ಭಾರತ ಚುನಾವಣಾ ಆಯೋಗ ಬಿಜೆಪಿಯ ಶಾಖೆ: ಶಿವಸೇನೆ ಸಂಚಲನ ಆರೋಪ

ಶಿವಸೇನೆ ನಾಯಕ ಸಂಜಯ್ ರಾವತ್  ಚುನಾವಣಾ ಆಯೋಗದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಚುನಾವಣಾ ಆಯೋಗ ಬಿಜೆಪಿಯ ಒಂದು ಶಾಖೆ ಎಂದು ಲೇವಡಿ ಮಾಡಿದ್ದಾರೆ. 
ಸಂಜಯ್ ರಾವತ್
ಸಂಜಯ್ ರಾವತ್

ಮುಂಬೈ: ಶಿವಸೇನೆ ನಾಯಕ ಸಂಜಯ್ ರಾವತ್  ಚುನಾವಣಾ ಆಯೋಗದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಚುನಾವಣಾ ಆಯೋಗ ಬಿಜೆಪಿಯ ಒಂದು ಶಾಖೆ ಎಂದು ಲೇವಡಿ ಮಾಡಿದ್ದಾರೆ. 

ಬಿಹಾರ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ  ಬಿಜೆಪಿ ಉಚಿತ ಕೋವಿಡ್ ಲಸಿಕೆ ನೀಡುವ ಭರವಸೆ ನೀಡಿದೆ. ಆದರೆ, ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಚುನಾವಣಾ ಆಯೋಗ ಘೋಷಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಂಜಯ್ ರಾವತ್ ‘ಭಾರತ ಚುನಾವಣಾ ಆಯೋಗ’ ಬಿಜೆಪಿಯ ಒಂದು ಶಾಖೆ. ಇಂತಹ ಸಂಸ್ಥೆಯಿಂದ ಹೆಚ್ಚಿನದ್ದನ್ನು ನಿರೀಕ್ಷಿಸಲಾಗದು  ಎಂದು ಹೇಳಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆ ಭಾಗವಾಗಿ ಮೊದಲ ಹಂತದ ಮತದಾನ ಈಗಾಗಲೇ ಮುಗಿದಿದ್ದು. ಈ ಕುರಿತು   ಮಾತನಾಡಿದ ಸಂಜಯ್ ರಾವತ್ ಆರ್‌ ಜೆ ಡಿ ಮುಖ್ಯಸ್ಥ,  ಪ್ರತಿಪಕ್ಷಗಳ ಮಹಾ ಮೈತ್ರಿಕೂಟದ ಮುಖ್ಯಮಂತ್ರಿ  ಅಭ್ಯರ್ಥಿ ತೇಜಸ್ವಿ ಯಾದವ್, ರಾಜ್ಯ ಮುಖ್ಯಮಂತ್ರಿಯಾದರೆ ಯಾರೂ ಆಶ್ಚರ್ಯಪಡಬೇಕಿಲ್ಲ  ಅವರು ಹೇಳಿದರು... ‘ಒಬ್ಬ ಯುವಕ... ಯಾರ ಬೆಂಬಲವೂ ಇಲ್ಲ... ತಂದೆ ಜೈಲಿನಲ್ಲಿದ್ದಾರೆ. 

ಸಿಬಿಐ, ಐಟಿ ಇಲಾಖೆಗಳು ಅವರ ಹಿಂದೆ ಬಿದ್ದಿವೆ ಈ ಎಲ್ಲ ಅಡೆ ತಡೆಗಳ ಹೊರತಾಗಿಯೂ, ಅವರು ನಾಳೆ ಬಿಹಾರ ಮುಖ್ಯಮಂತ್ರಿಯಾದರೆ ಯಾರು ಆಶ್ಚರ್ಯಪಡಬೇಕಿಲ್ಲ. ಅವರು ಬಹು ಮತಗಳಿಸಲಿದ್ದಾರೆ ಎಂದು ಕಂಡು  ಬರುತ್ತಿದೆ. ಅಷ್ಟೇ ಅಲ್ಲ ಚುನಾವಣೆಯ ವೇಳೆ ಬಿಹಾರದಲ್ಲಿ ಏನು ನಡೆಯಲಿದೆ ಎಂಬುದು ಎಲ್ಲರಿಗೂ ಗೊತ್ತು ಎಂದು  ತಿಳಿಸಿದ್ದಾರೆ. ಚುನಾವಣಾ ಆಯೋಗ ಬಿಜೆಪಿಗೆ ದೊಡ್ಡ  ರಕ್ಷಣೆ ಕಲ್ಪಿಸುತ್ತಿದೆ ಎಂದು ಆಯೋಗ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕಿ ಪಂಕಜಾ ಮುಂಡೆ ಶಿವಸೇನೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ವದಂತಿಗಳ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ರಾವತ್   ಸ್ಪಷ್ಟಪಡಿಸಿದ್ದಾರೆ. ಬಿಹಾರ ವಿಧಾನಸಭೆ ಚುನಾವಣೆಯ  ಮೊದಲ ಹಂತದಲ್ಲಿ 71 ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಶೇ 55.69 ರಷ್ಟು ಮತದಾನವಾಗಿದೆ.  

ಎರಡನೇ ಹಂತಕ್ಕೆ ನವೆಂಬರ್ 3 ರಂದು, ಮೂರನೇ ಹಂತಕ್ಕೆ ನವೆಂಬರ್ 7 ರಂದು ಮತದಾನ ನಡೆಯಲಿದೆ. ಮತಗಳ ಎಣಿಕೆ ನವೆಂಬರ್ 10 ರಂದು ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com