ಅರ್ನಬ್ ಗೋಸ್ವಾಮಿ 'ನೇಷನ್ ವಾಂಟ್ಸ್ ಟು ನೋ' ಟ್ಯಾಗ್ ಲೈನ್ ಬಳಕೆ ಮಾಡಬಹುದು: ದೆಹಲಿ ಹೈಕೋರ್ಟ್

ಟೈಮ್ಸ್ ನೌ ಸುದ್ದಿವಾಹಿನಿ ತೊರೆದು ರಿಪಬ್ಲಿಕ್ ಟಿವಿ ಆರಂಭಿಸಿರುವ ಪತ್ರಕರ್ತ ಅರ್ನಬ್ ಗೋಸ್ವಾಮಿ 'ನೇಷನ್ ವಾಂಟ್ಸ್ ಟು ನೋ' ಟ್ಯಾಗ್ ಲೈನ್ ಬಳಕೆ ಮಾಡಬಹುದು ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.
ಅರ್ನಬ್ ಗೋಸ್ವಾಮಿ
ಅರ್ನಬ್ ಗೋಸ್ವಾಮಿ

ನವದೆಹಲಿ: ಟೈಮ್ಸ್ ನೌ ತೊರೆದು ರಿಪಬ್ಲಿಕ್ ಟಿವಿ ಆರಂಭಿಸಿರುವ ಪತ್ರಕರ್ತ ಅರ್ನಬ್ ಗೋಸ್ವಾಮಿ 'ನೇಷನ್ ವಾಂಟ್ಸ್ ಟು ನೋ' ಟ್ಯಾಗ್ ಲೈನ್ ಬಳಕೆ ಮಾಡಬಹುದು ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.

ಟೈಮ್ಸ್ ನೌ ಸಂಸ್ಥೆಯ ಬೆನೆಟ್ ಕೋಲ್ಮನ್ ಮತ್ತು ಕಂಪನಿ ಲಿಮಿಟೆಡ್ ಸಂಸ್ಥೆ ಸಲ್ಲಿಕೆ ಮಾಡಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಜಯಂತ್ ನಾಥ್ ನೇತೃತ್ವದ ಪೀಠ, ಅರ್ನಬ್ ಗೋಸ್ವಾಮಿ ಅವರು ನೇಷನ್ ವಾಂಟ್ಸ್ ಟು ನೋ' ಟ್ಯಾಗ್ ಲೈನ್ ಅನ್ನು ಅವರ ಭಾಷಣ ಅಥವಾ  ಪ್ರಸ್ತುತಿಯಲ್ಲಿ ಬಳಕೆ ಮಾಡಿಕೊಳ್ಳಬಹುದು ಎಂದು ಹೇಳಿದೆ. 

ಅಂತೆಯೇ NATION WANTS TO KNOW ಎಂಬ ಟ್ಯಾಗ್‌ಲೈನ್‌ಗೆ ಸಂಬಂಧಿಸಿದಂತೆ, ಈ ಹಂತದಲ್ಲಿ ದೂರುದಾರ (ಬೆನೆಟ್ ಕೋಲ್ಮನ್) ಪರವಾಗಿ ಯಾವುದೇ ಮಧ್ಯಂತರ ಆದೇಶವನ್ನು ರವಾನಿಸಲಾಗುವುದಿಲ್ಲ. ಈ ಟ್ಯಾಗ್ ಲೈನ್ ಅನ್ನು ಅರ್ನಬ್ ಗೋಸ್ವಾಮಿ ಅಥವಾ ರಿಪಬ್ಲಿಕ್ ಟಿವಿ  ಮಾಲೀಕತವ ಹೊಂದಿರುವ ಎಆರ್ ಜಿ ಔಟ್ಲಿಯರ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ತನ್ನ  ಸರಕು/ಸೇವೆಗಳಿಗೆ ಸಂಬಂಧಿಸಿದಂತೆ ಟ್ರೇಡ್ಮಾರ್ಕ್ ಆಗಿ 'ನೇಷನ್ ವಾಂಟ್ಸ್ ಟು ನೋ' ಪದವನ್ನು ಬಳಸಲು ಬಯಸಿದರೆ, ಅವರು ಅಂತಹ ಬಳಕೆಗಾಗಿ ಜವಾಬ್ದಾರಿ ಹೊರಬೇಕಾಗುತ್ತದೆ. ಈ ಸಂಬಂಧ  ನಿಯಮಿತವಾಗಿ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕಾಗುತ್ತದೆ ಎಂದೂ ಹೇಳಿದ್ದಾರೆ.

