ಇಂಡೋ-ಯುಎಸ್ 2+2 ಸಂವಾದ: ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್- ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ

ಭಾರತ-ಯುಎಸ್ ನ ಮೂರನೇ  2 + 2 ಮೈತ್ರಿ ಸಂವಾದದಲ್ಲಿ ಭಾಗವಹಿಸುವುದಕ್ಕಾಗಿ ವಿದೇಶಾಂಗ ಕಾರ್ಯದರ್ಶಿ ಮೈಕೆಲ್ ಪೊಂಪಿಯೊ ಅವರೊಂದಿಗೆ ಭಾರತಕ್ಕೆ ಆಗಮಿಸಿದ ಯುಎಸ್ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಅವರಿಗೆ ಸೋಮವಾರ ಸೌತ್ ಬ್ಲಾಕ್‌ನಲ್ಲಿ ಗಾರ್ಡ್ ಆಫ್ ಆನರ್ ನೀಡಿ ಸತ್ಕರಿಸಲಾಗಿದೆ. 

Published: 26th October 2020 07:13 PM  |   Last Updated: 26th October 2020 07:18 PM   |  A+A-


ಮಾರ್ಕ್ ಎಸ್ಪರ್ ರಾಜನಾಥ್ ಸಿಂಗ್ ಸಂವಾದ

Posted By : Raghavendra Adiga
Source : ANI

ನವದೆಹಲಿ: ಭಾರತ-ಯುಎಸ್ ನ ಮೂರನೇ  2 + 2 ಮೈತ್ರಿ ಸಂವಾದದಲ್ಲಿ ಭಾಗವಹಿಸುವುದಕ್ಕಾಗಿ ವಿದೇಶಾಂಗ ಕಾರ್ಯದರ್ಶಿ ಮೈಕೆಲ್ ಪೊಂಪಿಯೊ ಅವರೊಂದಿಗೆ ಭಾರತಕ್ಕೆ ಆಗಮಿಸಿದ ಯುಎಸ್ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಅವರಿಗೆ ಸೋಮವಾರ ಸೌತ್ ಬ್ಲಾಕ್‌ನಲ್ಲಿ ಗಾರ್ಡ್ ಆಫ್ ಆನರ್ ನೀಡಿ ಸತ್ಕರಿಸಲಾಗಿದೆ. 

ಮಂಗಳವಾರ ನಡೆಯುವ 2+ 2 ಸಂವಾದದ ಅಂಗವಾಗಿ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಾರ್ಕ್ ಎಸ್ಪರ್ ಅವರೊಂದಿಗೆ ಮಾತುಕತೆ ನಡೆಸಿದರು. ಸಭೆಯಲ್ಲಿ ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನಾರವಾನೆ ಐಎಎಫ್ ಮುಖ್ಯಸ್ಥ ಮಾರ್ಷಲ್ ಆರ್ಕೆಎಸ್ ಭದೌರಿಯಾ ಮತ್ತು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಉಪಸ್ಥಿತರಿದ್ದರು.

ಸಭೆ ಪ್ರಾರಂಭಕ್ಕೆ ಮುನ್ನ ಕೊರೋನಾವೈರಸ್ ಕಾರಣ ಭಾರತದ ಯುಎಸ್ ರಾಯಭಾರಿ ಕೆನ್ನೆತ್ ಜಸ್ಟರ್ ಜನರಲ್ ಬಿಪಿನ್ ರಾವತ್ ಮತ್ತು ಅಡ್ಮಿರಲ್ ಕರಂಬೀರ್ ಸಿಂಗ್ ನಮಸ್ಕರಿಸಿ ಗೌರವಿಸಿದ್ದಾರೆ. 

 

 

ಮೂರನೇ ಯುಎಸ್-ಇಂಡಿಯಾ 2 + 2 ಸಂವಾದ ರಾಜತಾಂತ್ರಿಕ ಮತ್ತು ಭದ್ರತಾ ಉದ್ದೇಶಗಳಿಗೆ ಉಭಯ ದೇಶಗಳು ಒದಗಿಸುವ ಉನ್ನತ ಮಟ್ಟದ ಬದ್ಧತೆಯನ್ನು ತೋರಿಸುತ್ತದೆಎಂದು ಯುಎಸ್ ವಿದೇಶಾಂಗ ಇಲಾಖೆ ಭಾನುವಾರ ತಿಳಿಸಿದೆ. ಭಾರತ-ಯುಎಸ್ 2 + 2 ಮಾತುಕತೆಗಳು ಪ್ರಾದೇಶಿಕ ಭದ್ರತಾ ಸಹಕಾರ, ರಕ್ಷಣಾ ಮಾಹಿತಿ ಹಂಚಿಕೆ, ಮಿಲಿಟರಿಸಂವಹನ ಮತ್ತು ರಕ್ಷಣಾ ವ್ಯಾಪಾರ ಎಂಬ ನಾಲ್ಕು ವಿಷಯಗಳ ಮೇಲೆ ಕೇಂದ್ರೀಕೃತವಾಗಿದೆ ಎಂದು  ಯುಎಸ್ ಸ್ಟೇಟ್ ವಿಭಾಗತಿಳಿಸಿದೆ. ಮೊದಲ ಎರಡು 2 + 2 ಸಂವಾದಗಳು  2018 ರ ಸೆಪ್ಟೆಂಬರ್‌ನಲ್ಲಿ ನವದೆಹಲಿಯಲ್ಲಿ ಮತ್ತು 2019 ರಲ್ಲಿ ವಾಷಿಂಗ್ಟನ್ ಡಿಸಿಯಲ್ಲಿ ನಡೆದಿದ್ದವು. 

Stay up to date on all the latest ರಾಷ್ಟ್ರೀಯ news
Poll
Rahul_Gandhi1

ರಾಹುಲ್ ಗಾಂಧಿ ಟೀಕೆ ಮಾಡುವುದನ್ನು ನಿಲ್ಲಿಸಿ ಕೋವಿಡ್ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಪಕ್ಷವನ್ನು ಸಜ್ಜುಗೊಳಿಸಬೇಕೇ?


Result
ಹೌದು, ರಾಹುಲ್ ಮುಂದಾಳತ್ವ ವಹಿಸಬೇಕು.
ಇಲ್ಲ, ಇದು ಕೇಂದ್ರ ಸರ್ಕಾರದ ಜವಾಬ್ದಾರಿ.
flipboard facebook twitter whatsapp