ಬಾಹ್ಯ ಸಮಸ್ಯೆಗಳಿಗೂ ಚೀನಾದೊಂದಿಗೆ ಮಿಲಿಟರಿ ಮಾತುಕತೆಗೂ ಯಾವುದೇ ಸಂಬಂಧವಿಲ್ಲ: ಭಾರತ

ಚೀನಾದೊಂದಿಗಿನ ಗಡಿ ವಿವಾದಕ್ಕೆ ಸಂಬಂಧಪಟ್ಟಂತೆ ನಡೆಯುತ್ತಿರುವ ಮಿಲಿಟರಿ ಮಟ್ಟದ ಮಾತುಕತೆಗೂ ಇತ್ತೀಚೆಗೆ ನಡೆದ ಭಾರತ-ಅಮೆರಿಕ ನಡುವಣ 2+2 ಮಾತುಕತೆಗೂ ಯಾವುದೇ ಸಂಬಂಧವಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಚೀನಾದೊಂದಿಗಿನ ಗಡಿ ವಿವಾದಕ್ಕೆ ಸಂಬಂಧಪಟ್ಟಂತೆ ನಡೆಯುತ್ತಿರುವ ಮಿಲಿಟರಿ ಮಟ್ಟದ ಮಾತುಕತೆಗೂ ಇತ್ತೀಚೆಗೆ ನಡೆದ ಭಾರತ-ಅಮೆರಿಕ ನಡುವಣ 2+2 ಮಾತುಕತೆಗೂ ಯಾವುದೇ ಸಂಬಂಧವಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.

ಚೀನಾದೊಂದಿಗೆ ಪೂರ್ವ ಲಡಾಕ್ ನ ಗಡಿ ವಿವಾದಕ್ಕೆ ಸಂಬಂಧಪಟ್ಟಂತೆ ನಡೆಯಲಿರುವ ಮುಂದಿನ ಮಟ್ಟದ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಯ ಬಗ್ಗೆ ಮಾತನಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ಅನುರಾಗ್ ಶ್ರೀವಾಸ್ತವ, ಎರಡೂ ಕಡೆಯವರು ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಮಾತುಕತೆ ನಡೆಸಲು ಒಪ್ಪಿಕೊಂಡಿದ್ದು, ಸೇನೆ ಹಿಂಪಡೆಯಲು ಪರಸ್ಪರ ಒಪ್ಪಿಗೆಯ ಮಾರ್ಗಗಳ ಮೂಲಕ ಆದಷ್ಟು ಶೀಘ್ರವೇ  ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಚೀನಾದೊಂದಿಗೆ ಮುಂದಿನ ಮಟ್ಟದ ಮಾತುಕತೆಗೆ ಸಂಬಂಧಪಟ್ಟಂತೆ ಯಾವಾಗ ಆ ಬಗ್ಗೆ ಮಾಹಿತಿ ಹಂಚಿಕೊಳ್ಳಬಹುದು ಎಂದು ನೋಡುತ್ತಿದ್ದೇವೆ. ಈ ಗಡಿ ವಿವಾದ ಕುರಿತು ನಡೆಯುತ್ತಿರುವ ಮಾತುಕತೆಗೂ ಹೊರಗಿನ ವಿಷಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನಿನ್ನೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವಾಗ ಹೇಳಿದರು.

ಚೀನಾ ಭಾರತ ಗಡಿ ವಿವಾದ ಮತ್ತು ಇತ್ತೀಚೆಗೆ ಭಾರತ-ಅಮೆರಿಕ ನಡುವೆ ಏರ್ಪಟ್ಟ 2+2 ಮಾತುಕತೆಯ ವೇಳೆ ಮೂಲಕ ವಿನಿಮಯ ಮತ್ತು ಸಹಕಾರ ಒಪ್ಪಂದ(ಬಿಇಸಿಎ)ದಿಂದಾಗಿ ಮುಂದಿನ ಸುತ್ತಿನ ಮಿಲಿಟರಿ ಮಾತುಕತೆ ವಿಳಂಬವಾಗುತ್ತಿದೆಯೇ ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ್ದಕ್ಕೆ ಈ ರೀತಿ ಉತ್ತರಿಸಿದರು.

ಕಳೆದ ಮಂಗಳವಾರ ಭಾರತ ಮತ್ತು ಅಮೆರಿಕ ಅತ್ಯುನ್ನತ ಮಿಲಿಟರಿ ತಂತ್ರಜ್ಞಾನ, ವರ್ಗೀಕೃತ ಸ್ಯಾಟಲೈಟ್ ದತ್ತಾಂಶ ಮತ್ತು ಸೂಕ್ಷ್ಮ ಮಾಹಿತಿ ವಿನಿಮಯ ಕುರಿತ ಬಿಇಸಿಎಗೆ ಸಹಿ ಹಾಕಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com