ಜಂಗಲ್ ರಾಜ್ ಕ ಯುವರಾಜ್' ಪ್ರಧಾನಿ ಮೋದಿ ಹೇಳಿಕೆಗೆ ತೇಜಸ್ವಿ ಯಾದವ್ ತಿರುಗೇಟು

ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರ, ನಿರುದ್ಯೋಗ ಮತ್ತು ವಲಸೆ ಕಾರ್ಮಿಕರ ಸಮಸ್ಯೆಯಂತಹ ವಾಸ್ತವ ಸಂಗತಿಗಳನ್ನು ಮರೆಮಾಚಿ ಅನಗತ್ಯ ವಿಷಯಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಬಿಹಾರದಲ್ಲಿ ವಿರೋಧ ಪಕ್ಷ ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಆರೋಪಿಸಿದ್ದಾರೆ.
ತೇಜಸ್ವಿ ಯಾದವ್
ತೇಜಸ್ವಿ ಯಾದವ್

ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರ, ನಿರುದ್ಯೋಗ ಮತ್ತು ವಲಸೆ ಕಾರ್ಮಿಕರ ಸಮಸ್ಯೆಯಂತಹ ವಾಸ್ತವ ಸಂಗತಿಗಳನ್ನು ಮರೆಮಾಚಿ ಅನಗತ್ಯ ವಿಷಯಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಬಿಹಾರದಲ್ಲಿ ವಿರೋಧ ಪಕ್ಷ ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಆರೋಪಿಸಿದ್ದಾರೆ.

ನಿನ್ನೆ ಪ್ರಧಾನಿಯವರು ಬಿಹಾರದಲ್ಲಿ ಎರಡನೇ ಸುತ್ತಿನ ಪ್ರಚಾರದ ವೇಳೆ ತೇಜಸ್ವಿ ಯಾದವ್ ಅವರನ್ನು ಜಂಗಲ್ ರಾಜ್ ಕ ಯುವರಾಜ್ ಎಂದು ಸಂಬೋಧಿಸಿದ್ದ ಬಗ್ಗೆ ಪ್ರತಿಕ್ರಿಯೆ ನೀಡಿ, ಮೋದಿಯವರು ದೇಶದ ಪ್ರಧಾನ ಮಂತ್ರಿ, ಅವರು ಏನು ಬೇಕಾದರೂ ಹೇಳಬಹುದು, ಅದಕ್ಕೆ ಪ್ರತಿಕ್ರಿಯೆ ನೀಡಲು ನನಗೆ ಇಷ್ಟವಿಲ್ಲ. ಆದರೆ ಅವರು ಬಂದಿದ್ದು ಬಿಹಾರಕ್ಕೆ. ಇಲ್ಲಿಗೆ ಬಂದು ಚುನಾವಣೆ ಸಂದರ್ಭದಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ, ನಿರುದ್ಯೋಗ ಸಮಸ್ಯೆ, ಇನ್ನೂ ಅನೇಕ ಪ್ರಮುಖ ವಿಷಯಗಳ ಬಗ್ಗೆ ಮಾತನಾಡಬಹುದಾಗಿತ್ತು. ಅದು ಬಿಟ್ಟು ಅನಗತ್ಯ ವಿಷಯಗಳನ್ನು ಮಾತನಾಡಿ ಹೋಗಿದ್ದಾರೆ ಎಂದರು.

ಬಿಜೆಪಿ ವಿಶ್ವದಲ್ಲಿ ಅತಿದೊಡ್ಡ ಪಕ್ಷವಾಗಿದೆ. 30 ಹೆಲಿಕಾಪ್ಟರ್ ಬಳಸುತ್ತಿದ್ದಾರೆ. ಅಂತಹ ಪಕ್ಷದ ಪ್ರಧಾನಿ ಹೀಗೆ ಮಾತನಾಡಿದರೆ ದೇಶದ ಜನರು ತೀರ್ಮಾನ ಮಾಡುತ್ತಾರೆ. ಅವರು ಬಡತನ, ನಿರುದ್ಯೋಗ ಸಮಸ್ಯೆ, ರೈತರು, ಕಾರ್ಖಾನೆಗಳ ಸಮಸ್ಯೆಗಳ ಬಗ್ಗೆ ಮಾತನಾಡಬಹುದಿತ್ತಲ್ಲವೇ ಎಂದು 31 ವರ್ಷದ ತೇಜಸ್ವಿ ಯಾದವ್ ಕೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com