ಲಸಿಕೆ ಭರವಸೆ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗದು: ಆಯೋಗ ಕೊಟ್ಟ ಕಾರಣ ಹೀಗಿದೆ...

ಬಿಹಾರ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಬಿಜೆಪಿ ಲಸಿಕೆ ಭರವಸೆ ನೀಡಿರುವುದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗುವುದಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಬಿಜೆಪಿ ಲಸಿಕೆ ಭರವಸೆ ನೀಡಿರುವುದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗುವುದಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ. 

ಆರ್ ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ಅವರ ಊರಿಗೆ ಪ್ರತಿಕ್ರಿಯೆ ನೀಡಿರುವ ಚುನಾವಣಾ ಆಯೋಗ, ಲಸಿಕೆ ಭರವಸೆಯ ವಿಷಯದಲ್ಲಿ  ಈ ರೀತಿ ಹೇಳಿದೆ. 

ಈ ಭರವಸೆ ತಾರತಮ್ಯದಿಂದ ಕೂಡಿದೆ ಹಾಗೂ ಕೇಂದ್ರ ಸರ್ಕಾರದ ಅಧಿಕಾರದ ದುರ್ಬಳಕೆ ಎಂದು ಗೋಖಲೆಯವರು ಹೇಳಿದ್ದರು. 
 
ಈ ಸಂಬಂಧ ಕೆಲವು ಮಾರ್ಗಸೂಚಿಗಳನ್ನು ಉಲ್ಲೇಖಿಸಿರುವ ಚುನಾವಣಾ ಆಯೋಗ, ಸಂವಿಧಾನದ ಮೂಲಕ ಸ್ಥಾಪಿತವಾಗಿರುವ ರಾಜ್ಯ ನೀತಿಯಲ್ಲಿನ ನಿರ್ದೇಶನ ತತ್ವಗಳು, ಸರ್ಕಾರ ಅಥವಾ ಆಡಳಿತಕ್ಕೆ ಪ್ರಜೆಗಳಿಗಾಗಿ ಹಲವು ವಿಧಗಳ ಜನಕಲ್ಯಾಣ ಕ್ರಮಗಳನ್ನು ಜಾರಿಗೊಳಿಸುವುದಕ್ಕೆ ಆದೇಶಿಸುತ್ತದೆ. ಆದ್ದರಿಂದ ಈ ರೀತಿಯ ಜನಕಲ್ಯಾಣ ಯೋಜನೆಯನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಈ ರೀತಿಯ ಭರವಸೆ ನೀಡುವುದು ನೀತಿ ಸಂಹಿತೆಯ ಉಲ್ಲಂಘನೆಯಾಗುವುದಿಲ್ಲ ಎಂದು ಆಯೋಗ ತಿಳಿಸಿದೆ. 

ಜಾರಿಗೆ ತರಲು ಸಾಧ್ಯವಿರುವ ಯೋಜನೆಗಳ ಮೂಲಕವಷ್ಟೇ ಮತದಾರರ ವಿಶ್ವಾಸವನ್ನು ಬೇಡುವುದಕ್ಕೆ ಸಾಧ್ಯವಿದೆ ಎಂದು ಮತ್ತೊಂದು ಉಲ್ಲೇಖದಲ್ಲಿ ಆಯೋಗ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com