ಮಧ್ಯ ಪ್ರದೇಶ ಉಪ ಚುನಾವಣೆ: ಮತ್ತೊಬ್ಬ ಕಾಂಗ್ರೆಸ್ ಶಾಸಕ ರಾಜೀನಾಮೆ, ಬಿಜೆಪಿ ಸೇರ್ಪಡೆ

ಮಧ್ಯ ಪ್ರದೇಶದ ಕಾಂಗ್ರೆಸ್ ಶಾಸಕ ರಾಹುಲ್ ಲೋಧಿ ಅವರು ಪಕ್ಷ ಮತ್ತು ಅವರ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ನವೆಂಬರ್ 3 ರ ರಾಜ್ಯ ಉಪಚುನಾವಣೆಗೆ ಮುನ್ನವೇ ಭಾನುವಾರ ಆಡಳಿತಾರೂಢ ಬಿಜೆಪಿ ಸೇರಿದರು.
ಬಿಜೆಪಿ-ಕಾಂಗ್ರೆಸ್
ಬಿಜೆಪಿ-ಕಾಂಗ್ರೆಸ್

ಭೋಪಾಲ್: ಮಧ್ಯ ಪ್ರದೇಶದ ಕಾಂಗ್ರೆಸ್ ಶಾಸಕ ರಾಹುಲ್ ಲೋಧಿ ಅವರು ಪಕ್ಷ ಮತ್ತು ಅವರ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ನವೆಂಬರ್ 3 ರ ರಾಜ್ಯ ಉಪಚುನಾವಣೆಗೆ ಮುನ್ನವೇ ಭಾನುವಾರ ಆಡಳಿತಾರೂಢ ಬಿಜೆಪಿ ಸೇರಿದರು. ಇದರೊಂದಿಗೆ ಕಳೆದ ಮಾರ್ಚ್ ನಿಂದ ಇದುವರೆಗೆ ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ ಶಾಸಕರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.

"ಲೋಧಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಮತ್ತು ಅವರ ರಾಜೀನಾಮೆಯನ್ನು ಇಂದು ಅಂಗೀಕರಿಸಲಾಗಿದೆ" ಎಂದು ವಿಧಾನಸಭೆ ಹಂಗಾಮಿ ಸ್ಪೀಕರ್ ರಾಮೇಶ್ವರ್ ಶರ್ಮಾ ಅವರು ತಿಳಿಸಿದ್ದಾರೆ.

"ಲೋಧಿ ಅವರು ಶುಕ್ರವಾರ ತಮ್ಮ ರಾಜೀನಾಮೆಯನ್ನು ನೀಡಿದ್ದರು, ಆದರೆ ಎರಡು ದಿನಗಳವರೆಗೆ ಅದರ ಬಗ್ಗೆ ಮರುಚಿಂತನೆ ಮಾಡಲು ನಾನು ಅವರನ್ನು ಕೇಳಿದೆ. ಅವರು ನಿನ್ನೆ ರಾತ್ರಿ ನನಗೆ ಕರೆ ಮಾಡಿ, ರಾಜೀನಾಮೆ ಬಗ್ಗೆ ದೃಢವಾಗಿದ್ದು, ರಾಜೀನಾಮೆಯನ್ನು ಇಂದು ಶುಭ ದಿನದಂದು ಅಂಗೀಕರಿಸುವಂತೆ ಕೇಳಿಕೊಂಡಿದ್ದರು" ಎಂದು ಶರ್ಮಾ ಹೇಳಿದ್ದಾರೆ.

ಈ ಮಧ್ಯೆ, ಮತ್ತೊಬ್ಬ ಕಾಂಗ್ರೆಸ್ ಶಾಸಕ ಸಹ ಪಕ್ಷವನ್ನು ತೊರೆಯಬಹುದು ಎಂಬ ಉಹಾಪೋಹಗಳಿವೆ. ನವೆಂಬರ್ 3 ರಂದು ರಾಜ್ಯದ 28 ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com