ಸಿಆರ್‌ಪಿಎಫ್ ಇತಿಹಾಸದಲ್ಲೇ ಮೊದಲು! ಶ್ರೀನಗರ ವಲಯ ಮುಖಸ್ಥರಾಗಿ ಮಹಿಳಾ ಐಪಿಎಸ್ ಅಧಿಕಾರಿ ನೇಮಕ

ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದ ಉಗ್ರರ ದಾಳಿ ಪೀಡಿತ ಪ್ರದೇಶದಲ್ಲಿಒಂದಾದ ಶ್ರೀನಗರದ ಕೇಂದ್ರ ರಿಸರ್ವ್ ಪೊಲೀಸ್ ಪಡೆ ಶ್ರೀನಗರ ವಲಯದ ಇನ್ಸ್ಪೆಕ್ಟರ್ ಜನರಲ್ ಆಗಿ ಮಹಿಳಾ ಐಪಿಎಸ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. 
ಐಪಿಎಸ್ ಅಧಿಕಾರಿ ಚಾರು ಸಿನ್ಹಾ
ಐಪಿಎಸ್ ಅಧಿಕಾರಿ ಚಾರು ಸಿನ್ಹಾ

ಶ್ರೀನಗರ: ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದ ಉಗ್ರರ ದಾಳಿ ಪೀಡಿತ ಪ್ರದೇಶದಲ್ಲಿಒಂದಾದ ಶ್ರೀನಗರದ ಕೇಂದ್ರ ರಿಸರ್ವ್ ಪೊಲೀಸ್ ಪಡೆ ಶ್ರೀನಗರ ವಲಯದ ಇನ್ಸ್ಪೆಕ್ಟರ್ ಜನರಲ್ ಆಗಿ ಮಹಿಳಾ ಐಪಿಎಸ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. 

1996 ರ ಬ್ಯಾಚ್ ತೆಲಂಗಾಣ ಕೇಡರ್‌ನ ಐಪಿಎಸ್ ಅಧಿಕಾರಿ ಚಾರು ಸಿನ್ಹಾ ಅವರನ್ನು ಈಗ ಶ್ರೀನಗರ ವಲಯದ ಸಿಆರ್‌ಪಿಎಫ್ ಇನ್ಸ್‌ಪೆಕ್ಟರ್ ಜನರಲ್ ಆಗಿ ನೇಮಕವಾಗಿದ್ದಾರೆ. ಈಕೆ ಈ ಹಿಂದೆ ಸಿಆರ್‌ಪಿಎಫ್‌ನಲ್ಲಿ ಬಿಹಾರ ವಲಯದ ಐಜಿಯಾಗಿ ನಕ್ಸಲರೊಂದಿಗೆ ವ್ಯವಹರಿಸಿದ ಅನುಭವವನ್ನೂ ಹೊಂದಿದ್ದಾರೆ. 

ಅವರ ನಾಯಕತ್ವದಲ್ಲಿ, ವಿವಿಧ ನಕ್ಸಲ್ ವಿರೋಧಿ ಕಾರ್ಯಾಚರಣೆಗಳನ್ನು ನಡೆಸಲಾಗಿತ್ತು. ನಂತರ, ಅವರನ್ನು ಸಿಆರ್‌ಪಿಎಫ್‌ನ ಐಜಿಯಾಗಿ ಜಮ್ಮುವಿಗೆ ವರ್ಗಾಯಿಸಲಾಗಿತ್ತು. ಅಲ್ಲಿ ಅವರು ದೀರ್ಘಅವಧಿಗೆ ಕೆಲಸ ಮಾಡಿದ್ದಾರೆ. ಸೋಮವಾರ ಅವರನ್ನು ಶ್ರೀನಗರ ವಲಯದ ಐಜಿಯನ್ನಾಗಿ ವರ್ಗಾಯಿಸಿ ಆದೇಶಿಸಲಾಗಿದೆ.  2005 ರಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದ ಈ ವಲಯವು ಐಜಿ ಮಟ್ಟದಲ್ಲಿ ಮಹಿಳಾ ಅಧಿಕಾರಿಯನ್ನು ಎಂದೂ ಕಂಡಿರಲಿಲ್ಲ. ಈ ವಲಯವು ಭಯೋತ್ಪಾದನಾ-ವಿರೋಧಿ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿದೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ಭಾರತೀಯ ಸೇನೆಯೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತದೆ.

"ಶ್ರೀನಗರ ವಲಯವು ಶ್ರೀನಗರ (ಜಮ್ಮು ಕಾಶ್ಮೀರ)ನ ಶಿರದಂತಿದೆ.  ಇದು 2005 ರಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಶ್ರೀನಗರ ವಲಯವು ಜಮ್ಮು ಕಾಶ್ಮೀರ ಬುಡ್ಗಮ್, ಗಂದರ್ಬಾಲ್, ಮತ್ತು ಶ್ರೀನಗರ ಮತ್ತು ಕೇಂದ್ರ ಪ್ರಾಂತ್ಯದ ಲಡಾಖ್ ನ ಮೂರು ಜಿಲ್ಲೆಗಕಾರ್ಯ ವ್ಯಾಪ್ತಿಯನ್ನು ಹೊಂದಿದೆ" ಎಂದು ಸಿಆರ್‌ಪಿಎಫ್ ತಿಳಿಸಿದೆ.

"ಇದು 2 ಶ್ರೇಣಿಗಳು, 22 ಕಾರ್ಯನಿರ್ವಾಹಕ ಘಟಕಗಳು ಮತ್ತು  3 ಮಹಿಳಾ ಕಂಪನಿಗಳನ್ನು ಒಳಗೊಂಡಿದೆ. ಇದರ ಹೊರತಾಗಿ, ಶ್ರೀನಗರ ವಲಯವು ಗ್ರೂಪ್ ಸೆಂಟರ್-ಶ್ರೀನಗರದ ಮೇಲೆ ಆಡಳಿತಾತ್ಮಕ ನಿಯಂತ್ರಣವನ್ನು ಹೊಂದಿದೆ" ಎಂದು ಅರೆಸೈನಿಕ ಪಡೆ ಹೇಳಿಕೆ ವಿವರಿಸಿದೆ. . ಸಿನ್ಹಾ ಈ ವಲಯದಲ್ಲಿ ತೊಡಗಿರುವ ಎಲ್ಲಾ ಕಾರ್ಯಾಚರಣೆಗಳ ಮುಖ್ಯಸ್ಥರಾಗಿರುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com