ರಜನಿಕಾಂತ್ ರಾಜಕೀಯ ತೊರೆಯುತ್ತಿದ್ದಾರೆಯೇ: ತಮಿಳು ನಾಡಲ್ಲಿ ಹೀಗೊಂದು ದಟ್ಟ ವದಂತಿ

ಸುಮಾರು ಎರಡು ದಶಕಗಳಿಂದ ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಬರುತ್ತಾರೆ ಎಂಬ ಊಹಾಪೋಹ ನಡೆಯುತ್ತಲೇ ಇತ್ತು. ಕೊನೆಗೊಂದು ದಿನ ಅದು ನಿಜವಾಯಿತು. ಇದೀಗ ಅವರು ರಾಜಕೀಯ ಕ್ಷೇತ್ರ ತೊರೆಯುತ್ತಿದ್ದಾರಾ ಎಂಬ ಅನುಮಾನ, ಸಂದೇಹ ಕಾಡಲಾರಂಭಿಸಿದೆ.
ರಜನಿಕಾಂತ್
ರಜನಿಕಾಂತ್

ಚೆನ್ನೈ: ಸುಮಾರು ಎರಡು ದಶಕಗಳಿಂದ ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಬರುತ್ತಾರೆ ಎಂಬ ಊಹಾಪೋಹ ನಡೆಯುತ್ತಲೇ ಇತ್ತು. ಕೊನೆಗೊಂದು ದಿನ ಅದು ನಿಜವಾಯಿತು. ಇದೀಗ ಅವರು ರಾಜಕೀಯ ಕ್ಷೇತ್ರ ತೊರೆಯುತ್ತಿದ್ದಾರಾ ಎಂಬ ಅನುಮಾನ, ಸಂದೇಹ ಕಾಡಲಾರಂಭಿಸಿದೆ.

ಸ್ವತಃ ರಜನಿಕಾಂತ್ ಅವರೇ ಬರೆದಿರುವ ವಿಷಯವೊಂದರಿಂದ ಈ ಅನುಮಾನ ತಮಿಳು ನಾಡಿನ ರಾಜಕೀಯ ವಲಯದಲ್ಲಿ ದಟ್ಟವಾಗಿದೆ. ಕೋವಿಡ್-19 ಸಾಂಕ್ರಾಮಿಕ, ತಮ್ಮ ವಯಸ್ಸು, ಆರೋಗ್ಯ, ಕೋವಿಡ್ ಗೆ ಲಸಿಕೆ ಸಿಗುವ ಬಗ್ಗೆ ಅನಿಶ್ಚಿತತೆ ಇವೆಲ್ಲವುಗಳಿಂದ ತಾವು ರಾಜಕೀಯವನ್ನು ತೊರೆಯುವ ನಿರ್ಧಾರ ಮಾಡುವುದಾಗಿ ಹೇಳಿದಂತೆ ರಜನಿಕಾಂತ್ ಅವರ ಆ ಬರಹವಿದೆ.

ಈ ಬರಹದ ಬಗ್ಗೆ ರಜನಿಕಾಂತ್ ಅವರಾಗಲಿ, ಅವರ ನಿಕಟವರ್ತಿಗಳಾಗಲಿ ಖಚಿತಪಡಿಸಿಲ್ಲ. ಇದುವರೆಗೆ ರಜನಿಕಾಂತ್ ಸರ್ ಅವರು ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ ಎಂದು ರಜನಿಕಾಂತ್ ಅವರ ಸಾರ್ವಜನಿಕ ಸಂಪರ್ಕ ಅಧಿಕಾರಿ ರಿಯಾಝ್ ಕೆ ಅಹ್ಮದ್ ಹೇಳಿದ್ದಾರೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿ ರಜನಿ ಮಕ್ಕಲ್ ಮಂಡ್ರಮ್(ಆರ್ ಎಂಎಂ) ಕಾರ್ಯಾಲಯವನ್ನು ಸಂಪರ್ಕಿಸಿದಾಗ, ಈಗ ಕೇಳಿಬರುತ್ತಿರುವ ವದಂತಿಗಳ ಬಗ್ಗೆ ಸದ್ಯದಲ್ಲಿಯೇ ಅಧಿಕೃತ ಮಾಹಿತಿ ಹೊರಬೀಳಲಿದೆ. ಅದು ದೀಪಾವಳಿಗೆ ಮುನ್ನವೇ ಅಥವಾ ನಂತರವೇ ಎಂಬುದು ಈಗಿರುವ ವಿಷಯ ಎಂದು ಹೇಳಿದರು.

1990ರ ದಶಕದಿಂದ ರಾಜಕೀಯಕ್ಕೆ ಸೇರುವ ಇಂಗಿತವನ್ನು ರಜನಿಕಾಂತ್ ಅವರು ವ್ಯಕ್ತಪಡಿಸುತ್ತಲೇ ಇದ್ದರು. ಅದನ್ನು 2017ರ ಡಿಸೆಂಬರ್ 31ರಂದು ಅಧಿಕೃತವಾಗಿ ಘೋಷಿಸಿದರು. ತಮಿಳು ನಾಡಿನಲ್ಲಿ ರಾಜಕೀಯ ವ್ಯವಸ್ಥೆ ಕುಸಿದಿರುವಾಗ ತಾವು ಪಕ್ಷವನ್ನು ಆರಂಭಿಸಿ ರಾಜಕೀಯಕ್ಕೆ ಸೇರಿ ಜನರ ಸೇವೆ ಮಾಡುತ್ತೇನೆ ಎಂದು ರಜನಿಕಾಂತ್ ಹೇಳಿದ್ದರು.

ರಜನಿಕಾಂತ್ ಅವರ ಅಭಿಮಾನಿಗಳು ಅವರನ್ನು ಉತ್ತೇಜಿಸುವ ಚಟುವಟಿಕೆಗಳನ್ನು ನಡೆಸುತ್ತಿದ್ದರೆ, ಅವರು 2019 ರ ಸಂಸತ್ ಚುನಾವಣೆಗೆ ಅಥವಾ ಕಳೆದ ಡಿಸೆಂಬರ್‌ನಲ್ಲಿ ನಡೆದ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಮಯಕ್ಕೆ ಧುಮುಕಲಿಲ್ಲ. ಮುಂಬರುವ ವರ್ಷದ ತಮಿಳು ನಾಡು ವಿಧಾನಸಭೆ ಚುನಾವಣೆಯತ್ತ ತಮ್ಮ ಗಮನ ಎಂದು ಇಷ್ಟು ದಿನ ಹೇಳಿಕೊಂಡು ಬರುತ್ತಿದ್ದರು.ಆದರೆ ಮತದಾನಕ್ಕೆ ಕೆಲವೇ ತಿಂಗಳುಗಳಿರುವಾಗ, ಅವರ ಅನುಯಾಯಿಗಳು ಭರವಸೆ ಕಳೆದುಕೊಳ್ಳುತ್ತಿದ್ದಾರೆ. ಈಗ ರಜನಿಕಾಂತ್ ಅವರು ರಾಜಕೀಯವನ್ನೇ ತೊರೆಯಲಿದ್ದಾರೆ ಎಂದು ಹೇಳುತ್ತಿರುವಾಗ ಅವರ ಅಭಿಮಾನಿಗಳು ಅದಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com