ಉದ್ಯಮ, ಶಿಕ್ಷಣ ಕ್ಷೇತ್ರದ ಸ್ವಯಂಸೇವಕರ ಜತೆ ಸೇರಿ ಎನ್ಐಸಿ ಆರೋಗ್ಯ ಸೇತು ಆಪ್ ಅಭಿವೃದ್ಧಿಪಡಿಸಿದೆ: ಸರ್ಕಾರ

ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್ಐಸಿ) ಉದ್ಯಮ ಮತ್ತು ಶಿಕ್ಷಣ ಕ್ಷೇತ್ರದ ಸ್ವಯಂಸೇವಕರ ಜೊತೆ ಸೇರಿಕೊಂಡು ಆರೋಗ್ಯ ಸೇತು ಆಪ್ ನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಸರ್ಕಾರ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್ಐಸಿ) ಉದ್ಯಮ ಮತ್ತು ಶಿಕ್ಷಣ ಕ್ಷೇತ್ರದ ಸ್ವಯಂಸೇವಕರ ಜೊತೆ ಸೇರಿಕೊಂಡು ಆರೋಗ್ಯ ಸೇತು ಆಪ್ ನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಸರ್ಕಾರ ತಿಳಿಸಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ(ಮೀಟಿ) ಈ ಸಂಬಂಧ ಮಾಹಿತಿ ಕೇಂದ್ರ ಆಯೋಗ ಮುಖ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಹೊರಡಿಸಿರುವ ಶೋಕಾಸ್ ನೊಟೀಸ್ ಗೆ ಸಂಬಂಧಪಟ್ಟಂತೆ ಹೇಳಿಕೆ ಹೊರಡಿಸಿದೆ. ಆರೋಗ್ಯ ಸೇತು ಆಪ್ ನ್ನು ಅಭಿವೃದ್ಧಿಪಡಿಸಿದ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ಕೇಳಿಬಂದ ಆರೋಪಕ್ಕೆ ಸಂಬಂಧಪಟ್ಟಂತೆ ಈ ಸ್ಪಷ್ಟನೆ ನೀಡಿದೆ.

ಆರೋಗ್ಯ ಸೇತು ಆ್ಯಪ್ ಅನ್ನು ಉದ್ಯಮ ಮತ್ತು ಅಕಾಡೆಮಿಗಳ ಸ್ವಯಂಸೇವಕರ ಸಹಯೋಗದೊಂದಿಗೆ ಎನ್ಐಸಿ ಅತ್ಯಂತ ಪಾರದರ್ಶಕ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ವರದಿಗಳ ಪ್ರಕಾರ, ಆ್ಯಪ್ ರಚನೆಯ ಬಗ್ಗೆ ಯಾವುದೇ ಮಾಹಿತಿ ಏಕೆ ಇಲ್ಲ ಎಂದು ವಿವರಿಸಲು ಸಿಐಸಿ ಎನ್ಐಸಿಯನ್ನು ಕೇಳಿದೆ, ಆದರೆ ಆಪ್ ನ್ನು ಎನ್‌ಐಸಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ ಸಾರ್ವಜನಿಕವಾಗಿ ಬಿಟ್ಟಿದೆ ಎಂದು ವೆಬ್‌ಸೈಟ್ ಉಲ್ಲೇಖಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com