ನೌಕಪಡೆಯ ಯುದ್ಧ ಸನ್ನದ್ಧತೆಯ ಪ್ರದರ್ಶನ: ಗುರಿ ಹೊಡೆಯುವ ಕ್ಷಿಪಣಿ ವಿಡಿಯೋ ಬಿಡುಗಡೆ

ಯುದ್ಧ ಸನ್ನದ್ಧತೆಯ ಪ್ರದರ್ಶನದಲ್ಲಿ, ಭಾರತೀಯ ನೌಕಾಪಡೆ ಶುಕ್ರವಾರ ಅರಬೀಯನ್ ಸಮುದ್ರದಲ್ಲಿ  ನಿಖರತೆ ಯೊಂದಿಗೆ ಹಡಗು ವಿರೋಧಿ ಕ್ಷಿಪಣಿ ಮುಳುಗುವ ಹಡಗೊಂದನ್ನು ನಾಶಪಡಿಸುವ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಯುದ್ಧ ಸನ್ನದ್ಧತೆಯ ಪ್ರದರ್ಶನದಲ್ಲಿ, ಭಾರತೀಯ ನೌಕಾಪಡೆ ಶುಕ್ರವಾರ ಅರಬೀಯನ್ ಸಮುದ್ರದಲ್ಲಿ  ನಿಖರತೆ ಯೊಂದಿಗೆ ಹಡಗು ವಿರೋಧಿ ಕ್ಷಿಪಣಿ ಮುಳುಗುವ ಹಡಗೊಂದನ್ನು ನಾಶಪಡಿಸುವ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.

ವಿಮಾನ ವಾಹಕ ಐಎನ್ ಎಸ್ ವಿಕ್ರಮಾದಿತ್ಯ ಮತ್ತು ಅನೇಕ ಯುದ್ಧ ನೌಕೆಗಳು, ಹೆಲಿಕಾಪ್ಟ್ ರ್ ಗಳು ಮತ್ತಿತರ ನೌಕಪಡೆಯೊಂದಿಗೆ ಮೆಗಾ ನೌಕ ಕಾರ್ಯಚಾರಣೆಯ ಭಾಗವಾಗಿ ಕಾರ್ವೆಟ್ ಐಎನ್ ಎಸ್ ಪ್ರಬಲ್  ನಿಂದ ಈ ಕ್ಷಿಪಣಿಯನ್ನು ಹಾರಿಸಲಾಯಿತು.

ಗುರಿ ಇಡಲಾಗಿದ್ದ ಹಳೆಯ ವಿಮಾನವನ್ನು ಗರಿಷ್ಠ ಸಾಂದ್ರತೆಯಲ್ಲಿ ಭಯಾನಕವಾಗಿ, ನಿಖರತೆಯೊಂದಿಗೆ  ಕ್ಷಿಪಣಿ ಹೊಡೆದಿರುವುದಾಗಿ ಭಾರತೀಯ ನೌಕಪಡೆಯ ವಕ್ತಾರರು ಟ್ವೀಟ್ ಮಾಡಿದ್ದಾರೆ.

ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಗುರುವಾರ ಕಡಲು ಆಧಾರಿತ ವಿವಿಧ ಸ್ಥಳಗಳಲ್ಲಿ ಮತ್ತು ಸಮುದ್ರದಲ್ಲಿ ತನ್ನ ಸೈನ್ಯದ ಕಾರ್ಯಾಚರಣೆಯ ಸಿದ್ಧತೆಯನ್ನು ಪರಿಶೀಲಿಸಿದ್ದಾರೆ.

ಭಾರತದ ಏಕೈಕ ವಿಮಾನವಾಹಕ ನೌಕೆಯಾದ ಐಎನ್‌ಎಸ್ ವಿಕ್ರಮಾದಿತ್ಯ ಬಗ್ಗೆ ನೌಕಾಪಡೆಯ ಕ್ಯಾರಿಯರ್ ಬ್ಯಾಟಲ್ ಗ್ರೂಪ್‌ನ ಆಯ್ದ ಗುಂಪಿನವರನ್ನು ಉದ್ದೇಶಿಸಿ ಅವರು ಮಾತನಾಡಿದ್ದು,   ಒಟ್ಟಾರೆ ಯುದ್ಧ ಸಿದ್ಧತೆಯನ್ನು ಪರಿಶೀಲಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತ ಹಾಗೂ ಚೀನಾ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚೀನಾಕ್ಕೆ ಸಂದೇಶ ಕಳುಹಿಸುವ ಪ್ರಯತ್ನದಲ್ಲಿ ಭಾರತೀಯ ನೌಕಾಪಡೆ ಹಿಂದೂ ಮಹಾಸಾಗರ ಪ್ರದೇಶದಲ್ಲಿ ತನ್ನ ನಿಯೋಜನೆಯನ್ನು ಗಮನಾರ್ಹವಾಗಿ ಹೆಚ್ಚಿಸಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದ ಹೊರತಾಗಿಯೂ  ಭಾರತೀಯ ನೌಕಾಪಡೆ ಹೆಚ್ಚಿನ ಕಾರ್ಯಾಚರಣೆ ಮತ್ತು ಯುದ್ಧ-ಸಿದ್ಧತೆಯನ್ನು ಮುಂದುವರಿಸಿದೆ.  ಯುದ್ಧ ನೌಕೆಗಳು, ಜಲಾಂತರ್ಗಾಮಿ ನೌಕೆಗಳು ಮತ್ತು ವಿಮಾನ ಸ್ಕ್ವಾಡ್ರನ್‌ಗಳನ್ನು ಆಯಾ ಕಟ್ಟಿನ ಸ್ಥಳಗಳಲ್ಲಿ ನಿಯೋಜಿಸುವ ಮೂಲಕ ಕಡಲ ವಲಯದಲ್ಲಿನ ಸವಾಲುಗಳನ್ನು ಎದುರಿಸಲು ಸಂಪೂರ್ಣವಾಗಿ ಸಿದ್ಧವಾಗಿರುವುದಾಗಿ ನೌಕಾಪಡೆ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com