2 ವಾರಗಳ ಕಾಲ ಒಪಿಡಿಗೆ ರೋಗಿಗಳ ಪ್ರವೇಶ ಸ್ಥಗಿತಗೊಳಿಸಿದ ಏಮ್ಸ್ 

ಕೋವಿಡ್-19 ಹೊರತಾದ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯ ಏಮ್ಸ್ ಆಸ್ಪತ್ರೆಯ ಅಧಿಕಾರಿಗಳು ಒಪಿಡಿಗೆ ರೋಗಿಗಳನ್ನು ದಾಖಲಿಸಿಕೊಳ್ಳುವುದನ್ನು 2 ವಾರಗಳ ಕಾಲ ನಿರ್ಬಂಧಿಸಿದ್ದಾರೆ.
ಏಮ್ಸ್
ಏಮ್ಸ್

ನವದೆಹಲಿ: ಕೋವಿಡ್-19 ಹೊರತಾದ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯ ಏಮ್ಸ್ ಆಸ್ಪತ್ರೆಯ ಅಧಿಕಾರಿಗಳು ಒಪಿಡಿಗೆ ರೋಗಿಗಳನ್ನು ದಾಖಲಿಸಿಕೊಳ್ಳುವುದನ್ನು 2 ವಾರಗಳ ಕಾಲ ನಿರ್ಬಂಧಿಸಿದ್ದಾರೆ.

ಒಪಿಡಿ ಸೇವೆಗಳು ಮಾತ್ರ ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ಏಮ್ಸ್ ನ ವೈದ್ಯ ಅಧೀಕ್ಷಕ ಡಾ.ಡಿ.ಕೆ ಶರ್ಮಾ ಹೇಳಿದ್ದಾರೆ.

ಒಳರೋಗಿಗಳ ಬೆಡ್ ಗಳನ್ನು ತುರ್ತು ಅಗತ್ಯವಿರುವ ರೋಗಿಗಳಿಗೆ ಲಭ್ಯವಿರುವಂತೆ ಮಾಡುವುದಕ್ಕಾಗಿ ತಾತ್ಕಾಲಿಕವಾಗಿ 2 ವಾರಗಳ ಕಾಲ ಒಪಿಡಿಗೆ ರೋಗಿಗಳನ್ನು ದಾಖಲಿಸಿಕೊಳ್ಳುವುದನ್ನು ಎಲ್ಲಾ ಕೇಂದ್ರಗಳಲ್ಲಿಯೂ ಸ್ಥಗಿತಗೊಳಿಸಲಾಗಿದೆ ಎಂದು ಏಮ್ಸ್ ತಿಳಿಸಿದೆ.

ತುರ್ತು ಅಗತ್ಯವಿರುವ ರೋಗಿಗಳು, ಒಳರೋಗಿ ವೈದ್ಯಕೀಯ ಸೇವೆಗಳು ಅಗತ್ಯವಿರುವವರನ್ನು ಒಪಿಡಿಗೆ ಸೇರಿಸಿಕೊಳ್ಳಲಾಗುವುದು ಎಂದು ಆಸ್ಪತ್ರೆ ಸ್ಪಷ್ಟಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com