ದೀಪಾವಳಿಗೂ ಮುನ್ನ 25,000 ಟನ್ ಈರುಳ್ಳಿ ಆಮದಿಗೆ ಭಾರತದ ನಿರ್ಧಾರ 

ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಕೊರತೆ ನೀಗಿಸಲು ಹಾಗೂ ಬೆಲೆ ಏರಿಕೆ ತಡೆಗಟ್ಟಲು ಭಾರತ ದೀಪಾವಳಿಗೂ ಮುನ್ನ 25,000 ಟನ್ ಈರುಳ್ಳಿ ಆಮದು ಮಾಡಿಕೊಳ್ಳಲು ನಿರ್ಧರಿಸಿದೆ. 
ದೀಪಾವಳಿಗೂ ಮುನ್ನ 25,000 ಟನ್ ಈರುಳ್ಳಿ ಆಮದಿಗೆ ಭಾರತದ ನಿರ್ಧಾರ
ದೀಪಾವಳಿಗೂ ಮುನ್ನ 25,000 ಟನ್ ಈರುಳ್ಳಿ ಆಮದಿಗೆ ಭಾರತದ ನಿರ್ಧಾರ

ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಕೊರತೆ ನೀಗಿಸಲು ಹಾಗೂ ಬೆಲೆ ಏರಿಕೆ ತಡೆಗಟ್ಟಲು ಭಾರತ ದೀಪಾವಳಿಗೂ ಮುನ್ನ 25,000 ಟನ್ ಈರುಳ್ಳಿ ಆಮದು ಮಾಡಿಕೊಳ್ಳಲು ನಿರ್ಧರಿಸಿದೆ. 

ಈಗಾಗಲೇ 7,000 ಟನ್ ಗಳಷ್ಟು ಈರುಳ್ಳಿಯನ್ನು ಆಮದು ಮಾಡಿಕೊಳ್ಳಲಾಗಿದ್ದು, ಇನ್ನೂ 25,000 ಟನ್ ಗಳಷ್ಟು ಈರುಳ್ಳಿ ದೀಪಾವಳಿಗೂ ಮುನ್ನ ಆಮದು ಮಾಡಲಾಗುತ್ತದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ. 

ಈ ನಡುವೆ ಭೂತಾನ್ ನಿಂದ ಆಲೂಗಡ್ಡೆಯನ್ನೂ ಆಮದು ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕಳೆದ 3 ದಿನಗಳಲ್ಲಿ ಪ್ರತಿ ಕೆ.ಜಿಗೆ 65 ರೂಪಾಯಿಯಾಗಿದೆ. ಬೆಲೆ ನಿಯಂತ್ರಣಕ್ಕೆ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಂಡಿದೆ ಎಂದು ಪಿಯೂಷ್ ಗೋಯಲ್ ಹೇಳಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com