ಆಂಧ್ರ ಪ್ರದೇಶ: ಆರು ಬಾಲಕರು ನೀರುಪಾಲು. ನಾಲ್ವರ ಮೃತದೇಹ ಹೊರ ತೆಗೆದ ಪೊಲೀಸರು

ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ವೇಲೈರುಪಾಡು ಮಂಡಲದ ವಸಂತವಾಡ ಗ್ರಾಮದಲ್ಲಿ ಬುಧವಾರ ಹೊಳೆಯಲ್ಲಿ ಈಜಲು ಹೋಗಿದ್ದ ಆರು ಬಾಲಕರು ನೀರುಪಾಲಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಏಲೂರು: ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ವೇಲೈರುಪಾಡು ಮಂಡಲದ ವಸಂತವಾಡ ಗ್ರಾಮದಲ್ಲಿ ಬುಧವಾರ ಹೊಳೆಯಲ್ಲಿ ಈಜಲು ಹೋಗಿದ್ದ ಆರು ಬಾಲಕರು ನೀರುಪಾಲಾಗಿದ್ದಾರೆ.

ಭೂದೇವಿಪೇಟ ಗ್ರಾಮಸ್ಥರ ಗುಂಪೊಂದು ವಿಹಾರಕ್ಕಾಗಿ ಹೊಳೆಗೆ ಹೋಗಿತ್ತು. ಭಾರೀ ಮಳೆಯಿಂದ ತುಂಬಿದ್ದ ಹೊಳೆಗೆ ಈಜಾಡಲು ಈ ಆರು ಹುಡುಗರು ಇಳಿದಿದ್ದಾರೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕರಾದ ಶ್ರೀರಾಮುಲು ಶಿವಾಜಿ (16), ಗಂಗಾಧರ್ ವೆಂಕಟ ರಾವ್ (16), ಕುನವರಂ ರಾಧಾ ಕೃಷ್ಣ (15) ಮತ್ತು ಕರ್ನಾತಿ ರಂಜಿತ್ (15) ಮೃತದೇಹಗಳನ್ನು ಈವರೆಗೆ ಹೊಳೆಯಿಂದ ಹೊರತೆಗೆಯಲಾಗಿದೆ.

ಇನ್ನಿಬ್ಬರು ಬಾಲಕರ ಮೃತದೇಹಗಳ ಪತ್ತೆಗೆ ಶೋಧ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com