ಮಹಿಳೆಯರು ಪುರುಷರಿಗೆ ಸಮಾನರಲ್ಲ: ಸ್ತ್ರೀಯರು ಕೆಲಸ ಪ್ರಾರಂಭಿಸಿದ್ದೇ ಮೀಟೂ ಅಭಿಯಾನಕ್ಕೆ ಕಾರಣ- ಮುಖೇಶ್ ಖನ್ನಾ

ಮಹಿಳೆಯರು ಕೆಲಸಕ್ಕಾಗಿ ಮನೆಯಿಂದ ಹೊರಬಂದ ನಂತರ ಮೀಟೂ ಅಭಿಯಾನ ಆರಂಭವಾಯಿತು ಎಂದು ಹೇಳಿಕೆ ನೀಡಿರುವ ನಟ ಮುಖೇಶ್ ಖನ್ನಾ ವಿರುದ್ಧ ನೆಟ್ಟಿಗರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮುಖೇಶ್ ಖನ್ನಾ
ಮುಖೇಶ್ ಖನ್ನಾ

ಮುಂಬೈ: ಮಹಿಳೆಯರು ಕೆಲಸಕ್ಕಾಗಿ ಮನೆಯಿಂದ ಹೊರಬಂದ ನಂತರ ಮೀಟೂ ಅಭಿಯಾನ ಆರಂಭವಾಯಿತು ಎಂದು ಹೇಳಿಕೆ ನೀಡಿರುವ ನಟ ಮುಖೇಶ್ ಖನ್ನಾ ವಿರುದ್ಧ ನೆಟ್ಟಿಗರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ತನುಶ್ರೀ ದತ್ತ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳ ಆರಂಭಿಸಿದ ನಂತರ 2018ರಲ್ಲಿ ಲೈಂಗಿಕ ಕಿರುಕುಳದ ವಿರುದ್ಧ ದೇಶದಲ್ಲಿ ಮೀಟೂ ಅಭಿಯಾನ ಆರಂಭವಾಗಿತ್ತು.ಆಗಿನಿಂದಲೇ ಬಾಲಿವುಡ್ ನಲ್ಲಿನ ಅನೇಕ ಮಹಿಳೆಯರು ಅಪಾದಿತ ದುಷ್ಕರ್ಮಿಗಳನ್ನು ಹೆಸರಿಸಿದ್ದಾರೆ.

ಮಹಿಳೆಯರು ಕೆಲಸ ಆರಂಭಿಸಿದ್ದೇ ಮೀಟೂ ಅಭಿಯಾನ ಆರಂಭಕ್ಕೆ ಕಾರಣ, ಇಂದು ಮಹಿಳೆಯರು ಪುರುಷರೊಂದಿಗೆ ಸಮಾನರಲ್ಲ ಎಂದು ಮುಖೇಶ್ ಖನ್ನಾ ನೀಡಿರುವ ಹೇಳಿಕೆಯ ವಿಡಿಯೋ ವೈರಲ್ ಆಗಿದೆ.

ಶಕ್ತಿಮಾನ್ ಸೂಪರ್ ಹಿರೋ ನೀಡಿರುವ ಹೇಳಿಕೆ ಅನೇಕ ಟ್ವಿಟಿಗರನ್ನು ಕೆರಳಿಸಿದೆ. 5-6 ವರ್ಷ ವಯಸ್ಸಿನ ಮಕ್ಕಳು ಏಕೆ ಅತ್ಯಾಚಾರಕ್ಕೊಳಗಾಗುತ್ತಾರೆ ಎಂದು ಕೆಲವರು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com