ಲಡಾಖ್ ನ್ನು ಚೀನಾದಲ್ಲಿ ತೋರಿಸಿದ ಟ್ವಿಟರ್ ಗೆ ಸಂಸತ್ ಸಮಿತಿ ತರಾಟೆ: ಲಿಖಿತ ಪ್ರತಿಕ್ರಿಯೆಗೆ ಸೂಚನೆ
ಲಡಾಖ್ ನ್ನು ಚೀನಾದಲ್ಲಿ ತೋರಿಸಿದ ಟ್ವಿಟರ್ ಗೆ ಸಂಸತ್ ಸಮಿತಿ ತರಾಟೆ: ಲಿಖಿತ ಪ್ರತಿಕ್ರಿಯೆಗೆ ಸೂಚನೆ

ಲಡಾಖ್ ನ್ನು ಚೀನಾದಲ್ಲಿ ತೋರಿಸಿದ ಟ್ವಿಟರ್ ಗೆ ಸಂಸತ್ ಸಮಿತಿ ತರಾಟೆ: ಲಿಖಿತ ಪ್ರತಿಕ್ರಿಯೆಗೆ ಸೂಚನೆ 

ಲಡಾಖ್ ನ್ನು ಚೀನಾದಲ್ಲಿ ತೋರಿಸಿದ್ದ ಟ್ವಿಟರ್ ವಿರುದ್ಧ ಸಂಸತ್ ಸಮಿತಿ ಕೆಂಡಾಮಂಡಲವಾಗಿದ್ದು, ಲಿಖಿತ ಪ್ರತಿಕ್ರಿಯೆ ಹಾಗೂ ಪ್ರಮಾಣಪತ್ರ ಸಲ್ಲಿಕೆ ಮಾಡುವಂತೆ ಸೂಚನೆ ನೀಡಿದೆ. 

ಲಡಾಖ್ ನ್ನು ಚೀನಾದಲ್ಲಿ ತೋರಿಸಿದ್ದ ಟ್ವಿಟರ್ ವಿರುದ್ಧ ಸಂಸತ್ ಸಮಿತಿ ಕೆಂಡಾಮಂಡಲವಾಗಿದ್ದು, ಲಿಖಿತ ಪ್ರತಿಕ್ರಿಯೆ ಹಾಗೂ ಪ್ರಮಾಣಪತ್ರ ಸಲ್ಲಿಕೆ ಮಾಡುವಂತೆ ಸೂಚನೆ ನೀಡಿದೆ. 

ಅಮೆರಿಕ ಮೂಲದ ಸಾಮಾಜಿಕ ಜಾಲತಾಣ ಸಂಸ್ಥೆಯಿಂದ ಲಿಖಿತ ಪ್ರತಿಕ್ರಿಯೆಯನ್ನು ಪ್ರಮಾಣಪತ್ರದ ರೂಪದಲ್ಲಿ ಸಲ್ಲಿಸಬೇಕೆಂದು ಸಮಿತಿ ಆಗ್ರಹಿಸಿದೆ. 

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ನೇತೃತ್ವದ ಡಾಟಾ ಪ್ರೊಟೆಕ್ಷನ್ ಬಿಲ್ ನ ಜಂಟಿ ಸಂಸದೀಯ ಸಮಿತಿಯ ಎದುರು ಹಾಜರಾದ ಟ್ವಿಟರ್ ನ ಪ್ರತಿನಿಧಿಗಳು ಕ್ಷಮೆ ಯಾಚಿಸಿದ್ದಾರೆ. ಆದರೆ ಸಂಸತ್ ಸಮಿತಿ ಸದಸ್ಯರು ಟ್ವಿಟರ್ ನಡೆಯನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಿದ್ದು, ಭಾರತದ ಸಾರ್ವಭೌಮತೆಯನ್ನು ಪ್ರಶ್ನಿಸುತ್ತಿದೆ ಎಂದು ಕಿಡಿ ಕಾರಿದ್ದಾರೆ. ಟ್ವಿಟರ್ ನ ಮಾರ್ಕೆಟಿಂಗ್ ವಿಭಾಗ ಟ್ವಿಟರ್ ಇಂಡಿಯಾವಲ್ಲದೇ ಟ್ವಿಟರ್ ಐಎನ್ ಸಿಯಿಂದ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಸೂಚನೆ ನೀಡಿದೆ. ಟ್ವಿಟರ್ ನ ಪ್ರತಿನಿಧಿಗಳನ್ನು ಸತತ 2 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, ಲಡಾಖ್ ನ್ನು ಚೀನಾದಲ್ಲಿ ತೋರಿಸಿರುವುದರ ಬಗ್ಗೆ ಪ್ರಮುಖವಾದ ವಿಚಾರಣೆ ನಡೆದಿದೆ. 

ಇದೇ ವೇಳೆ ಟ್ವಿಟರ್ ನಲ್ಲಿ ನಿಷೇಧ ವಿಧಿಸುವ ವಿಷಯದ ಬಗ್ಗೆಯೂ ಪ್ರಶ್ನಿಸಲಾಗಿದ್ದು, ಟ್ವಿಟರ್ ನಲ್ಲಿ ತಮ್ಮದೇ ಆದ ಕಾನೂನನ್ನು ಪಾಲಿಸುತ್ತಿದ್ದು, ಭಾರತೀಯ ಸಂವಿಧಾನದ ಆರ್ಟಿಕಲ್ 19 ನ್ನು ಉಲ್ಲಂಘನೆ ಮಾಡುತ್ತಿದೆ ಎಂದು ಟ್ವಿಟರ್ ಗೆ ಎಚ್ಚರಿಕೆ ನೀಡಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com