾದ್ ನಗರ ಭಾರೀ ಮಳೆಯಿಂದ ಪ್ರವಾಹಕ್ಕೆ ತುತ್ತಾಗಿರುವುದಕ್ಕೆ ನೊಂದಿರುವ ರಾಮೋಜಿರಾವ್ ಈ ನೆರವನ್ನು ನೀಡಿದ್ದಾರೆ.

ತೆಲಂಗಾಣದಲ್ಲಿ ವಾಯಭಾರ ಕುಸಿತದಿಂದ ಭಾರೀ ಮಳೆಯಿಂದಾಗಿ ರಾಜಧಾನಿ ಹೈದರಾಬಾದ್ ಸೇರಿದಂತೆ ಅನೇಕ ಪಟ್ಟಣಗಳು ಮತ್ತು ಪ್ರದೇಶಗಳು ಪ್ರವಾಹಕ್ಕೆ ತುತ್ತಾಗಿವೆ. ಅಕಾಲಿಕ ಮಳೆಯಿಂದ ಸಾಮಾನ್ಯ ಜನಜೀವನಕ್ಕೆ ತೊಂದರೆಯಾಗಿದ್ದು, ಜನರು ತುಂಬಾ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಅನೇಕ ಸಂಘ-ಸಂಸ್ಥೆಗಳಲ್ಲದೆ, ಇತರ ರಾಜ್ಯಗಳ ಸರ್ಕಾರಗಳೂ ಸಹಾಯ ಹಸ್ತ ನೀಡಿವೆ. 

Stay up to date on all the latest ರಾಷ್ಟ್ರೀಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp