ದೇಶಾದ್ಯಂತ ಕೋವಿಡ್-19 ಲಸಿಕೆ ಉಚಿತವಾಗಿ ಲಭ್ಯವಾಗಬೇಕು: ಮುಖ್ಯಮಂತ್ರಿ ಕೇಜ್ರಿವಾಲ್ 

ಎಲ್ಲ ಜನರು ಕೊರೋನಾವೈರಸ್ ನಿಂದ ತೊಂದರೆ ಎದುರಿಸುತ್ತಿದ್ದು, ದೇಶಾದ್ಯಂತ ಕೋವಿಡ್-19 ಲಸಿಕೆ ಉಚಿತವಾಗಿ ಲಭ್ಯವಿರುವಂತೆ ವ್ಯವಸ್ಥೆ ಮಾಡಬೇಕೆಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಹೇಳಿದ್ದಾರೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

ನವದೆಹಲಿ: ಎಲ್ಲ ಜನರು ಕೊರೋನಾವೈರಸ್ ನಿಂದ ತೊಂದರೆ ಎದುರಿಸುತ್ತಿದ್ದು, ದೇಶಾದ್ಯಂತ ಕೋವಿಡ್-19 ಲಸಿಕೆ ಉಚಿತವಾಗಿ ಲಭ್ಯವಿರುವಂತೆ ವ್ಯವಸ್ಥೆ ಮಾಡಬೇಕೆಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಹೇಳಿದ್ದಾರೆ.

ಕೋವಿಡ್-19 ಲಸಿಕೆ ಇನ್ನೂ ಸಿದ್ಧವಾಗದಿದ್ದರೂ ಉಚಿತವಾಗಿ ಕೊರೋನಾ ಲಸಿಕೆ ವಿತರಿಸಲಾಗುವುದು ಎಂದು ಬಿಜೆಪಿ ಬಿಹಾರ ವಿಧಾನಸಭಾ ಪ್ರಣಾಳಿಕೆಯಲ್ಲಿ ಸೇರಿಸಿದ ಬಳಿಕ ಎಲ್ಲ ಜನರಿಗೂ ಉಚಿತವಾಗಿ ವಿತರಿಸಬೇಕೆಂಬ ಚರ್ಚೆಯೂ ಆರಂಭವಾಗಿದೆ.

ಈಶಾನ್ಯ ದೆಹಲಿಯಲ್ಲಿ ಎರಡು ಮೇಲು ಸೇತುವೆ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್, ಇಡೀ ದೇಶ ಕೋವಿಡ್-19 ಲಸಿಕೆಯನ್ನು ಉಚಿತವಾಗಿ ಪಡೆಯಬೇಕು, ಇದು ಇಡೀ ದೇಶದ ಹಕ್ಕಾಗಿದೆ. ಎಲ್ಲ ಜನರು ಕೊರೋನಾ ಸೋಂಕಿನಿಂದ ತೊಂದರೆಗೊಳಗಾಗಿದ್ದು, ದೇಶದಲ್ಲಿ ಉಚಿತವಾಗಿ ಲಸಿಕೆಯನ್ನು ನೀಡಬೇಕು ಎಂದರು.

ಒಂದು ಬಾರಿ ಕೊರೋನಾವೈರಸ್ ಲಸಿಕೆ ದೊರತ ಬಳಿಕ, ವಿಶೇಷ ಕೋವಿಡ್-19  ರೋಗ ನಿರೋಧಕ ಕಾರ್ಯಕ್ರಮದಡಿ ಕೇಂದ್ರವು ನೇರವಾಗಿ ಔಷಧವನ್ನು ಸಂಗ್ರಹಿಸಿ ಆದ್ಯತೆಯ ಗುಂಪುಗಳಿಗೆ ಲಭ್ಯವಾಗುವಂತೆ ವಿತರಿಸಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com