ನವೆಂಬರ್ 3-6ರವರೆಗೆ ಮೊದಲ ಹಂತದ ಮಲಬಾರ್ ನೌಕಾ ಸಮರಾಭ್ಯಾಸ

ವಿಶಾಖಪಟ್ಟಣಂ ಕರಾವಳಿಯ ಬಂಗಾಳ ಕೊಲ್ಲಿಯಲ್ಲಿ ಮುಂದಿನ ತಿಂಗಳು ಮೂರರಿಂದ ಆರರವರೆಗೂ ಭಾರತ,ಅಮೆರಿಕಾ, ಜಪಾನ್ ಮತ್ತ ಆಸ್ಟ್ರೇಲಿಯಾದ ನೌಕಪಡೆಗಳ ಮೊದಲ ಹಂತದ ಮಲಬಾರ್ ನೌಕ ಸಮರಾಭ್ಯಾಸ ನಡೆಯಲಿದೆ ಎಂದು ಶುಕ್ರವಾರ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ನೌಕಪಡೆ
ಭಾರತೀಯ ನೌಕಪಡೆ

ನವದೆಹಲಿ: ವಿಶಾಖಪಟ್ಟಣಂ ಕರಾವಳಿಯ ಬಂಗಾಳ ಕೊಲ್ಲಿಯಲ್ಲಿ ಮುಂದಿನ ತಿಂಗಳು ಮೂರರಿಂದ ಆರರವರೆಗೂ ಭಾರತ,ಅಮೆರಿಕಾ, ಜಪಾನ್ ಮತ್ತ ಆಸ್ಟ್ರೇಲಿಯಾದ ನೌಕಪಡೆಗಳ ಮೊದಲ ಹಂತದ ಮಲಬಾರ್ ನೌಕ ಸಮರಾಭ್ಯಾಸ ನಡೆಯಲಿದೆ ಎಂದು ಶುಕ್ರವಾರ ಅಧಿಕಾರಿಗಳು ತಿಳಿಸಿದ್ದಾರೆ.

ನವೆಂಬರ್ 17ರಿಂದ 20ರವರೆಗೂ ಅರಬಿಯನ್ ಸಮುದ್ರದಲ್ಲಿ ಎರಡನೇ ಹಂತದ ಸಮರಾಭ್ಯಾಸ ನಡೆಯಿದೆ ಎಂದು ಅವರು ಹೇಳಿದ್ದಾರೆ. ಈ ಸಮರಾಭ್ಯಾಸದಲ್ಲಿ ಆಸ್ಟ್ರೇಲಿಯಾ ಕೂಡಾ ಪಾಲ್ಗೊಳ್ಳಲಿದೆ ಎಂಬುದನ್ನು ಕಳೆದ ವಾರ ಭಾರತ ಪ್ರಕಟಿಸಿತ್ತು.

ಮೇಲ್ಮೈ, ಜಲಾಂತರ್ಗಾಮಿ ವಿರೋಧಿ ಮತ್ತು ವಾಯು-ವಿರೋಧಿ ಯುದ್ಧ ಕಾರ್ಯಾಚರಣೆಗಳು ಸೇರಿದಂತೆ ಸಂಕೀರ್ಣ ಮತ್ತು ಸುಧಾರಿತ ನೌಕಾ ಸಮರಾಭ್ಯಾಸಕ್ಕೆ ಮೊದಲ ಹಂತ ಸಾಕ್ಷಿಯಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಾರತ ನೌಕಪಡೆ ಮತ್ತು ಅಮೆರಿಕಾ ನೌಕಪಡೆಯಿಂದ ಭಾರತೀಯ ಸಮುದ್ರದಲ್ಲಿ 1992ರಲ್ಲಿ ದ್ವಿಪಕ್ಷೀಯ ಸಮರಾಭ್ಯಾಸ ಆರಂಭವಾಯಿತು. 2015ರಲ್ಲಿ ಜಪಾನ್ ಈ ಕಾರ್ಯಾಚರಣೆಯ ಶಾಶ್ವತ ಸದಸ್ಯ ರಾಷ್ಟ್ರವಾಯಿತು.

ಈ ಸಮರಾಭ್ಯಾಸದಲ್ಲಿ ಭಾರತೀಯ ನೌಕಪಡೆಯ ವಿಧ್ವಂಸಕ ರಣವಿಜಯ್, ಫ್ರಿಗೇಟ್ ಶಿವಾಲಿಕ್, ಆಫ್-ಶೋರ್ ಪೆಟ್ರೋಲ್ ಹಡಗು ಸುಕನ್ಯಾ, ಫ್ಲೀಟ್ ಸಪೋರ್ಟ್ ಹಡಗು ಶಕ್ತಿ ಮತ್ತು ಜಲಾಂತರ್ಗಾಮಿ ಸಿಂಧುರಾಜ್,  ಸುಧಾರಿತ ಜೆಟ್ ಟ್ರೈನರ್ ಹಾಕ್,  ಪೆಟ್ರೋಲ್ ವಿಮಾನ ಪಿ -8 ಐ, ಡಾರ್ನಿಯರ್ ಕಡಲ ವಿಮಾನ ಸೇರಿದಂತೆ ಹಲವಾರು ಹೆಲಿಕಾಪ್ಟರ್ ಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com