ದೂರುದಾರ ಸಂಸ್ಥೆ ಟೈಮ್ಸ್ ನೌ ಮಾಲೀಕತ್ವ ಹೊಂದಿರುವ ಬೆನೆಟ್ ಕೋಲ್ಮನ್ ಮತ್ತು ಕಂಪನಿ ಲಿಮಿಟೆಡ್, ಈ ಹಿಂದೆ ಅರ್ನಬ್ ಗೋಸ್ವಾಮಿ ಪ್ರಸ್ತುತ ಪಡಿಸುತ್ತಿದ್ದ ನ್ಯೂಸ್ ಹವರ್ ಮತ್ತು ಆ ಕಾರ್ಯಕ್ರಮದಲ್ಲಿ ಅವರು ಬಳಕೆ ಮಾಡುತ್ತಿದ್ದ NATION WANTS TO KNOW ಟ್ಯಾಗ್ ಲೈನ್ ತಮ್ಮ  ಟೈಮ್ಸ್ ನೌ ಸಂಸ್ಥೆಯ ಸ್ವತ್ತಾಗಿದ್ದು, ಇದರ ಬಳಕೆ ಮಾಡದಂತೆ ಎಆರ್ ಜಿ ಔಟ್ಲಿಯರ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಹಾಗೂ ಅರ್ನಬ್ ಗೋಸ್ವಾಮಿಗೆ ಸೂಚನೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು. ಅಲ್ಲದೆ ಈ ಅರ್ಜಿ ಸಂಬಂಧ ಇಂಜಕ್ಷನ್ ಆರ್ಡ್ ತಂದಿದ್ದ ಸಂಸ್ಥೆ ಎಆರ್ ಜಿ ಔಟ್ಲಿಯರ್  ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಹಾಗೂ ಅರ್ನಬ್ ಗೋಸ್ವಾಮಿ ಟ್ಯಾಗ್ ಲೈನ್ ಬಳಕೆ ಮಾಡದಂತೆ ತಾತ್ಕಾಲಿಕ ತಡೆ ಹೇರಿತ್ತು. ಆದರೆ ಇದೀಗ ಪತ್ರಕರ್ತ ಅರ್ನಬ್ ಗೋಸ್ವಾಮಿ ತಮ್ಮ ನೆಚ್ಚಿನ ಮತ್ತು ಖ್ಯಾತಿಯ NATION WANTS TO KNOW ಪದ ಬಳಕೆಗೆ ಮುಕ್ತರಾಗಿದ್ದಾರೆ.

2006ರಲ್ಲಿ ಟೈಮ್ಸ್ ನೌ ಸಂಸ್ಥೆ ನ್ಯೂಸ್ ಹವರ್ ಕಾರ್ಯಕ್ರಮವನ್ನು ಆರಂಭಿಸಿತ್ತು. ಈ ಚರ್ಚಾ ಕಾರ್ಯಕ್ರಮದಲ್ಲಿ ಅರ್ನಬ್ ಗೋಸ್ವಾಮಿ ಬಳಕೆ ಮಾಡುತ್ತಿದ್ದ NATION WANTS TO KNOW ಎಂಬ ಟ್ಯಾಗ್‌ಲೈನ್‌ ವ್ಯಾಪಕ ಖ್ಯಾತಿ ಪಡೆದಿತ್ತು,. ಇದೇ ಟ್ಯಾಗ್ ಲೈನ್ ಸೋಷಿಯಲ್ ಮೀಡಿಯಾಗಳಲ್ಲಿ  ಮೀಮ್ ಗಳಿಗೂ ಬಳಸಿಕೊಳ್ಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com