'ಜಿಎಸ್‌ಟಿ ದೋಷವನ್ನು ಸರಿಪಡಿಸಿ ಇಲ್ಲವೇ ಹಳೇ ತೆರಿಗೆ ವ್ಯವಸ್ಥೆ ಜಾರಿಮಾಡಿ: ಮೋದಿ ಸರ್ಕಾರಕ್ಕೆ ಉದ್ಧವ್ ಠಾಕ್ರೆ 

ಈಗ ಜಾರಿಯಲ್ಲಿರು ಜಿಎಸ್‌ಟಿ ತೆರಿಗೆ ವ್ಯವಸ್ಥೆ ದೋಷಪೂರಿತವಾಗಿದ್ದು ತಿದ್ದುಪಡಿಯಾಗುವ ಅಗತ್ಯವಿದೆ ಇಲ್ಲವೆ ಕೇಂದ್ರವು ಹಳೆಯ ತೆರಿಗೆ ವಸ್ಥೆಯನ್ನು ಮರಳಿ ತರಬೇಕಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ

ಮುಂಬೈ: ಈಗ ಜಾರಿಯಲ್ಲಿರು ಜಿಎಸ್‌ಟಿ ತೆರಿಗೆ ವ್ಯವಸ್ಥೆ ದೋಷಪೂರಿತವಾಗಿದ್ದು ತಿದ್ದುಪಡಿಯಾಗುವ ಅಗತ್ಯವಿದೆ ಇಲ್ಲವೆ ಕೇಂದ್ರವು ಹಳೆಯ ತೆರಿಗೆ ವಸ್ಥೆಯನ್ನು ಮರಳಿ ತರಬೇಕಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ

ಸಾಂಕ್ರಾಮಿಕ ರೋಗದ ಮಧ್ಯೆ, ಮಹಾರಾಷ್ಟ್ರ ಸರ್ಕಾರ ತನ್ನ ವೆಚ್ಚಗಳನ್ನು ಭರಿಸಲು ಹೆಣಗಾಡುತ್ತಿದೆ ಎಂದ ಠಾಕ್ರೆ . “ಜಿಎಸ್‌ಟಿಯ 38,000 ಕೋಟಿ ರೂ.ಬಾಕಿಗಳನ್ನು ಕೇಂದ್ರ ಸರ್ಕಾರ ಇನ್ನೂಬಿಡುಗಡೆ ಮಾಡಿಲ್ಲ. ಕೇಂದ್ರದ ಸಂಪರ್ಕ ಮಾಡಿದ ರಾಜ್ಯಗಳು ತಮ್ಮದೇ ಆದ ಹಣವನ್ನು ಪಡೆಯದಿದ್ದರೆ, ಈ ಪ್ರಸ್ತುತ ಜಿಎಸ್‌ಟಿ ವ್ಯವಸ್ಥೆಯ ಉಪಯೋಗವೇನು? ಜಿಎಸ್‌ಟಿ ವಸ್ಥೆಯಲ್ಲಿ ಕೆಲವುದೋಷಗಳಿದೆ ಎಂದು  ನಾವು ಒಪ್ಪಿಕೊಳ್ಳಬೇಕಾಗಿದೆ, ಅದನ್ನು ಬದಲಾಯಿಸಬೇಕಾಗಿದೆ, ”ಎಂದು ಠಾಕ್ರೆ ಹೇಳಿದರು.

