ಬೆಳಗಾವಿ ವಿವಾದ: ಕರ್ನಾಟಕ ರಾಜ್ಯೋತ್ಸವವನ್ನು 'ಕಪ್ಪು ದಿನ'ವಾಗಿ ಆಚರಿಸಲು ಮಹಾರಾಷ್ಟ್ರ ಸಚಿವರುಗಳ ನಿರ್ಧಾರ 

ನಾಳೆ ನವೆಂಬರ್ 1ರಂದು, ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ಇತ್ತ ಕನ್ನಡಿಗರು ಸಿದ್ದತೆ ನಡೆಸುತ್ತಿದ್ದರೆ ಅತ್ತ ಮಹಾರಾಷ್ಟ್ರ ಸರ್ಕಾರ ಕರ್ನಾಟಕ ವಿರೋಧಿ ಧೋರಣೆ ತಳೆದಿದೆ.
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ

ಬೆಳಗಾವಿ: ನಾಳೆ ನವೆಂಬರ್ 1ರಂದು, ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ಇತ್ತ ಕನ್ನಡಿಗರು ಸಿದ್ದತೆ ನಡೆಸುತ್ತಿದ್ದರೆ ಅತ್ತ ಮಹಾರಾಷ್ಟ್ರ ಸರ್ಕಾರ ಕರ್ನಾಟಕ ವಿರೋಧಿ ಧೋರಣೆ ತಳೆದಿದೆ.

ಮುಂಬೈಯಲ್ಲಿ ಕಳೆದ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಮಹಾರಾಷ್ಟ್ರ ಸರ್ಕಾರ ತನ್ನ ಎಲ್ಲಾ ಸಚಿವರುಗಳಿಗೆ ತಮ್ಮ ಕೈಗಳಿಗೆ ಕಪ್ಪು ರಿಬ್ಬನ್ ನ್ನು ಕಟ್ಟಿ ಕಪ್ಪು ದಿನವಾಗಿ ನಾಳೆ ಆಚರಿಸುವಂತೆ ಕರೆ ನೀಡಿದೆ. ಈ ಮೂಲಕ ಬೆಳಗಾವಿಯಲ್ಲಿರುವ ಮಹಾರಾಷ್ಟ್ರ ಪರ ಗುಂಪುಗಳಿಗೆ ಬೆಂಬಲ ಸೂಚಿಸಿದೆ.

ಮಹಾರಾಷ್ಟ್ರದ ಲೋಕೋಪಯೋದಿ ಸಚಿವ ಹಾಗೂ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಗಳ ಸಚಿವ ಏಕನಾಥ್ ಶಿಂಧೆ, ಸಚಿವ ಸಂಪುಟ ಸಭೆಯಲ್ಲಿ ಮಾತನಾಡಿ, ನಾಳೆ ಎಲ್ಲಾ ಸಚಿವರು ತಮ್ಮ ಕೈಗೆ ಕಪ್ಪು ಬ್ಯಾಂಡ್ ನ್ನು ಕಟ್ಟಿ ಬೆಳಗಾವಿಯಲ್ಲಿ ಮರಾಠಿಗರ ಹೋರಾಟವನ್ನು ಬೆಂಬಲಿಸಬೇಕೆಂದು ಕರೆ ನೀಡಿದ್ದಾರೆ. ಕರ್ನಾಟಕ-ಮಹಾರಾಷ್ಟ್ರ ವಿವಾದದ ಮತ್ತೊಬ್ಬ ಸಚಿವ ಚುಗನ್ ಬುಜ್ ಬಲ್, ಶಿಂಧೆಯವರ ಪ್ರಸ್ತಾಪಕ್ಕೆ ಬೆಂಬಲ ಸೂಚಿಸಿದ್ದಾರೆ.

ಶಿವಸೇನೆ-ಎನ್ ಸಿಪಿ-ಕಾಂಗ್ರೆಸ್ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ಎಲ್ಲಾ ಸಚಿವರು ನಾಳೆ ನವೆಂಬರ್ 1 ಕರ್ನಾಟಕ ರಾಜ್ಯೋತ್ಸವ ದಿನ ಕಪ್ಪು ಪಟ್ಟಿ ಧರಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com