ಮುಂಬೈ ಮೆಟ್ರೋ ಪಿಲ್ಲರ್ ಗೆ ಕ್ರೇನ್ ಡಿಕ್ಕಿ: ಓರ್ವ ಮಹಿಳೆ ಸಾವು; ಇಬ್ಬರಿಗೆ ಗಾಯ! 

ಮುಂಬೈ ಮೆಟ್ರೋ ಪಿಲ್ಲರ್ ಗೆ ಕ್ರೇನ್ ಡಿಕ್ಕಿ ಹೊಡೆದ ಪರಿಣಾಮ ನಡೆದ ಅಪಘಾತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದರೆ, ಇಬ್ಬರಿಗೆ ಗಾಯಗಳಾಗಿವೆ. 
ಮುಂಬೈ ಮೆಟ್ರೋ ಪಿಲ್ಲರ್ ಗೆ ಕ್ರೇನ್ ಡಿಕ್ಕಿ: ಓರ್ವ ಮಹಿಳೆ ಸಾವು; ಇಬ್ಬರಿಗೆ ಗಾಯ!
ಮುಂಬೈ ಮೆಟ್ರೋ ಪಿಲ್ಲರ್ ಗೆ ಕ್ರೇನ್ ಡಿಕ್ಕಿ: ಓರ್ವ ಮಹಿಳೆ ಸಾವು; ಇಬ್ಬರಿಗೆ ಗಾಯ!

ಮುಂಬೈ: ಮುಂಬೈ ಮೆಟ್ರೋ ಪಿಲ್ಲರ್ ಗೆ ಕ್ರೇನ್ ಡಿಕ್ಕಿ ಹೊಡೆದ ಪರಿಣಾಮ ನಡೆದ ಅಪಘಾತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದರೆ, ಇಬ್ಬರಿಗೆ ಗಾಯಗಳಾಗಿವೆ. 

ಶನಿವಾರ ಬೆಳಿಗ್ಗೆ ಈ ಘಟನೆ ಸಂಭವಿಸಿದೆ. ಜೊಗೇಶ್ವರಿಯಿಂದ ಬಾಂದ್ರಾಗೆ ತೆರಳುತ್ತಿದ್ದ ಮೆಟ್ರೋ ಕ್ರೇನ್ ನಿಯಂತ್ರಣ ತಪ್ಪಿ ಅಂಧೇರಿ ಗುಂದಾವಲಿ ಬಳಿ ಮೆಟ್ರೋ ಪಿಲ್ಲರ್ ಗೆ ಡಿಕ್ಕಿ ಹೊಡೆದಿದೆ.  

ಡಿಕ್ಕಿ ಹೊಡೆದ ರಭಸಕ್ಕೆ ಕ್ರೇನ್ ಎರಡು ತುಂಡಾಗಿದ್ದು, ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆ ಕ್ರೇನ್ ನ ಹಿಂಬದಿಯ ಚಕ್ರಗಳ ಅಡಿಯಲ್ಲಿ ಸಿಲುಕಿದ್ದು ಸಾವನ್ನಪ್ಪಿದ್ದಾರೆ, ಹತ್ತಿರದಲ್ಲೇ ಇದ್ದ ಇಬ್ಬರಿಗೆ ತೀವ್ರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ರೇನ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com