ಪ್ರಿಯತಮೆಗೆ ಚೂರಿ ಇರಿದ ಯುವಕ

ಪಾಗಲ್ ಪ್ರೇಮಿಯೊಬ್ಬ ಪ್ರಿಯತಮೆಗೆ ಚೂರಿ ಇರಿದಿರುವ ಘಟನೆ ಜಿಲ್ಲೆಯ ಇಲೆಂಡು ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ.
ಚಾಕು ಇರಿತ (ಸಾಂದರ್ಭಿಕ ಚಿತ್ರ)
ಚಾಕು ಇರಿತ (ಸಾಂದರ್ಭಿಕ ಚಿತ್ರ)

ಖಮ್ಮಮ್: ಪಾಗಲ್ ಪ್ರೇಮಿಯೊಬ್ಬ ಪ್ರಿಯತಮೆಗೆ ಚೂರಿ ಇರಿದಿರುವ ಘಟನೆ ಜಿಲ್ಲೆಯ ಇಲೆಂಡು ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ.

ಆರೋಪಿಯು ಆಕೆಯನ್ನು ಚಾಕುವಿನಿಂದ ಇರಿದು ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದಾನೆ. ಯುವಕನನ್ನು ಸಂದೀಪ್ ಎಂದು ಗುರುತಿಸಲಾಗಿದೆ.  ನಗರದ ಹೊರವಲಯದಲ್ಲಿ ಮಾತುಕತೆಯ ಸೋಗಿನಲ್ಲಿ ಯುವತಿಯನ್ನು ಆಹ್ವಾನಿಸಿ ಚಾಕುವಿನಿಂದ ಹಲ್ಲೆ ಮಾಡಿ ತೀವ್ರವಾಗಿ ಗಾಯಗೊಳಿಸಿದ್ದ ಆತ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಾಗ ಆತನನ್ನು ಪೊಲೀಸರು ಹಿಡಿದಿದ್ದಾರೆ.

ಮೃತ ಯುವತಿಯನ್ನು ಸೌಜನ್ಯ ಎಂದು ಗುರುತಿಸಲಾಗಿದ್ದು, ಕಳೆದ 6 ತಿಂಗಳಿನಿಂದ ನಡೆಯುತ್ತಿದ್ದ ಪ್ರೇಮದ ಬಗ್ಗೆ  ಇಬ್ಬರ ಮನೆಯಲ್ಲೂ ತಿಳಿದಿತ್ತು. ಆದರೆ ಸೌಜನ್ಯ  ಸಂದೀಪ್ ಇಂದ ದೂರವಿರುತ್ತಿದ್ದರಿಂದ ಆಕ್ರೋಶಗೊಂಡ ಪಾಗಲ್ ಪ್ರೇಮಿ ಆಕೆಯನ್ನು ಮಾತನಾಡಿಸಲು ನಿರ್ಜನ ಪ್ರದೇಶಕ್ಕೆ ಆಗಮಿಸುವಂತೆ ತಿಳಿಸಿದ್ದಾನೆ. 

ಈ ವೇಳೆ ಚಾಕುವಿನಿಂದ ಇರಿದಿದ್ದಾನೆ. ಶರ್ಟ್ ಮೇಲೆ ರಕ್ತದ ಕಲೆಗಳನ್ನು ಕಂಡ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com