ಭಾರತ ಅಕ್ರಮವಾಗಿ ಎಲ್‌ಎಸಿಯನ್ನು ಅತಿಕ್ರಮಣ ಮಾಡಿತ್ತು: ಚೀನಾ

ದೆಹಲಿಯಲ್ಲಿರುವ ಚೀನಾ ರಾಯಭಾರ ಕಚೇರಿ ಮಂಗಳವಾರ ಎಲ್‌ಎಸಿಯಲ್ಲಿನ ಪಾಂಗೊಂಗ್ ತ್ಸೊ ಪರಿಸ್ಥಿತಿ ಕುರಿತು ಪ್ರಕಟಣೆ ನೀಡಿದ್ದು, ಆಗಸ್ಟ್ 29 ಮತ್ತು 30ರ ಮಧ್ಯರಾತ್ರಿ ಭಾರತೀಯ ಸೈನ್ಯ ಚೀನಾ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ಯಥಾಸ್ಥಿತಿಯನ್ನು ಬದಲಾಯಿಸಿದೆ ಎಂದು ಆರೋಪಿಸಿದೆ.
ಲಡಾಕ್ ಗಡಿಯಲ್ಲಿ ಭಾರತೀಯ ಯೋಧ ಕಾವಲು ಕಾಯುತ್ತಿರುವುದು
ಲಡಾಕ್ ಗಡಿಯಲ್ಲಿ ಭಾರತೀಯ ಯೋಧ ಕಾವಲು ಕಾಯುತ್ತಿರುವುದು

ನವದೆಹಲಿ: ದೆಹಲಿಯಲ್ಲಿರುವ ಚೀನಾ ರಾಯಭಾರ ಕಚೇರಿ ಮಂಗಳವಾರ ಎಲ್‌ಎಸಿಯಲ್ಲಿನ ಪಾಂಗೊಂಗ್ ತ್ಸೊ ಪರಿಸ್ಥಿತಿ ಕುರಿತು ಪ್ರಕಟಣೆ ನೀಡಿದ್ದು, ಆಗಸ್ಟ್ 29 ಮತ್ತು 30ರ ಮಧ್ಯರಾತ್ರಿ ಭಾರತೀಯ ಸೈನ್ಯ ಚೀನಾ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ಯಥಾಸ್ಥಿತಿಯನ್ನು ಬದಲಾಯಿಸಿದೆ ಎಂದು ಆರೋಪಿಸಿದೆ.

ಭಾರತೀಯ ಪಡೆಗಳು ಪಾಂಗೊಂಗ್ ತ್ಸೊದ ದಕ್ಷಿಣ ದಂಡೆಯಲ್ಲಿ ಎಲ್‌ಎಸಿಯನ್ನು ಅಕ್ರಮವಾಗಿ ಅತಿಕ್ರಮಿಸಿದ್ದವು. ಚೀನಾ ಭಾರತಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ಮುಂಚೂಣಿ ಸೈನಿಕರನ್ನು ನಿಯಂತ್ರಿಸಲು ಮತ್ತು ನಿಗ್ರಹಿಸಲು ಒತ್ತಾಯಿಸಿತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಭಾರತದ ಈ ಕ್ರಮವು ಚೀನಾದ ಪ್ರಾದೇಶಿಕ ಸಾರ್ವಭೌಮತ್ವವನ್ನು ತೀವ್ರವಾಗಿ ಉಲ್ಲಂಘಿಸಿದೆ, ಉಭಯ ದೇಶಗಳ ನಡುವಿನ ಒಪ್ಪಂದಗಳು, ಪ್ರೋಟೋಕಾಲ್ ಗಳು ಮತ್ತು ಒಮ್ಮತವನ್ನು ಗಂಭೀರವಾಗಿ ಉಲ್ಲಂಘಿಸಿದೆ ಚೀನಾ ದೂರಿದೆ.

ಚೀನಾ-ಭಾರತ ಗಡಿ ಪ್ರದೇಶಗಳಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಭಾರತ ಏನು ಮಾಡಿದೆ ಎಂಬುದು ನೆಲದ ಪರಿಸ್ಥಿತಿಯನ್ನು ಸರಾಗಗೊಳಿಸುವ ಮತ್ತು ತಣ್ಣಗಾಗಿಸಲು ಎರಡೂ ಕಡೆಯವರು ಮಾಡಿದ ಪ್ರಯತ್ನಗಳಿಗೆ ವಿರುದ್ಧವಾಗಿದೆ ಮತ್ತು ಚೀನಾ ಇದನ್ನು ತೀವ್ರವಾಗಿ ವಿರೋಧಿಸುತ್ತದೆ ಎಂದು ರಾಯಭಾರ ಕಚೇರಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com