ಪ್ರಧಾನಿ ಮೋದಿಗೆ 6 ಜನ ಒಡಹುಟ್ಟಿದವರಿದ್ದಾರೆ: ನಿತೀಶ್ ಗೆ ತೇಜಸ್ವಿ ತಿರುಗೇಟು

ನಾಳೆ  ನಡೆಯಲಿರುವ ಮೊದಲ ಹಂತದ ಬಿಹಾರ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಸೋಮವಾರ ತೆರೆ ಬಿದ್ದಿದ್ದು, ಮುಖ್ಯಮಂತ್ರಿ ನಿತೀಶ್  ಕುಮಾರ್  ತಮ್ಮ ತಾಯಿ ರಾಬ್ಡಿದೇವಿಯನ್ನು ಅಪಮಾನಿಸಿದ್ದಾರೆ ಎಂದು ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ಆರೋಪಿಸಿದ್ದಾರೆ.
ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್
ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್

ಪಾಟ್ನಾ: ನಾಳೆ  ನಡೆಯಲಿರುವ ಮೊದಲ ಹಂತದ ಬಿಹಾರ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಸೋಮವಾರ ತೆರೆ ಬಿದ್ದಿದ್ದು, ಮುಖ್ಯಮಂತ್ರಿ ನಿತೀಶ್  ಕುಮಾರ್  ತಮ್ಮ ತಾಯಿ ರಾಬ್ಡಿದೇವಿಯನ್ನು ಅಪಮಾನಿಸಿದ್ದಾರೆ ಎಂದು ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ಆರೋಪಿಸಿದ್ದಾರೆ.

ನನ್ನ ಕುಟುಂಬದ ಬಗ್ಗೆ ಟೀಕೆ ಮಾಡುವ ಮೂಲಕ ನಿತೀಶ್ ಕುಮಾರ್, ಆರು ಜನ ಒಡಹುಟ್ಟಿದವರನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿ ಇಟ್ಟುಕೊಂಡಿದ್ದಾರೆ.ಇಂತಹ ಭಾಷೆ ಬಳಸುವ ಮೂಲಕ ನಿತೀಶ್ ಕುಮಾರ್, ಮಹಿಳೆಯರು ಮತ್ತು ನನ್ನ ತಾಯಿಯ ಭಾವನೆಗಳಿಗೆ ಅಪಮಾನ ಮಾಡಿದ್ದಾರೆ. ಹಣದುಬ್ಬರ, ಭ್ರಷ್ಟಾಚಾರ, ನಿರುದ್ಯೋಗ ಮತ್ತಿತರ ಪ್ರಮುಖ ವಿಷಯಗಳ ಬಗ್ಗೆ ಅವರು ಮಾತನಾಡುತ್ತಿಲ್ಲ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.

 ನಿತೀಶ್ ಕುಮಾರ್ ತೇಜಸ್ವಿ ಯಾದವ್ ಮತ್ತು ಅವರ ತಂದೆ ಲಾಲು ಪ್ರಸಾದ್ ಯಾದವ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಲಾಲ್ ಕುಟುಂಬ ಏಂಟು- ಒಂಬತ್ತು ಮಕ್ಕಳಿದ್ದಾರೆ. ಪುತ್ರಿಯರಲ್ಲಿ ಅವರಿಗೆ ನಂಬಿಕೆ ಇಲ್ಲ. ಅನೇಕ ಪುತ್ರಿಯರನ್ನು ಹೊಂದಿದ ಬಳಿಕ ಒಬ್ಬ ಮಗ ಹುಟ್ಟಿದ. ಈ ರೀತಿಯಲ್ಲಿ ಬಿಹಾರ ಮಾಡಲು ಅವರು ಹೊರಟಿದ್ದಾರೆ ಎಂದು ನಿತೀಶ್ ಕುಮಾರ್ ಹೇಳಿಕೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com