ದುರ್ಗಾ ಪೂಜೆಗೆ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಶುಭಾಶಯ

ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌,ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ದೇಶದ ಜನತೆಗೆ ದುರ್ಗಾ ಪೂಜೆಯ ಶುಭ ಹಾರೈಸಿದ್ದಾರೆ.
ದುರ್ಗಾ ಮಾತೆ
ದುರ್ಗಾ ಮಾತೆ

ನವದೆಹಲಿ: ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌,ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ದೇಶದ ಜನತೆಗೆ ದುರ್ಗಾ ಪೂಜೆಯ ಶುಭ ಹಾರೈಸಿದ್ದಾರೆ.

ಟ್ವೀಟ್ ಮೂಲಕ ಶುಭ ಕೋರಿರುವ ರಾಷ್ಟ್ರಪತಿ, 'ದೇಶದ ನಾಗರಿಕರಿಗೆ ದುರ್ಗಾ ಪೂಜೆಯ ಶುಭಾಶಯಗಳು. ಇದು ಕೆಟ್ಟದ್ದರ ಮೇಲೆ ಒಳ್ಳೆಯತನ ಜಯಿಸಿದ ಆಚರಣೆಯಾಗಿದೆ. ಈ ಸಂದರ್ಭದಲ್ಲಿ, ನಮ್ಮ ಮಹಿಳಾ ಪ್ರಜೆಗಳನ್ನು ಗೌರವಿಸಲು ಮತ್ತು ಅಧಿಕಾರ ನೀಡಲು ನಾವೆಲ್ಲರೂ ದೃಢ ಸಂಕಲ್ಪ ತೊಡಬೇಕು. ದುರ್ಗಾ  ದೇವಿಯು ನಮ್ಮ ಜೀವನವನ್ನು ಸಂತೋಷ, ಶಾಂತಿ ಮತ್ತು ಸಮೃದ್ಧಿಯಿಂದ ಶ್ರೀಮಂತಗೊಳಿಸಲಿ' ಎಂದು ಟ್ವೀಟ್ ಮಾಡಿದ್ದಾರೆ.

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ದುರ್ಗಾ ಪೂಜೆಯ ಶುಭಾಶಯಗಳು, ದುರ್ಗಾ ದೇವಿಯು ನಮ್ಮೆಲ್ಲರನ್ನು ಆಶೀರ್ವದಿಸಲಿ. ಕೆಟ್ಟದ್ದರ ಮೇಲಿನ ಒಳ್ಳೆಯ ವಿಜಯವನ್ನು ನಾವು ಆಚರಿಸುತ್ತಿದ್ದಂತೆ, ಸಮಾಜದ ದುಷ್ಕೃತ್ಯಗಳನ್ನು ನಿರ್ಮೂಲನೆ ಮಾಡಲು ಮತ್ತು ನಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸುರಕ್ಷಿತ,  ಆರೋಗ್ಯಕರ ಮತ್ತು ಸಮೃದ್ಧವಾಗಿಸಲು ನಾವು ನಿರ್ಧರಿಸೋಣ' ಎಂದು ಕರೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, "ಪ್ರತಿಯೊಬ್ಬರಿಗೂ ಮಹಾ ಅಷ್ಠಮಿಯ ಶುಭಾಷಯಗಳು. ದುರ್ಗಾ ಮಾತೆ ನಮಗೆಲ್ಲರಿಗೂ ಸಂತೋಷ, ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ಒದಗಿಸಲಿ" ಎಂದು ಹಾರೈಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com