ಭಾರತದಲ್ಲಿ ಮುಂದುವರೆದ ಕೊರೋನಾ ಆರ್ಭಟ: ಒಂದೇ ದಿನ 78,357 ಕೇಸ್, 1045 ಸಾವು

ಕೊರೋನಾ ವೈರಸ್ ಪ್ರಕರಣಗಳ ಏರುಗತಿ ಮುಂದುವರೆದಿದ್ದು, ಬುಧವಾರ ಒಂದೇ ದಿನ 78,357 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಈ ಮೂಲಕ ಕೊರೋನಾ ಸೋಂಕಿತರ ಸಂಖ್ಯೆ 37,69,524ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೊರೋನಾ ವೈರಸ್ ಪ್ರಕರಣಗಳ ಏರುಗತಿ ಮುಂದುವರೆದಿದ್ದು, ಬುಧವಾರ ಒಂದೇ ದಿನ 78,357 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಈ ಮೂಲಕ ಕೊರೋನಾ ಸೋಂಕಿತರ ಸಂಖ್ಯೆ 37,69,524ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ. 

ಇದೇ ವೇಳೆ ಕೊರೋನಾ ವೈರಸ್ ಕಳೆದ 24 ಗಂಟೆಗಳಲ್ಲಿ 1045 ಮಂದಿಯನ್ನು ಬಲಿಪಡೆದುಕೊಂಡಿದ್ದು, ಇದರೊಂದಿಗೆ ಈ ವರೆಗೂ ಮಹಾಮಾರಿ ವೈರಸ್'ಗೆ 66,333 ಮಂದಿ ಬಲಿಯಾಗಿದ್ದಾರೆ. 

ಇನ್ನು 37,69,524 ಮಂದಿ ಸೋಂಕಿತರ ಪೈಕಿ 29,019,09 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ದೇಶದಲ್ಲಿನ್ನೂ 8,01,282 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. 

ಮಹಾರಾಷ್ಟ್ರದಲ್ಲಿ 15,765 ಹೊಸ ಪ್ರಕಱಣಗಳು ದಾಖಲಾಗುವುದರೊಂದಿಗೆ ಸೋಂಕಿತರ ಸಂಖ್ಯೆ 8 ಲಕ್ಷ ಗಡಿದಾಟಿದೆ. ದೆಹಲಿಯಲ್ಲಿ 2 ತಿಂಗಳ ಬಳಿಕ ಕೊರೋನಾ ವೈರಸ್ ಪ್ರಕರಣಗಳು ಮತ್ತೊಮ್ಮೆ ಹೆಚ್ಚಳಗೊಂಡಿದ್ದು, 2,312 ಹೊಸ ಪ್ರಕರಣಗಳು ದಾಖಲಾಗಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com