ನವಂಬರ್ 5 ರೊಳಗೆ ಸಾಲ ಪಡೆದವರ ಖಾತೆಗೆ ಚಕ್ರ ಬಡ್ಡಿ ಹಣ ವಾಪಸ್: ಸುಪ್ರೀಂ ಗೆ ಕೇಂದ್ರದ ಪ್ರಮಾಣ ಪತ್ರ

ಲೋನ್ ಮೊರಾಟೋರಿಯಂ (ಸಾಲ ಮರುಪಾವತಿ ಅವಧಿ ವಿಸ್ತರಣೆ)ಯಲ್ಲಿ ಅರ್ಹ ಸಾಲಗಾರರ ಖಾತೆಗಳಿಗೆ ಚಕ್ರಬಡ್ಡಿಯನ್ನು ವಾಪಸ್ ನೀಡಲು ಸಾಲ ನೀಡಿರುವ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿದೆ.
ಲೋನ್ ಮೊರಾಟೋರಿಯಂ: ನ.5 ರ ವೇಳೆಗೆ ಚಕ್ರ ಬಡ್ಡಿ ಸಾಲ ಪಡೆದವರ ಖಾತೆಗೆ ವಾಪಸ್- ಸುಪ್ರೀಂ ಗೆ ಕೇಂದ್ರದ ಪ್ರಮಾಣ ಪತ್ರ
ಲೋನ್ ಮೊರಾಟೋರಿಯಂ: ನ.5 ರ ವೇಳೆಗೆ ಚಕ್ರ ಬಡ್ಡಿ ಸಾಲ ಪಡೆದವರ ಖಾತೆಗೆ ವಾಪಸ್- ಸುಪ್ರೀಂ ಗೆ ಕೇಂದ್ರದ ಪ್ರಮಾಣ ಪತ್ರ

ನವದೆಹಲಿ: ಲೋನ್ ಮೊರಾಟೋರಿಯಂ (ಸಾಲ ಮರುಪಾವತಿ ಅವಧಿ ವಿಸ್ತರಣೆ)ಯಲ್ಲಿ ಅರ್ಹ ಸಾಲಗಾರರ ಖಾತೆಗಳಿಗೆ ಚಕ್ರಬಡ್ಡಿಯನ್ನು ವಾಪಸ್ ನೀಡಲು ಸಾಲ ನೀಡಿರುವ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿದೆ.

2 ಕೋಟಿ ರೂಪಾಯಿ ಮೊತ್ತದ ಸಾಲಗಳಿಗೆ ವಿಧಿಸಲಾಗಿರುವ, ಆರ್ ಬಿಐ ಸಾಲ ಮರುಪಾವತಿ ಅವಧಿ ವಿಸ್ತರಣೆ ಯೋಜನೆಯಡಿ ಬರುವ ಚಕ್ರ ಬಡ್ಡಿಗಳಿಗೆ ಈ ನಿಯಮ ಅನ್ವಯವಾಗಲಿದೆ.

ಹಣವನ್ನು ಸಾಲ ಪಡೆದಿರುವವರ ಖಾತೆಗೆ ಜಮೆ ಮಾಡಿದ ಬಳಿಕ ಸಾಲ ನೀಡಿರುವ ಸಂಸ್ಥೆಗಳು ಕೇಂದ್ರ ಸರ್ಕಾರದಿಂದ ಆ ಹಣವನ್ನು ಪಡೆಯಬಹುದಾಗಿದೆ ಎಂದೂ ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ಕೋವಿಡ್-19ರ ಅವಧಿಯಲ್ಲಿ ಘೋಷಿಸಲಾಗಿದ್ದ 6 ತಿಂಗಳ ಮೊರಾಟೋರಿಯಂ ಅವಧಿಗೆ ಮಾತ್ರ ಈ ಚಕ್ರಬಡ್ಡಿ ಹಣ ವಾಪಸ್ ನೀಡಲಾಗುತ್ತದೆ ಎಂದು ಪ್ರಮಾಣಪತ್ರದಲ್ಲಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com