ಕೋವಿಡ್-19 ಎಚ್ಚರಿಕೆಯೊಂದಿಗೆ ಮತಗಟ್ಟೆಗೆ ಬಂದು ಮತ ಹಾಕಿ: ಬಿಹಾರ ಜನತೆಗೆ ಪ್ರಧಾನಿ ಮೋದಿ ಸೇರಿ ಗಣ್ಯರ ಮನವಿ

ಬಿಹಾರ ವಿಧಾನಸಭೆ ಚುನಾವಣೆ 2020ಕ್ಕೆ ಮತದಾನ ಬುಧವಾರ ಬೆಳಗ್ಗೆ 7 ಗಂಟೆಗೆ ಆರಂಭವಾಗಿದ್ದು ಮೊದಲ ಹಂತದಲ್ಲಿ 71 ಸೀಟುಗಳಿಗೆ ಮತದಾನ ಪ್ರಕ್ರಿಯೆ ಸಾಗಿದೆ.
ಬಿಹಾರದಲ್ಲಿಂದು ಮೊದಲ ಹಂತದ ಮತದಾನ ವೇಳೆ ಕಂಡುಬಂದ ದೃಶ್ಯ
ಬಿಹಾರದಲ್ಲಿಂದು ಮೊದಲ ಹಂತದ ಮತದಾನ ವೇಳೆ ಕಂಡುಬಂದ ದೃಶ್ಯ

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆ 2020ಕ್ಕೆ ಮತದಾನ ಬುಧವಾರ ಬೆಳಗ್ಗೆ 7 ಗಂಟೆಗೆ ಆರಂಭವಾಗಿದ್ದು ಮೊದಲ ಹಂತದಲ್ಲಿ 71 ಸೀಟುಗಳಿಗೆ ಮತದಾನ ಪ್ರಕ್ರಿಯೆ ಸಾಗಿದೆ.

ಇಂದು ಮೊದಲ ಹಂತದ ಮತದಾನ ಪ್ರಕ್ರಿಯೆ ಚಾಲನೆ ಸಿಗುತ್ತಿದ್ದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಬಂದು ಪ್ರಜಾಪ್ರಭುತ್ವದ ಹಬ್ಬವಾದ ಚುನಾವಣಾ ಪ್ರಕ್ರಿಯೆಯಲ್ಲಿ ಉತ್ಸಾಹದಿಂದ ಭಾಗಿಯಾಗುವಂತೆ ಮನವಿ ಮಾಡಿಕೊಂಡಿದ್ದಾರೆ.

ಮತದಾನದ ಮಧ್ಯೆ ಕೋವಿಡ್-19 ಮುನ್ನೆಚ್ಚರಿಕೆಯನ್ನು ಮಾತ್ರ ಮರೆಯದಿರಿ ಎಂದು ಕೂಡ ಪ್ರಧಾನಿ ಹೇಳಿದ್ದಾರೆ. ಇನ್ನು ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ, ಕೋವಿಡ್-19 ಮುನ್ನೆಚ್ಚರಿಕೆಯೊಂದಿಗೆ ಬಿಹಾರದ ಎಲ್ಲಾ ಪ್ರಜೆಗಳು ಮತದಾನದ ಹಕ್ಕಿನ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಎಂದು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ಬಿಹಾರ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆಗೆ ರಾಜ್ಯದ ಪ್ರಜೆಗಳಿಗೆ ಸ್ವಾಗತ. ಈ ಬಾರಿ ನ್ಯಾಯ, ಕೆಲಸ, ರೈತಪರ ಸರ್ಕಾರಕ್ಕಾಗಿ ಮಹಾಘಟಬಂಧನಕ್ಕೆ ಮತ ಹಾಕಿ ಬೆಂಬಲಿಸಿ ಎಂದು ರಾಹುಲ್ ಗಾಂಧಿ ರಾಜ್ಯದ ಜನತೆಯನ್ನು ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com