ಅನೈತಿಕ ಸಂಬಂಧ: ಸೊಸೆ, ಪ್ರಿಯಕರನ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಕೊಂದರು!

ಅನೈತಿಕ ಸಂಬಂಧ ಹೊಂದಿದ್ದ ಸೊಸೆಯನ್ನು ಮತ್ತು ಆಕೆಯ ಪ್ರಿಯಕರನ ತಲೆ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಅನೈತಿಕ ಸಂಬಂಧ ಹೊಂದಿದ್ದ ಸೊಸೆಯನ್ನು ಮತ್ತು ಆಕೆಯ ಪ್ರಿಯಕರನ ತಲೆ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. 

ಮಹಾರಾಷ್ಟ್ರದ ಜಲ್ನಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 32 ವರ್ಷದ ಮಾರಿಯಾ ಮತ್ತು 27 ವರ್ಷದ ಅರ್ಬಕ್ ಭಾಗ್ವತ್ ರನ್ನು ಟ್ರ್ಯಾಕ್ಟರ್ ಹತ್ತಿಸಿ ಕೊಲೆ ಮಾಡಲಾಗಿದೆ. ಈ ಸಂಬಂಧ ಮಾವ ಬತ್ವೆಲ್ ಲಾಲ್ಜಾರೆ ಮತ್ತು ಲಾಲ್ಜಾರೆ ಮಗ ವಿಕಾಸ್ ನನ್ನು ಪೊಲೀಸರು ಬಂಧಿಸಿದ್ದಾರೆ. 

ಮಾರಿಯಾ ಲಾಲ್ಜಾರೆ ಪತಿ 10 ವರ್ಷದ ಹಿಂದೆ ಮೃತಪಟ್ಟಿದ್ದರು. ಹೀಗಾಗಿ ಮಾರಿಯಾ ವಿವಾಹಿತ ಅರ್ಬಕ್ ಜೊತೆ ಅಕ್ರಮ ಸಂಬಂಧ ಹೊಂದಿದ್ದರು. ಇದನ್ನು ಮಾವನ ಮನೆಯವರು ವಿರೋಧಿಸಿದ್ದರು. ಅಲ್ಲದೆ ಹಲವು ಬಾರಿ ಭಾಗ್ವತ್ ಗೆ ಬೆದರಿಕೆಯನ್ನು ಹಾಕಿದ್ದರು. ಈ ಸಂಬಂಧ ಭಾಗ್ವತ್ ಬಾತ್ವೆಲ್ ಮತ್ತು ವಿಖಾಸ್ ವಿರುದ್ಧ ಅಂಬಾಡ್ ಪೊಲೀಸ್ ಠಾಣೆಯಲ್ಲಿ ದೂರ ದಾಖಲಿಸಿದ್ದರು.

ಇದಾದ ಬಳಿಕ ಮಾರಿಯಾ ಮತ್ತು ಭಾಗ್ವತ್ ಕಳೆದ ಮಾರ್ಚ್ 30ರಂದು ಓಡಿ ಹೋಗಿ ಗುಜರಾತ್ ನಲ್ಲಿ ನೆಲೆಸಿದ್ದರು. ಈ ವಿಷಯ ತಿಳಿದ ಬತ್ವೆಲ್ ಲಾಲ್ಜಾರೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಪ್ರಕರಣ ಸಂಬಂಧ ಪೊಲೀಸರು ಏಪ್ರಿಲ್ 22ರಂದು ಗುಜರಾತ್ ನಿಂದ ಹಿಂದಕ್ಕೆ ಕರೆಸಿದ್ದರು. ನಂತರ ಇಬ್ಬರು ಒಟ್ಟಿಗೆ ನೆಲೆಸಿದ್ದರು. 

ಅಕ್ಟೋಬರ್ 28ರಂದು ಮಾರಿಯಾ ಮತ್ತು ಭಾಗ್ವತ್ ಬೈಕ್ ನಲ್ಲಿ ತೆರಳುತ್ತಿದ್ದಾಗ ವಿಕಾಸ್ ಬೈಕ್ ಗೆ ಗುದ್ದಿ ಅವರ ಮೇಲೆ ಟ್ರ್ಯಾಕ್ಟರ್ ಹತ್ತಿಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದರು ಇಬ್ಬರು ಸಾವನ್ನಪ್ಪಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com