ಸತ್ಯ ಎದುರಿಸಲು ಭಾಗವತ್'ಗೆ ಹೆದರಿಕೆ: ಚೀನಾ ಅತಿಕ್ರಮಣಕ್ಕೆ ಕಾಂಗ್ರೆಸ್ ತೀಕ್ಷ್ಣ ಪ್ರತಿಕ್ರಿಯೆ

ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸಂಚಲನಾತ್ಮಕ ಹೇಳಿಕೆ ನೀಡಿದ್ದಾರೆ. ಭಾರತದ ಭೂ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿರುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ತಿಳಿದಿದೆ, ಆದರೆ ಅದನ್ನು ಅವರು ಹೇಳಲು ಭಯಪಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸಂಚಲನಾತ್ಮಕ ಹೇಳಿಕೆ ನೀಡಿದ್ದಾರೆ. ಭಾರತದ ಭೂ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿರುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ತಿಳಿದಿದೆ, ಆದರೆ ಅದನ್ನು ಅವರು ಹೇಳಲು ಭಯಪಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮೋಹನ್ ಭಾಗವತ್, ನಾಗ್ಫುರದಲ್ಲಿ ವಿಜಯದಶಮಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ರತ, ಮಿಲಿಟರಿ ದೃಷ್ಟಿಯಿಂದ ಚೀನಾಕ್ಕಿಂತ ಉತ್ತಮವಾಗಿ ಸಿದ್ದವಾಗಬೇಕಾದ ಆಗತ್ಯವಿದೆ ಹೇಳಿದ್ದರು.

ಈ ಹೇಳಿಕೆ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿಯವರು,  ಹೃದಯದ ಆಳದಲ್ಲಿ, ಮೋಹನ್ ಭಾಗವತ್ ಅವರಿಗೆ ಸತ್ಯ ಏನು ಎಂಬುದು ತಿಳಿದಿದೆ. ಆ ಸತ್ಯ ಏನೆಂದರೆ, ನಮ್ಮ ಭೂಮಿಯನ್ನು ಚೀನಾ ಆಕ್ರಮಿಸಿದೆ. ಇದಕ್ಕೆ ಭಾರತ ಸರ್ಕಾರ ಹಾಗೂ ಆರ್'ಎಸ್ಎಸ್ ಅವಕಾಶ ಕಲ್ಪಿಸಿದೆ ಎಂದು ಆರೋಪಿಸಿದ್ದಾರೆ.ಈ ಟ್ವೀಟ್ ಜೊತೆಗೆ ವಿಜಯದಶಮಿ ಸಂದರ್ಭದಲ್ಲಿ ಮೋಹನ್ ಭಾಗವತ್ ಭಾಷಣದ ತುಣುಕುಗಳನ್ನು ಜತೆ ಸೇರಿಸಿದ್ದಾರೆ. 

ಮೋಹನ್ ಭಾಗವತ್ ವಿಜಯ ದಶಮಿ ಸಮಾರಂಭದಲ್ಲಿ ಮಾತನಾಡುತ್ತಾ.. ಚೀನಾ ಸಾಮ್ರಾಜ್ಯಶಾಹಿ ದೇಶ ಎಂದು ಆರೋಪಿಸಿದರು. ಚೀನಾ ವಿರುದ್ಧ ನೆರೆಯ ನೇಪಾಳ ಶ್ರೀಲಂಕಾ ದೇಶಗಳೊಂದಿಗೆ ಕೂಟ ರಚಿಸಿಕೊಳ್ಳಬೇಕು ಎಂದು ಅವರು ಸರ್ಕಾರಕ್ಕೆ ಕರೆ ನೀಡಿದ್ದಾರೆ. ಭಾರತೀಯ ರಕ್ಷಣಾ ಪಡೆಗಳು, ಸರ್ಕಾರ ಹಾಗೂ ದೇಶದ ಜನರು ದೃಢ ನಿಶ್ಚಯದಿಂದ ವ್ಯವಹರಿಸುತ್ತಿದ್ದಾರೆ. ನಮ್ಮ ಭೂ ಪ್ರದೇಶಗಳನ್ನು ಆಕ್ರಮಿಸಲು ಚೀನಾ ನಡೆಸುತ್ತಿರುವ ಪ್ರಯತ್ನಗಳ ವಿರುದ್ದ ತೀವ್ರವಾಗಿ ಪ್ರತಿಕ್ರಿಯಿಸಿರುವ ಅವರು, ಭಾರತ ಎಲ್ಲರೊಂದಿಗೆ ಸ್ನೇಹವನ್ನು ಬಯಸುತ್ತದೆ, ಅದು ಭಾರತದ ಸ್ವಭಾವ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com