1 ಕೊಲೆಯನ್ನು ಮುಚ್ಚಿಹಾಕಲು 9 ಮಂದಿಯನ್ನು ಬಾವಿಗೆ ಎಸೆದು ಕೊಂದಿದ್ದ ನಿರ್ದಯಿ ಸಂಜಯ್ ಕುಮಾರ್‌ಗೆ ಗಲ್ಲು ಶಿಕ್ಷೆ!

ಒಂದು ಕೊಲೆಯನ್ನು ಮುಚ್ಚಿಹಾಕಲು 9 ಮಂದಿಯನ್ನು ಬಾವಿಗೆ ಎಸೆದು ಕೊಂದಿದ್ದ ನಿರ್ಧಯಿ ಸಂಜಯ್ ಕುಮಾರ್ ಗೆ ಜಿಲ್ಲಾ ಸೆಷನ್ಸ್ ಕೋರ್ಟ್ ಗಲ್ಲು ಶಿಕ್ಷೆ ನೀಡುವ ಮೂಲಕ ಮಹತ್ವದ ತೀರ್ಪು ನೀಡಿದೆ.
ಸಂಜಯ್ ಕುಮಾರ್
ಸಂಜಯ್ ಕುಮಾರ್

ವಾರಂಗಲ್: ಒಂದು ಕೊಲೆಯನ್ನು ಮುಚ್ಚಿಹಾಕಲು 9 ಮಂದಿಯನ್ನು ಬಾವಿಗೆ ಎಸೆದು ಕೊಂದಿದ್ದ ನಿರ್ಧಯಿ ಸಂಜಯ್ ಕುಮಾರ್ ಗೆ ಜಿಲ್ಲಾ ಸೆಷನ್ಸ್ ಕೋರ್ಟ್ ಗಲ್ಲು ಶಿಕ್ಷೆ ನೀಡುವ ಮೂಲಕ ಮಹತ್ವದ ತೀರ್ಪು ನೀಡಿದೆ. 

ತೆಲಂಗಾಣದ ವಾರಂಗಲ್ ಜಿಲ್ಲೆಯ ಗೊರ್ರಕುಂಟ ಎಂಬಲ್ಲಿ ಸಂಜಯ್ ಕುಮಾರ್ ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ನಂತರ 9 ಮಂದಿಯನ್ನು ಪಕ್ಕದಲ್ಲಿದ್ದ ಬಾವಿಗೆ ಎಸೆದಿದ್ದ. ಈ ಪ್ರಕರಣದಲ್ಲಿ ಕೋರ್ಟ್ ಅಪರಾಧಿ ಸಂಜಯ್ ಗೆ ಗಲ್ಲು ಶಿಕ್ಷೆ ವಿಧಿಸಿದೆ. 

ಬಿಹಾರ ಮೂಲದ 30 ವರ್ಷದ ಸಂಜಯ್ ಕುಮಾರ್ ಯಾದವ್ ಗೊರ್ರೆಕುಂಟಾದಲ್ಲಿರುವ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಮೃತ ಮಕ್ಸೂದ್ ಆಲಂ ಸಂಬಂಧಿ ರಫಿಕಾ ಸುಮಾರು ಐದು ವರ್ಷಗಳ ಹಿಂದೆ ತನ್ನ ಮೂವರು ಮಕ್ಕಳೊಂದಿಗೆ ಮಕ್ಸೂದ್ ಮನೆಗೆ ಬಂದಿದ್ದಳು. ನಂತರ ಅದೇ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಅಪರಾಧಿ ಸಂಜಯ್ ಆಕೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನು. ನಂತರ ರಫಿಕಾ ತನ್ನ ಮೂವರು ಮಕ್ಕಳೊಂದಿಗೆ ಯಾದವ್ ಮನೆಗೆ ಹೋಗಿ ನೆಲೆಸಿದ್ದಳು. 

ಯಾದವ್ ರಫಿಕಾ ದೊಡ್ಡ ಮಗಳ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಇದರಿಂದ ಕೋಪಗೊಂಡ ರಫಿಕಾ ಆತನಿಗೆ ಎಚ್ಚರಿಕೆ ನೀಡಿದ್ದಾಳೆ. ಈ ವೇಳೆ ರಫಿಕಾಳನ್ನು ಕೊಲೆ ಮಾಡಲು ನಿರ್ಧರಿಸಿದ್ದ ಸಂಜಯ್ ರಫಿಕಾಳನ್ನು ಮದುವೆಯಾಗುವುದಾಗಿ ನಂಬಿಸಿ ಮಾರ್ಚ್ 7ರಂದು ಪಶ್ಚಿಮ ಬಂಗಾಳಕ್ಕೆ ಗರಿಭ್ ರಾಥ್ ರೈಲಿನಲ್ಲಿ ಕರೆದುಕೊಂಡು ಹೋಗಿದ್ದಾನೆ.

ಮಾರ್ಗ ಮಧ್ಯೆ ರಫಿಕಾಳಿಗೆ ನಿದ್ರೆ ಮಾತ್ರೆ ಹಾಕಿದ್ದ ಮಜ್ಜಿಗೆಯನ್ನು ಕುಡಿಸಿದ್ದಾನೆ. ನಂತರ ಆಕೆಯ ಕತ್ತು ಹಿಸುಕಿ ಕೊಂದಿದ್ದಾನೆ. ಬಳಿಕ ಚಲಿಸುತ್ತಿದ್ದ ರೈಲಿನಿಂದ ಆಕೆಯ ದೇಹವನ್ನು ಹೊರಕ್ಕೆ ಎಸೆದು ವಾಪಸ್ ವಾರಂಗಲ್ ಗೆ ಬಂದಿದ್ದಾನೆ. ಈ ವೇಳೆ ಕಟ್ಟು ಕಥೆ ಕಟ್ಟಿದ ಸಂಜಯ್ ರಫಿಕಾಳನ್ನು ಊರಿನಲ್ಲಿ ಬಿಟ್ಟು ಬಂದಿರುವುದಾಗಿ ಹೇಳಿದ್ದಾನೆ. 

ಇದರಿಂದ ಅನುಮಾನಗೊಂಡ ಮಕ್ಸೂದ್ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಸಿದ್ದಾರೆ. ಇದರಿಂದ ಗಾಬರಿಗೊಂಡ ಸಂಜಯ್ ಮೇ ತಿಂಗಳಲ್ಲಿ ಊಟದಲ್ಲಿ ನಿದ್ರೆ ಮಾತ್ರೆ ಬೆರಸಿ ಮಕ್ಸೂದ್ ಕುಟುಂಬವನ್ನು ಕೊಂದಿದ್ದ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com