ಕೋವಿಡ್-19 ನಿರ್ವಹಣೆ: ಮತ್ತೊಂದು ಮೈಲಿಗಲ್ಲು ಸಾಧಿಸಿದ ಭಾರತ, ಚೇತರಿಕೆ ಪ್ರಮಾಣ ಶೇ.90ಕ್ಕೆ ಏರಿಕೆ!

ಕೋವಿಡ್-19 ನಿರ್ವಹಣೆಯಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದು, ದೇಶದಲ್ಲಿ ಒಟ್ಟಾರೆ ಚೇತರಿಕೆ ಪ್ರಮಾಣ ಶೇ.90ಕ್ಕೆ ಏರಿಕೆಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೋವಿಡ್-19 ನಿರ್ವಹಣೆಯಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದು, ದೇಶದಲ್ಲಿ ಒಟ್ಟಾರೆ ಚೇತರಿಕೆ ಪ್ರಮಾಣ ಶೇ.90ಕ್ಕೆ ಏರಿಕೆಯಾಗಿದೆ.

ಹೌದು.. ಭಾರತದಲ್ಲಿ ಪ್ರಸ್ತುತ ಕೊರೋನಾ ಸೋಂಕು ನಿಯಂತ್ರಣದಲ್ಲಿದ್ದು, ಪ್ರಸ್ತುತ ದೇಶದಲ್ಲಿ ನಿತ್ಯ ಹೊಸ ಪ್ರಕರಣಗಳ ಸಂಖ್ಯೆಗಿಂತ ಗುಣಮುಖರ ಸಂಖ್ಯೆಯೇ ಹೆಚ್ಚಿದೆ. ದೇಶದಲ್ಲಿ ಈ ವರೆಗೂ ಒಟ್ಟಾರೆ 78,63,913 ಸೋಂಕು ಪ್ರಕರಣಗಳಿದ್ದು. ಈ ಪೈಕಿ 70,69,999 ಸೋಂಕಿತರು ಈಗಾಗಲೇ  ಚೇತರಿಸಿಕೊಂಡಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 6.75 ಲಕ್ಷಕ್ಕೆ ಇಳಿಕೆಯಾಗಿದೆ. ಆ ಮೂಲಕ ದೇಶದಲ್ಲಿ ಚೇತರಿಕೆ ಪ್ರಮಾಣ ಇದೇ ಮೊದಲ ಬಾರಿಗೆ ಶೇ.90ಕ್ಕೆ ಏರಿಕೆಯಾಗಿದೆ.

ಇನ್ನು ದೇಶದಲ್ಲಿ ಶನಿವಾರ 580 ಮಂದಿ ಕೋವಿಡ್-19 ಸೋಂಕಿತರು ಮೃತಪಟ್ಟಿದ್ದು, ಇದು 98 ದಿನಗಳಲ್ಲೇ ಕನಿಷ್ಠ ಸಂಖ್ಯೆಯಾಗಿದೆ. ಇದು ದೇಶದ ಬಹುತೇಕ ಕಡೆಗಳಲ್ಲಿ ಸಾಂಕ್ರಾಮಿಕ ಇಳಿಮುಖವಾಗುತ್ತಿರುವುದರ ಸ್ಪಷ್ಟ ಸೂಚನೆಯಾಗಿದೆ. ಈ ಹಿಂದೆ ದಿನವೊಂದರಲ್ಲಿ ಕನಿಷ್ಠ ಸಾವು ಜುಲೈ 18ರಂದು ದಾಖಲಾಗಿತ್ತು.  ಸಾವಿನ ಸಂಖ್ಯೆಯ ಈ ವಾರದ ದೈನಿಕ ಸರಾಸರಿ ಸೆಪ್ಟೆಂಬರ್ ಮಧ್ಯಕ್ಕೆ ಹೋಲಿಸಿದರೆ ಅರ್ಧದಷ್ಟಾಗಿದೆ. ಸೆಪ್ಟೆಂಬರ್ 15ರಂದು ದೇಶದಲ್ಲಿ ಇದುವರೆಗಿನ ಗರಿಷ್ಠ ಅಂದರೆ 1275 ಸಾವು ದಾಖಲಾಗಿತ್ತು.

ಶನಿವಾರ 51023 ಹೊಸ ಪ್ರಕರಣಗಳು ದಾಖಲಾಗಿದ್ದು, ಇದು ಈ ವಾರದ ಕನಿಷ್ಠ ಸಂಖ್ಯೆಯಾಗಿದ್ದು, ಆ ಮೂಲಕ ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 78,63,913 ಆಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 6.75 ಲಕ್ಷಕ್ಕೆ ಇಳಿದಿದೆ. ನಿನ್ನೆ ಒಂದೇ ದಿನ 62,077 ಮಂದಿ ಸೋಂಕಿತರು ಗುಣಮುಖರಾಗಿದ್ದು, ಆ ಮೂಲಕ  70,69,999 ಮಂದಿ ಇದುವರೆಗೆ ಚೇತರಿಸಿಕೊಂಡಿದ್ದು, ಒಟ್ಟು ಗುಣಮುಖರಾದವರ ಪ್ರಮಾಣ ಶೇ.90ಕ್ಕೆ ಏರಿಕೆಯಾಗಿದೆ.

ಈ ಮಧ್ಯೆ ಶನಿವಾರ ದೇಶದಲ್ಲೇ ಅತ್ಯಧಿಕ ಪ್ರಕರಣ (8253) ಕೇರಳದಲ್ಲಿ ದಾಖಲಾಗಿದೆ. ಆದರೆ ಇದು ಶುಕ್ರವಾರ ರಾಜ್ಯದಲ್ಲಿ ದಾಖಲಾದ 8511 ಪ್ರಕರಣಗಳಿಗೆ ಹೋಲಿಸಿದರೆ ಕೊಂಚ ಕಡಿಮೆ. ದೆಹಲಿಯಲ್ಲಿ 4116 ಹೊಸ ಪ್ರಕರಣ ಸೇರ್ಪಡೆಯಾಗಿದ್ದು, ಸೆಪ್ಟೆಂಬರ್ 18ರ ಬಳಿಕ ದಾಖಲಾದ ಗರಿಷ್ಠ ಸಂಖ್ಯೆ ಇದಾಗಿದೆ.  ಬಂಗಾಳದಲ್ಲಿ ಕೂಡಾ 4148 ಹೊಸ ಪ್ರಕರಣಗಳು ದಾಖಲಾಗಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com