ಈ ಜಿಎಸ್‌ಟಿ ವ್ಯವಸ್ಥೆಯಲ್ಲಿ ಅಗತ್ಯವಾದ ಬದಲಾವಣೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡಲಿದ್ದೇನೆ ಎಂದು ಠಾಕ್ರೆ ಹೇಳಿದರು. "ಇತರ ರಾಜ್ಯ ದ ಮುಖ್ಯಮಂತ್ರಿಗಳು  ಸಹ ತಮ್ಮ ಹಕ್ಕಿಗಾಗಿ ಹೋರಾಡಲು ಒಟ್ಟಾಗಿ ಯೋಚಿಸಬೇಕು. ಕೇಂದ್ರ ಸರ್ಕಾರ ನಮ್ಮ ಬಾಕಿ ಹಣವನ್ನು ಸಮಯಕ್ಕೆ ಸರಿಯಾಗಿ ಪಾವತಿಸುತ್ತಿಲ್ಲ. ಹಾಗಾದರೆ ಜಿಎಸ್‌ಟಿಯ ಉಪಯೋಗವೇನು? ನಾವು ಕೇಂದ್ರ ಸರ್ಕಾರಕ್ಕೆ ಪತ್ರದ ಮೇಲೆ ಪತ್ರ ಬರೆಯುತ್ತಿದ್ದೇವೆ.ಆದರೆ ನಮ್ಮ ಪತ್ರವನ್ನುಕಸದ ಬುಟ್ಟಿಗೆ ಹಾಕಲಾಗುತ್ತಿದೆ.  ಪ್ರಸ್ತುತ ಜಿಎಸ್‌ಟಿ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಹಳೆಯ ತೆರಿಗೆ ವಸೂಲಿ ವ್ಯವಸ್ಥೆಯನ್ನು ಮರಳಿ ತರುವ ಅವಶ್ಯಕತೆಯಿದೆ ಎಂದು ಮೋದಿ ಒಪ್ಪಿಕೊಳ್ಳಬೇಕು ಪ್ರಸ್ತುತ ಜಿಎಸ್‌ಟಿಯನ್ನು ವಿರೋಧಿಸಿದ ಏಕೈಕ ಪಕ್ಷ ಶಿವಸೇನೆ. ಭಾರತೀಯ ಜನತಾ ಪಕ್ಷಕ್ಕೆ ಸೇರಿಲ್ಲ, ನಮ್ಮ ಹಕ್ಕಿಗಾಗಿ ನಾವು ಮತ್ತೆ ಹೋರಾಡಬೇಕಾಗಿದೆ, ”ಎಂದು ಠಾಕ್ರೆ ಹೇಳಿದರು.

ಮಹಾರಾಷ್ಟ್ರದ ಸರ್ಕಾರವನ್ನು ಉರುಳಿಸಲು ಠಾಕ್ರೆ ಬಿಜೆಪಿಗೆ ಸಲಾವ್ಲು ಹಾಕಿದ್ದಾರೆ. “ನಮ್ಮ ಸರ್ಕಾರಕ್ಕೆ ಯಾವ ಶಕ್ತಿ ಇದೆ ಎಂದು ನಾನು ಅವರಿಗೆ ತೋರಿಸುತ್ತೇನೆ. ಮುಂಬೈ ಪೊಲೀಸರು ಮತ್ತು ಮಹಾರಾಷ್ಟ್ರವನ್ನು ಕೆಣಕಲು ಬಿಜೆಪಿ ವಿವಿಧ ಪಿತೂರಿ ನಡೆಸುತ್ತದೆ. ನಾವು ಅದನ್ನು ಬಹಿರಂಗಪಡಿಸುತ್ತೇವೆ, ”

ನಾವು ಕುರುಡು ಹಿಂದುತ್ವವಾದಿಗಳಲ್ಲ ಆದರೆ ಭಯೋತ್ಪಾದಕರ ವಿರುದ್ಧ ಹೋರಾಡಿ ಅವರನ್ನು ಕೊಲ್ಲುವುದಕ್ಕೆ ನಮ್ಮ ಬೆಂಬಲವಿದೆ.ಬಿಜೆಪಿ ನಾಯಕರು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾಷಣವನ್ನು ಎಚ್ಚರಿಕೆಯಿಂದ ಆಲಿಸಬೇಕು ಮತ್ತು ಅದನ್ನು ಎಚ್ಚರಿಕೆಯಿಂದ ಅನುಸರಿಸಬೇಕು ”ಎಂದು ಠಾಕ್ರೆ ಹೇಳಿದರು. ಬಿಹಾರದಲ್ಲಿ ಅಧಿಕಾರಕ್ಕೆ ಬಂದರೆ ಕೋವಿಡ್ ಲಸಿಕೆ ಉಚಿತವಾಗಿ ನೀಡುಉವುದಾಗಿ ಬಿಜೆಪಿ ಹೇಲಿದೆ. “ಕೋವಿಡ್ -19 ಲಸಿಕೆ ಕುರಿತು ರಾಜಕೀಯ ಏಕೆ? ಲಸಿಕೆ ಬಿಹಾರದಲ್ಲಿ ಉಚಿತ ಆದರೆ ಇತರ ರಾಜ್ಯಗಳಲ್ಲಿ ಏಕಿಲ್ಲ?ನಾವು ಬಾಂಗ್ಲಾದೇಶ, ಕಝಕಿಸ್ಥಾನ,  ಇತರ ವಿದೇಶಿ ರಾಷ್ಟ್ರಗಳಲ್ಲಿದ್ದೇವೆಯೆ?"ಠಾಕ್ರೆ  ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com