ಗಡಿ ಸಂಘರ್ಷ ಶಾಂತಿಯುತವಾಗಿ ಬಗೆಹರಿಯಬೇಕು: ಶಸ್ತ್ರಪೂಜೆ ಬಳಿಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆ

ಚೀನಾ ಜೊತೆಗಿನ ಗಡಿ ಸಂಘರ್ಷ ಶಾಂತಿಯುತವಾಗಿ ಬಗೆಹರಿಯಬೇಕು ಎಂಬುದು ಭಾರತ ಆಶಯವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್

ಡಾರ್ಜಿಲಿಂಗ್: ಚೀನಾ ಜೊತೆಗಿನ ಗಡಿ ಸಂಘರ್ಷ ಶಾಂತಿಯುತವಾಗಿ ಬಗೆಹರಿಯಬೇಕು ಎಂಬುದು ಭಾರತ ಆಶಯವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ಪ್ರದೇಶಗಳು ಎರಡು ದಿನದ ಪ್ರವಾಸದಲ್ಲಿ ರಾಜನಾಥ್ ಸಿಂಗ್ ನವರಾತ್ರಿಯ ಕೊನೆಯ ದಿನ, ಆಯುಧ ಪೂಜೆಯ ಹಿನ್ನೆಲೆಯಲ್ಲಿ ಹುತಾತ್ಮರಿಗೆ ನಮನ ಸಲ್ಲಿಸಿ, ಶಸ್ತ್ರಾಸ್ತ್ರ ಪೂಜೆ ಸಲ್ಲಿಸಿದರು. ಡಾರ್ಜಿಲಿಂಗ್​ನಲ್ಲಿರುವ ಸುಕ್ನಾ ಯುದ್ಧ ಸ್ಮಾರಕ ಬಳಿ ತೆರಳಿ ರಾಜನಾಥ್​ಸಿಂಗ್ ಹುತಾತ್ಮರಿಗೆ  ಗೌರವ ಸಲ್ಲಿಸಿದರು. ಅಂತೆಯೇ ಯುದ್ಧ ಟ್ಯಾಂಕರ್, ಸೇನಾ ವಾಹನ ಸೇರಿದಂತೆ ಯುದ್ಧಕ್ಕೆ ಬಳಸುವ ಶಸ್ತ್ರಾಸ್ತ್ರಗಳಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನಾರವಾಣೆ ಉಪಸ್ಥಿತರಿದ್ದರು. 

ಈ ವೇಳೆ ಮಾತನಾಡಿದ ರಾಜನಾಥ್ ಸಿಂಗ್ ಅವರು, ಯೋಧರಿಗೆ ವಿಜಯದಶಮಿಯ ಶುಭಾಶಯ ತಿಳಿಸಿದರು. ಅಂತೆಯೇ ಚೀನಾ ಜೊತೆಗಿನ ಗಡಿ ಸಂಘರ್ಷ ಶಾಂತಿಯುತವಾಗಿ ಬಗೆಹರಿಯಬೇಕು ಎಂಬುದು ಭಾರತ ಆಶಯವಾಗಿದೆ. ಭಾರತ ಒಂದೇ ಒಂದು ಇಂಚು ಭೂಮಿಯನ್ನೂ ಚೀನಾ ಆಕ್ರಮಿಸಲು ನಾವು  ಬಿಡುವುದಿಲ್ಲ. ನಿಮ್ಮಂತಹ ಧೈರ್ಯಶಾಲಿ ಯೋಧರಿಂದಾಗಿ ನಮ್ಮ ದೇಶದ ಗಡಿ ಸುರಕ್ಷಿತವಾಗಿದೆ. ಇಡೀ ದೇಶಕ್ಕೆ ನಿಮ್ಮ ಬಗ್ಗೆ ಹೆಮ್ಮೆಯಿದೆ ಎಂದು ಹೇಳಿದರು.

ಸಿಕ್ಕಿಂ, ಅರುಣಾಚಲ ಪ್ರದೇಶ ಸೆಕ್ಟರ್‌ಗಳು ಸೇರಿದಂತೆ ಸುಮಾರು 3,500 ಕಿ.ಮೀ ಉದ್ದದ ಎಲ್‌ಎಸಿಯಾದ್ಯಂತ ಭಾರತೀಯ ಸೇನೆಯು ಯೋಧರ ಹಾಗೂ ಶಸ್ತ್ರಾಸ್ತ್ರಗಳ ನಿಯೋಜನೆಯನ್ನು ಗಣನೀಯವಾಗಿ ಹೆಚ್ಚಿಸಿದೆ. ಸೇನೆಯ ಉನ್ನತ ಕಮಾಂಡರ್‌ಗಳು ಸಿಕ್ಕಿಂ ಸೆಕ್ಟರ್‌ ಎಲ್‌ಎಸಿಯಲ್ಲಿನ ಪರಿಸ್ಥಿತಿಯನ್ನು  ಸಚಿವರಿಗೆ ಹಾಗೂ ಸೇನಾ ಮುಖ್ಯಸ್ಥರಿಗೆ ವಿಸ್ತೃತವಾಗಿ ವಿವರಿಸಿದ್ದಾರೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಡಾರ್ಜಿಲಿಂಗ್‌ನ ಸುಕ್ನಾದಲ್ಲಿರುವ ‘ತ್ರಿಶಕ್ತಿ’ ಎಂದೇ ಪ್ರಸಿದ್ಧವಾಗಿರುವ ಪ್ರಮುಖ ಸೇನಾ ನೆಲೆಗೆ ಸಚಿವರು ಶನಿವಾರ ಸಂಜೆ ಭೇಟಿ ನೀಡಿದರು. ಯೋಧರ ಜತೆ ದಸರಾ ಹಬ್ಬ ಆಚರಣೆ ಹಾಗೂ ಚೀನಾ ಜತೆಗಿನ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ಸೇನಾ ಸನ್ನದ್ಧತೆಯ ಬಗ್ಗೆ ಪರಿಶೀಲನೆ ನಡೆಸುವ ಸಲುವಾಗಿ ಸಿಂಗ್ ಎರಡು  ದಿನಗಳ ಪಶ್ಚಿಮ ಬಂಗಾಳ ಹಾಗೂ ಸಿಕ್ಕಿಂ ಭೇಟಿ ಹಮ್ಮಿಕೊಂಡಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com